tamanvi
ಕರಾವಳಿ

ನಾರಾವಿಯಲ್ಲಿ ಸರ್ವಧರ್ಮೀಯರ ಸಮಾವೇಶ | ದೇಹಕ್ಕೆ ಮಾತ್ರ ಸಾವು, ಆತ್ಮನಿಗೆ ಸಾವಿಲ್ಲ: ಲಕ್ಷ್ಮೀಸೇನ ಭಟ್ಟಾರಕ ಸ್ವಾಮೀಜಿ

D_shiva_bhat

ಈ ಸುದ್ದಿಯನ್ನು ಶೇರ್ ಮಾಡಿ

ಸತ್ಯ, ಅಹಿಂಸೆ, ಬದುಕು ಮತ್ತು ಬದುಕಲು ಬಿಡು. ಪರಸ್ಪರೋಪಗ್ರಹೋಜೀವಾನಾಂ – ಇದು ಜೈನಧರ್ಮದ ಸಾರ. ಜೀವನವಿಡೀ ಅಹಿಂಸಾ ಧರ್ಮದ ಪಾಲನೆಯೊಂದಿಗೆ ಶಿಸ್ತಿನ ಸಿಪಾಯಿಯಾಗಿ, ಧರ್ಮಾನುರಾಗಿಯಾಗಿ, ವೃತ – ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ, ಸರ್ವಧರ್ಮಿಯರಿಗೂ ಬಹುಮುಖಿ ಸಮಾಜಸೇವೆ ಸಲ್ಲಿಸಿ ಜನಾನುರಾಗಿಯಾಗಿದ್ದ ದಿವಂಗತ ಎನ್. ಪ್ರೇಮ್‌ಕುಮಾರ್ ಹೊಸ್ಮಾರ್ ಆದರ್ಶ ಶ್ರಾವಕರತ್ನವಾಗಿ ಮೆರೆದವರು ಎಂದು ನರಸಿಂಹರಾಜಪುರ ಬಸ್ತಿಮಠದ ಪೂಜ್ಯ ಲಕ್ಷ್ಮೀಸೇನ ಭಟ್ಟಾರಕ ಸ್ವಾಮೀಜಿ ಹೇಳಿದರು.

maithri

ಇತ್ತೀಚೆಗೆ ನಿಧನರಾದ ಹೊಸ್ಮಾರಿನ ಉದ್ಯಮಿ ಹಾಗೂ ಆದರ್ಶ ಸಮಾಜ ಸೇವಕ ಎನ್. ಪ್ರೇಮ್‌ ಕುಮಾರ್ ಸ್ಮರಣಾರ್ಥ ಭಾನುವಾರ ನಾರಾವಿಯಲ್ಲಿ ಸೂರ್ಯನಾರಾಯಣ ದೇವಸ್ಥಾನದ ಸಭಾಭವನದಲ್ಲಿ ಆಯೋಜಿಸಿದ್ದ ಸರ್ವಧರ್ಮೀಯರ ಸಮಾವೇಶದಲ್ಲಿ ಅವರು ವಿನಯಾಂಜಲಿ ಸಲ್ಲಿಸಿ ಮಂಗಲ ಪ್ರವಚನದೊಂದಿಗೆ ಆಶೀರ್ವಚನ ನೀಡಿದರು.

ಶಾಶ್ವತ ಧರ್ಮಕಾರ್ಯಗಳನ್ನು ಮಾಡಿದಾಗ ನಮ್ಮ ಜೀವನ ಸಾರ್ಥಕ ಹಾಗೂ ಪರಿಪೂರ್ಣ ಅಗುತ್ತದೆ. ಜೈನ ಧರ್ಮದ ಪ್ರಕಾರ ದೇಹಕ್ಕೆ ಮಾತ್ರ ಸಾವು, ಆತ್ಮನಿಗೆ ಸಾವಿಲ್ಲ. ದಾನ-ಧರ್ಮಾದಿ ಸತ್ಕಾರ್ಯಗಳಿಂದ ಆತ್ಮನಿಗಂಟಿದ ಪಾಪಕರ್ಮಗಳ ಕೊಳೆ ಕಳೆದಾಗ ಪುಣ್ಯಸಂಚಯವಾಗಿ ಆತ್ಮನೇ ಪರಮಾತ್ಮನಾಗಿ ಮೋಕ್ಷ ಪ್ರಾಪ್ತಿಯಾಗುತ್ತದೆ.
ಪ್ರೇಮ್‌ ಕುಮಾರ್ ಅವರ ಆದರ್ಶ ಸೇವಾಕಾರ್ಯಗಳನ್ನು ನಾವೆಲ್ಲರೂ ಮುಂದುವರಿಸುವುದೇ ಅವರಿಗೆ ಸಲ್ಲಿಸುವ ವಿನಯಾಂಜಲಿ. ಅವರ ಹೆಸರಿನಲ್ಲಿ ಗಿಡ-ಮರಗಳನ್ನು ಬೆಳೆಸಬೇಕು. ಯಾವುದಾದರೂ ಶಾಶ್ವತ ಸೇವಾಕಾರ್ಯವನ್ನು ಅನುಷ್ಠಾನಗೊಳಿಸಬೇಕು ಎಂದು ಸ್ವಾಮೀಜಿ ಸಲಹೆ ನೀಡಿದರು.

ಡಾ. ಪ್ರಸಾದ ಶೆಟ್ಟಿ ನಾರಾವಿ ಮಾತನಾಡಿ, ಸರ್ವರಿಗೂ ಆಪದ್‌ಭಾಂಧವರಾಗಿ, ಹೃದಯಶ್ರೀಮಂತಿಕೆಯೊಂದಿಗೆ ಸರ್ವಧರ್ಮೀಯರಿಗೂ ಪ್ರೇಮ್‌ ಕುಮಾರ್ ಮಾಡಿದ ಸೇವಾ ಕಾರ್ಯಗಳು ಸರ್ವರಿಗೂ ಆದರ್ಶ ಹಾಗೂ ಅನುಕರಣೀಯವಾಗಿದೆ ಎಂದ ಅವರು, ಮಾನವೀಯತೆಯ ಸೇವೆಯಿಂದ ಅಮರರಾಗಿದ್ದಾರೆ ಎಂದು ಹೇಳಿದರು.

ನಾರಾವಿ ಸಂತ ಅಂತೋನಿ ಚರ್ಚ್ ಧರ್ಮಗುರು ವಂದನೀಯ ಫಾದರ್ ಜೆರೋಂ ಡಿ’ಸೋಜಾ ಮಾತನಾಡಿ, ಚರ್ಚ್ ಶಾಲೆಯ ಹಿರಿಯ ವಿದ್ಯಾರ್ಥಿಯಾಗಿದ್ದ ಪ್ರೇಮ್‌ ಕುಮಾರ್, ಚರ್ಚ್ ಹಾಗೂ ಶಾಲೆಗೆ ನೀಡಿದ ಸೇವೆಯನ್ನು ಸ್ಮರಿಸಿದರು.

ಕೆ. ಅಭಯಚಂದ್ರ ಜೈನ್ ಮಾತನಾಡಿ, ಬಸದಿಗಳು, ಮಠ-ಮಂದಿರಗಳು, ಮಸೀದಿಗಳು, ಚರ್ಚ್ ಗಳಿಗೆ ಪ್ರೇಮ್‌ ಕುಮಾರ್ ನೀಡಿದ ಸೇವೆಯನ್ನು ಶ್ಲಾಘಿಸಿದರು.

ಸೋಲೂರು ಮಠದ ವಿಖ್ಯಾತಾನಂದ ಸ್ವಾಮೀಜಿ, ಶಾಸಕ ಸುನಿಲ್ ಕುಮಾರ್, ಕಾರ್ಕಳದ ಶೇಖರ ಮಡಿವಾಳ, ರವೀಂದ್ರ ಶೆಟ್ಟಿ, ವಕೀಲ ಮುರಳೀಧರ ಭಟ್, ಶ್ರೀರಂಗ ಮಯ್ಯ ಮತ್ತು ನಿವೃತ್ತ ಮುಖೋಪಾಧ್ಯಾಯ ಮುನಿರಾಜ ರೆಂಜಾಳ ಮಾತನಾಡಿದರು.

ದಿ. ಪ್ರೇಮ್‌ ಕುಮಾರ್ ಕುಟುಂಬಸ್ಥರು ಹಾಗೂ ಹಾಸನದ ಡಾ. ಆದರ್ಶ ಮತ್ತು ಡಾ. ಪ್ರತಿಮಾ ಉಪಸ್ಥಿತರಿದ್ದರು. ಬೆಂಗಳೂರಿನ ದಿಶಾ ಬಳ್ಳಾಲ್ ಸ್ವಾಗತಿಸಿದರು. ವಿಜಯ ಕುಮಾರ್ ನೂರಾಳಬೆಟ್ಟು ವಂದಿಸಿದರು.

ಸೂರ್ಯನಾರಾಯಣ ದೇವಸ್ಥಾನದಲ್ಲಿ ದೇವರಿಗೆ ವಿಶೇಷ ಅಲಂಕಾರ ಪೂಜೆ ನಡೆಯಿತು.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಮಂಗಳೂರು: ತಂಗಿಯ ಸಾವಿನಿಂದ ನೊಂದಿದ್ದ ಅಣ್ಣನೂ ಮೃತ್ಯು| ಎರಡು ತಿಂಗಳ ಅಂತರದಲ್ಲಿ ಕುಟುಂಬಕ್ಕೆ ಆಘಾತ

ಮಂಗಳೂರು: ತಂಗಿಯ ಸಾವಿನಿಂದ ತೀವ್ರವಾಗಿ ನೊಂದಿದ್ದ ಯುವಕನೊಬ್ಬ ಸಾವನ್ನಪ್ಪಿರುವ ಹೃದಯವಿದ್ರಾವಕ…

ಪುತ್ತೂರಿಗೆ ತಡವಾಗಿ ಆಗಮಿಸುತ್ತಿರುವ ಸುಬ್ರಹ್ಮಣ್ಯ – ಮಂಗಳೂರು ಪ್ಯಾಸೆಂಜರ್ ರೈಲು: ಕ್ರಮ ಕೈಗೊಳ್ಳಲು ಸಂಸದರಿಗೆ ಆಗ್ರಹ!!

ಪುತ್ತೂರು: ಮಂಗಳೂರು – ಸುಬ್ರಹ್ಮಣ್ಯ ಪ್ಯಾಸೆಂಜರ್ ರೈಲು ಬೆಳಗ್ಗಿನ ಹೊತ್ತು ಕಬಕ- ಪುತ್ತೂರು…

ತಂಬಾಕು-ನಿಕೋಟಿನ್ ಉತ್ಪನ್ನಗಳ ನಿಷೇಧ: ಅಡಿಕೆ ಬೆಳೆಗಾರರಿಗೆ ತೊಂದರೆಯಾಗದಂತೆ ಕ್ರಮಕ್ಕೆ ಕ್ಯಾಂಪ್ಕೊ ಆಗ್ರಹ

ಮಂಗಳೂರು: ಕರ್ನಾಟಕ ಸರ್ಕಾರವು ತಂಬಾಕು ಮತ್ತು ನಿಕೋಟಿನ್ ಅಂಶವುಳ್ಳ ಉತ್ಪನ್ನಗಳ ಮಾರಾಟ ಹಾಗೂ…

ಅಶೋಕ್ ರೈಯ ಶಾಸಕ ಸ್ಥಾನ ಪುತ್ತಿಲ ಪರಿವಾರದ ಭಿಕ್ಷೆ: ರಾಜೇಶ್ ಬನ್ನೂರು | ಮುಂದಿನ ಚುನಾವಣೆಯಲ್ಲಿ ಅಶೋಕ್ ರೈ ಸೋಲು ಖಚಿತ!!

ಪುತ್ತೂರು: ಪ್ರತಿಪಕ್ಷದ ಕಾರ್ಯಕರ್ತರು ಅಭಿವೃದ್ಧಿ ಕಾರ್ಯ ಪರಿಶೀಲನೆ ಮಾಡುವುದನ್ನು ಸಹಿಸದ…