tamanvi
ಕರಾವಳಿ

ಮಂಗಳೂರು: ಕಾಂಪೌಂಡ್ ಗೋಡೆ ಕುಸಿತ: ಇಬ್ಬರು ಬಾಲಕಿಯರು ಸೇರಿ ಮೂವರು ಮೃತ್ಯು!

D_shiva_bhat

ಈ ಸುದ್ದಿಯನ್ನು ಶೇರ್ ಮಾಡಿ

ಮಂಗಳೂರು: ಭಾರೀ ಮಳೆಯಿಂದ ಕಾಂಪೌಂಡ್ ಗೋಡೆ ಕುಸಿದು ಬಾಡಿಗೆ ಮನೆಗಳಿಗೆ ಹಾನಿಯಾದ ಘಟನೆ ಬುಧವಾರ ಬೆಳಗಿನ ಜಾವ ಕಂಕನಾಡಿ ಪೊಲೀಸ್ ಠಾಣೆ ವ್ಯಾಪ್ತಿಯ ಗರುಡಿ ಸಮೀಪದ ಮರಿಯಲ್ ಹೌಸ್‌ನಲ್ಲಿ ನಡೆದಿದೆ.

ಕಾಂಪೌಂಡ್ ಗೋಡೆಯ ಕೆಳಭಾಗದಲ್ಲಿದ್ದ ನಾಲ್ಕು ಬಾಡಿಗೆ ಮನೆಗಳ ಹಿಂಭಾಗದ ಗೋಡೆಗಳು ಕುಸಿದಿದ್ದು, ಎರಡು ಕುಟುಂಬಗಳು ಹೆಚ್ಚು ಹಾನಿಗೊಳಗಾಗಿವೆ.

ಬಿಹಾರ ಮೂಲದ ಲಾಲ್‌ಬಾಬು (37) ಮತ್ತು ಪತ್ನಿ ಇಂದು (34) ಕಳೆದ ಎಂಟು ವರ್ಷಗಳಿಂದ ಇಲ್ಲಿ ವಾಸವಾಗಿದ್ದರು. ಇವರ ನಾಲ್ವರು ಪುತ್ರಿಯರಾದ ಅಲ್ಕಾ (14), ಅನುಷ್ಕಾ (11), ಅನಾಮಿಕಾ (7) ಹಾಗೂ ತನು (3) ಅವರಲ್ಲಿ ಪೋಷಕರು ಹಾಗೂ ಇಬ್ಬರು ಮಕ್ಕಳು ಸುರಕ್ಷಿತವಾಗಿ ರಕ್ಷಿಸಲ್ಪಟ್ಟಿದ್ದಾರೆ. ಪ್ರಜ್ಞಾಹೀನ ಸ್ಥಿತಿಯಲ್ಲಿ ರಕ್ಷಿಸಲ್ಪಟ್ಟಿದ್ದ ಇಬ್ಬರು ಬಾಲಕಿಯರು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.

ಉಡುಪಿ ಮೂಲದ ಬಾಲಕೃಷ್ಣ (40) ಮತ್ತು ಪತ್ನಿ ಶಾಂತಾ (35) ಕಳೆದ ಎಂಟು ತಿಂಗಳಿಂದ ಇದೇ ಮನೆಯಲ್ಲಿ ಬಾಡಿಗೆಗೆ ವಾಸಿಸುತ್ತಿದ್ದರು. ಬಾಲಕೃಷ್ಣ ಅವರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದ್ದು, ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾದ ಶಾಂತಾ ಮೃತಪಟ್ಟಿರುವ ಶಂಕೆ ಇದೆ.

ಗಾಯಾಳುಗಳು ಹಾಗೂ ರಕ್ಷಿಸಲ್ಪಟ್ಟವರನ್ನು ಚಿಕಿತ್ಸೆಗಾಗಿ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಲಾಗಿದೆ.

 

 

 

ಗಮನಿಸಿ: ಈ ಮಾಹಿತಿ ಪ್ರಾಥಮಿಕ ವರದಿಯನ್ನು ಆಧರಿಸಿದೆ. ಆಸ್ಪತ್ರೆ ಅಥವಾ ಪೊಲೀಸ್ ಇಲಾಖೆಯ ಅಧಿಕೃತ ದೃಢೀಕರಣದ ಬಳಿಕ ಮೃತಪಟ್ಟವರ ಸಂಖ್ಯೆ ಮತ್ತು ವಿವರಗಳಲ್ಲಿ ಬದಲಾವಣೆ ಆಗಬಹುದು.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಮಂಗಳೂರು, ಪುತ್ತೂರು, ಸುಳ್ಯದಲ್ಲಿ ಕೋರ್‌ ಮೆಗಾ ಸೇಲ್‌.. ರಿಫರ್ಬಿಶ್ಡ್ ಲ್ಯಾಪ್’ಟಾಪ್ ಖರೀದಿಗೆ ಸಿಗಲಿದೆ ಭರ್ಜರಿ ಆಫರ್ಸ್!!

ಮಂಗಳೂರು: ಪುತ್ತೂರು, ಸುಳ್ಯ ಹಾಗೂ ಮಂಗಳೂರಿನಲ್ಲಿ ಶಾಖೆಗಳನ್ನು ಹೊಂದಿರುವ ಕೋರ್ ಟೆಕ್ನಾಲಜೀಸ್…