ಕರಾವಳಿ

ಸರ್ವೆಯರ್ಗಳ ಮುಷ್ಕರ ಅಂತ್ಯ: ಕಂದಾಯ ಅಧಿಕಾರಿಗಳ ಸಭೆ ಕರೆದ ಶಾಸಕ ಅಶೋಕ್ ರೈ | ಬಗರ್‌’ಹುಕುಂ ಹಕ್ಕು ಪತ್ರ- ಫ್ಲಾಟಿಂಗ್ ಕಡತಗಳ ಶೀಘ್ರವಿಲೇವಾರಿಗೆ ಸೂಚನೆ

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ  ಕಂದಾಯ ಇಲಾಖೆಯ ಸರ್ವೆಯರ್‌ಗಳ ಕಳೆದ ನಾಲ್ಕು ತಿಂಗಳಿಂದ ಮುಷ್ಕರದಲ್ಲಿದ್ದು ಈ ಕಾರಣಕ್ಕೆ ಅನೇಕ ಕಡತಗಳು ವಿಲೇವಾರಿಯಾಗದೇ ಬಾಕಿ ಇದ್ದು ಅವುಗಳ ವಿಲೇವಾರಿಯಾಗಿಸುವ ಬಗ್ಗೆ ಶಾಸಕ ಅಶೋಕ್ ರೈ ಅವರು ಸೋಮವಾರ ತಮ್ಮ ಕಚೇರಿಯಲ್ಲಿ ಕಂದಾಯ ಅಧಿಕಾರಿಗಳ ಸಭೆಯನ್ನು ಕರೆದು ಚರ್ಚೆ ನಡೆಸಿ ಕಡತಗಳ ಶೀಘ್ರ ಇತ್ಯರ್ಥಕ್ಕೆ ಸೂಚನೆ ನೀಡಿದ್ದಾರೆ.

maithri

ಸುಮಾರು 1000 ಬಗರ್‌ಹುಕುಂ ಹಕ್ಕು ಪತ್ರ ಕಡತಗಳು ಬಾಕಿ ಇದೆ. ಕನ್ವಶನ್, 11ಇ ಖಾತೆಗಳನ್ನು 45 ದಿನದೊಳಗೆ ವಿಲೇವಾರಿ ಮಾಡುವುದಾಗಿ ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ. ಬಗರ್‌ಹುಕುಂ ಹಕ್ಕು ಪತ್ರವನ್ನು ಮುಂದಿನ ಮೂರು ತಿಂಗಳೊಳಗೆ ಪೂರ್ಣಗೊಳಿಸುವುದಾಗಿ ಒಪ್ಪಿಕೊಂಡಿದ್ದಾರೆ. 312 ಕಡತಗಳು ಹೊರತುಪಡಿಸಿ ಉಳಿದ ಎಲ್ಲಾ ಫ್ಲಾಟಿಂಗ್ ಕಡತಗಳು ತಹಶಿಲ್ದಾರ್ ಕಚೇರಿಯಿಂದ ಸರ್ವೆ ಇಲಾಖೆಗೆ ಫುಶ್ ಆಗಿದ್ದು ಅವುಗಳನ್ನು ಹಂತ ಹಂತವಾಗಿ ವಿಲೇವಾರಿ ಮಾಡುವಂತೆ ಸೂಚನೆಯನ್ನು ನೀಡಿದ್ದಾರೆ.

ಫ್ಲಾಟಿಂಗ್ ಅರ್ಜಿ ಹಾಕಿದವರ ಕಡತಗಳು ಅಟೋಮ್ಯಾಟಿಕ್ ಆಗಿ ಸರ್ವೆ ಇಲಾಖೆಗೆ ಪುಶಫ್ ಆಗಲಿದ್ದು ಅವುಗಳನ್ನು ಒಂದೊಂದಾಗಿ ವಿಲೇವಾರಿ ಮಾಡಲಾಗುತ್ತದೆ. ಸರ್ವೆಯರ್‌ಗಳ ಮುಷ್ಕರದಿಂದ ಸಾರ್ವಜನಿಕರಿಗೆ ತೊಂದರೆಯಾಗಿರುವ ಬಗ್ಗೆ ನನ್ನ ಗಮನಕ್ಕೆ ಬಂದಿದೆ ಇದನ್ನು ಸರಿದೂಗಿಸಲು ಸರ್ವೆ ಇಲಾಖೆಗೆ ಕಂದಾಯ ಇಲಾಖಾ ಸಚಿವರು ಆದೇಶ ಮಾಡಿದ್ದ ಹಿನ್ನೆಲೆಯಲ್ಲಿ ಕಡತ ವಿಲೇವಾರಿ ಸಮರೋಪಾದಿಯಲ್ಲಿ ನಡೆಯಲಿದೆ.

ಲೈಸೆನ್ಸ್‌ಡ್ ಸರ್ವೆಗಳ ವೇತನ ಹೆಚ್ಚಳಕ್ಕೆ ಕ್ರಮ

ಪುತ್ತೂರಿನಲ್ಲಿ 15 ಮಂದಿ ಸರಕಾರಿ ಸರ್ವೆಯರ್‌ಗಳಿದ್ದಾರೆ, ಉಳಿದಂತೆ ಲೈಸೆನ್ಸ್‌ಡ್ ಸರ್ವೆಯರ್‌ಗಳಿದ್ದಾರೆ. ಅವರ ವೇತನ ಹೆಚ್ಚಳವನ್ನು ಮಾಡುವಂತೆ ನನ್ನಲ್ಲಿ ಬೇಡಿಕೆ ಇಟ್ಟಿದ್ದಾರೆ. ಇವರ ಬೇಡಿಕೆಯನ್ನು ಕಂದಾಯ ಸಚಿವರ ಗಮನಕ್ಕೆ ತಂದು ಪರಿಹರಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಲಾಗುತ್ತದೆ. ಹೆಚ್ಚುವರಿ ಲೈಸೆನ್ಸ್‌ಡ್ ಸರ್ವೆಯರ್‌ಗಳನ್ನು ನೇಮಕಾತಿ ಮಾಡುವ ಮೂಲಕ ಪುತ್ತೂರು ವಿಧಾನಸಭಾ ಕ್ಷೇತ್ರದ ಕಂದಾಯ ಕಡತಗಳ ವಿಲೇವಾರಿ ಮಾಡಿಸಲಾಗುತ್ತದೆ. ಹೆಚ್ಚುವರಿ ಸರ್ವೆಯರ್‌ಗಳ ನೇಮಕಾತಿ ಮಾಡುವಂತೆಯೂ ಸರಕಾರದ ಮೇಲೆ ಒತ್ತಡವನ್ನು ತರುವುದಾಗಿ ಶಾಸಕರು ತಿಳಿಸಿದರು.

ಸಾರ್ವಜನಿಕರು ಸಹಕರಿಸಿ

ನಿಮ್ಮ ಕಡತ ವಿಲೇವಾರಿ ಮಾಡುವ ವೇಳೆ ಭೂಮಿಯ ಅಳತೆಗೆ ಸರ್ವೆಯರ್‌ಗಳು ಬಂದಾಗ ಅವರ ಜೊತೆ ಸಹಕರಿಸಿ ಅಳತೆ ಮಾಡುವಲ್ಲಿ ನೀವು ಸಹಕಾರ ನೀಡಬೇಕು. ವ್ಯರ್ಥ ಕಾರಣ ಹೇಳಿ ಅವರನ್ನು ಹಿಂದಕ್ಕೆ ಕಳಿಸುವ ಕೆಲಸವನ್ನು ಯಾರೂ ಮಾಡಬಾರದು. ಎಲ್ಲರು ಕೈಜೋಡಿಸಿದರೆ ಕಂದಾಯ ಇಲಾಖೆಯ ಕಡತಗಳು ಶೀಘ್ರ ವಿಲೇವಾರಿಯಾಗಲು ಸಹಕಾರಿಯಾಗುತ್ತದೆ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಫ್ಲಾಟಿಂಗ್ ವಿಚಾರದಲ್ಲಿ ಆತಂಕ ಬೇಡ

ಫ್ಲಾಟಿಂಗ್ ಅರ್ಜಿ ನೀಡಿದ್ದಲ್ಲಿ ಅಂಥವರ ಕಡತಗಳು ಅಟೋಮ್ಯಾಟಿಕ್ ಆಗಿ ವಿಲೇವಾರಿಯಾಗಲಿದೆ. ಈಗಾಗಲೇ ಶೇ. 80 ಕಡತಗಳು ತಹಶಿಲ್ದಾರ್ ಲಾಗಿನ್‌ನಿಂದ ಸರ್ವೆ ಇಲಾಖೆಗೆ ಪುಶಫ್ ಆಗಿದ್ದು ಒಂದೊಂದಾಗಿ ಕಡತಗಳ ವಿಲೇವಾರಿ ಮಾಡುವಂತೆ ಸೂಚನೆ ನೀಡಿದ್ದೇನೆ. ಹಲವು ಮಂದಿ ಫ್ಲಾಟಿಂಗ್‌ಗೆ ಅರ್ಜಿ ಕೊಟ್ಟು ಅನೇಕ ವರ್ಷಗಳೇ ಕಳೆದಿದೆ ಯಾರೂ ಆತಂಕ ಪಡಬೇಕಿಲ್ಲ ಎಲ್ಲವೂ ಸುಗಮವಾಗಿ ವಿಲೇವಾರಿಯಾಗಲಿದೆ ಎಂದು ಶಾಸಕರು ತಿಳಿಸಿದರು.

ಸಭೆಯಲ್ಲಿ ಡಿಡಿಎಲ್‌ಆರ್ ಪುಷ್ಪರಾಜ್, ಎಡಿಎಲ್‌ಆರ್, ಸರ್ವೆಯರ್‌ಗಳು, ಲೈಸೆನ್ಸ್ಡ್ ಸರ್ವೆಯರ್‌ಗಳು ಉಪಸ್ಥಿತರಿದ್ದರು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ನಾರಾವಿಯಲ್ಲಿ ಸರ್ವಧರ್ಮೀಯರ ಸಮಾವೇಶ | ದೇಹಕ್ಕೆ ಮಾತ್ರ ಸಾವು, ಆತ್ಮನಿಗೆ ಸಾವಿಲ್ಲ: ಲಕ್ಷ್ಮೀಸೇನ ಭಟ್ಟಾರಕ ಸ್ವಾಮೀಜಿ

ಸತ್ಯ, ಅಹಿಂಸೆ, ಬದುಕು ಮತ್ತು ಬದುಕಲು ಬಿಡು. ಪರಸ್ಪರೋಪಗ್ರಹೋಜೀವಾನಾಂ – ಇದು ಜೈನಧರ್ಮದ ಸಾರ.…