ಕರಾವಳಿ

ಸುಳ್ಯ: ಪಯಸ್ವಿನಿ ನದಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆ!!

ಈ ಸುದ್ದಿಯನ್ನು ಶೇರ್ ಮಾಡಿ

ಸುಳ್ಯದ ಅಜ್ಜಾವರ ನಿವಾಸಿ ಕೃಷ್ಣ ಎಂಬವರ ಶವ ಸುಳ್ಯದ ಪಯಸ್ವಿನಿ ನದಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಕಳೆದ ಒಂದು ವಾರದ ಹಿಂದೆ ಅಜ್ಜಾವರ ಗ್ರಾಮದ ಕೃಷ್ಣ (30 ವರ್ಷ) ಮನೆಯಿಂದ ನಾಪತ್ತೆಯಾಗಿದ್ದರು. ಮನೆಯವರು ಎಂದಿನಂತೆ ಲಾರಿಯಲ್ಲಿ ಲೋಡ್ ಕೆಲಸಕ್ಕೆ ಹೋಗಿರಬಹುದು ಎಂದು ಸುಮ್ಮನಾಗಿದ್ದರು. ಆದರೆ ಕೃಷ್ಣ ಇಷ್ಟು ದಿನವಾದರೂ ಮನೆಗೆ ವಾಪಸ್‌ ಮರಳಿ ಬಾರದ ಹಿನ್ನೆಲೆ ಅಜ್ಞಾವರ ಗ್ರಾಮದ ಕರಿಯ ಮೂಲೆಯ ಪಯಸ್ವಿನಿ ನದಿಯಲ್ಲಿ ಕಾಂತಾಜೆ ಗುಂಡಿಯಲ್ಲಿ ಹುಡುಕಾಟ ನಡೆಸಿದ್ದಾರೆ. ಈ ವೇಳೆ ಮೃತ ದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಸ್ಥಳದಲ್ಲಿ ಮೀನು ಹಿಡಿಯಲು ಬಳಸುವ ಗಾಳ ಕೂಡ ಪತ್ತೆಯಾಗಿದೆ. ಪ್ರಗತಿ ಅಂಬುಲೆನ್ಸ್ ಮಾಲೀಕ ಮುಳುಗು ತಜ್ಞ ಪ್ರಗತಿ ಅಚ್ಚು, ಪೊಲೀಸರು ಸ್ಥಳದಲ್ಲಿ ಇದ್ದು ಮೃತದೇಹವನ್ನು ಹೊರ ತೆಗೆದರು.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts