tamanvi
ಟ್ರೆಂಡಿಂಗ್ ನ್ಯೂಸ್

ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್‌ನಲ್ಲಿ ಸ್ವಾತಂತ್ರ್ಯೋತ್ಸವ, ವರಮಹಾಲಕ್ಷ್ಮೀ ಹಬ್ಬದ ವಿಶೇಷ ಕೊಡುಗೆ

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಸ್ವಾತಂತ್ರ್ಯೋತ್ಸವ ಹಾಗೂ ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ನಗರದ ಪ್ರತಿಷ್ಠಿತ ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್ ವತಿಯಿಂದ ವಿಶೇಷ ಮಾರಾಟ ಮೇಳ ಆಯೋಜಿಸಲಾಗಿದೆ. ಆಗಸ್ಟ್ 15ರಿಂದ 23ರವರೆಗೆ ನಡೆಯಲಿರುವ ಈ ವಿಶೇಷ ಆಫರ್‌ನಲ್ಲಿ ಚಿನ್ನ, ಬೆಳ್ಳಿ ಹಾಗೂ ವಜ್ರಾಭರಣಗಳ ಖರೀದಿಗೆ ಆಕರ್ಷಕ ರಿಯಾಯಿತಿಗಳನ್ನು ನೀಡಲಾಗುತ್ತಿದೆ.

1957ರಿಂದ ಗುಣಮಟ್ಟ, ವಿಶ್ವಾಸ ಹಾಗೂ ವಿನೂತನ ವಿನ್ಯಾಸಗಳ ಮೂಲಕ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿರುವ ಸಂಸ್ಥೆ, ಹಬ್ಬದ ಸಂಭ್ರಮವನ್ನು ಮತ್ತಷ್ಟು ವಿಶೇಷಗೊಳಿಸಲು ವಿವಿಧ ಕೊಡುಗೆಗಳನ್ನು ಪರಿಚಯಿಸಿದೆ.

ಚಿನ್ನಾಭರಣಗಳ VA ಮೇಲೆ ಪ್ರತೀ ಗ್ರಾಂಗೆ ರೂ.600ರವರೆಗೆ ರಿಯಾಯಿತಿ, ವಜ್ರಾಭರಣಗಳ ಮೇಲೆ ಪ್ರತೀ ಕ್ಯಾರೆಟ್‌ಗೆ ಫ್ಲಾಟ್ ರೂ.7,000 ರಿಯಾಯಿತಿ ಹಾಗೂ ಬೆಳ್ಳಿ ಆಭರಣಗಳ ಮೇಲೆ ಪ್ರತೀ ಕೆ.ಜಿಗೆ ಫ್ಲಾಟ್ ರೂ.8,000 ರಿಯಾಯಿತಿ ಲಭ್ಯವಿದೆ.

ಇದರ ಜೊತೆಗೆ ಹಳೆಯ ಚಿನ್ನಾಭರಣಗಳನ್ನು ವಿನಿಮಯ ಮಾಡಿಕೊಳ್ಳುವ ಗ್ರಾಹಕರಿಗೆ ಎಕ್ಸ್‌ಚೇಂಜ್ ದರದ ಮೇಲೆ 0% ಕಡಿತದ ಸೌಲಭ್ಯ ನೀಡಲಾಗುತ್ತಿದೆ. ಹಳದಿ ಟ್ಯಾಗ್ ಸಂಗ್ರಹದಲ್ಲಿ 10%ರಿಂದ ಪ್ರಾರಂಭವಾಗುವ ವಿಶೇಷ ರಿಯಾಯಿತಿ ಕೂಡ ಲಭ್ಯವಿದ್ದು, ನೆಕ್ಲೆಸ್, ಹಾರ, ಚೈನ್, ಉಂಗುರ, ಬಳೆ ಸೇರಿದಂತೆ ವಿವಿಧ ವಿನ್ಯಾಸಗಳ ಆಭರಣಗಳ ವಿಶಾಲ ಸಂಗ್ರಹ ಗ್ರಾಹಕರಿಗಾಗಿ ಸಿದ್ಧವಾಗಿದೆ.

ಈ ವಿಶೇಷ ಕೊಡುಗೆಗಳು ಪುತ್ತೂರು, ಸುಳ್ಯ, ಹಾಸನ, ಕುಶಾಲನಗರ ಹಾಗೂ ಮೂಡಬಿದ್ರೆಯಲ್ಲಿರುವ ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್‌ನ ಎಲ್ಲಾ ಮಳಿಗೆಗಳಲ್ಲಿ ಲಭ್ಯವಿವೆ.

ಸ್ವಾತಂತ್ರ್ಯೋತ್ಸವ ಹಾಗೂ ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ನೀಡಲಾಗುತ್ತಿರುವ ಈ ವಿಶೇಷ ಕೊಡುಗೆಗಳ ಸದುಪಯೋಗ ಪಡೆದುಕೊಳ್ಳುವಂತೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಲೈವ್ ಜ್ಯೂಸ್ ಕೌಂಟರ್ ಆರಂಭಿಸಿದ ಪ್ರಭುಸ್! ಪ್ರಭುಸ್ ಆಗಿ ಮರುನಾಮಕರಣಗೊಂಡ ಪ್ರಭು ಚರುಂಬುರಿ!!

ಪುತ್ತೂರು: ಪ್ರಸಿದ್ಧ ಚರುಂಬುರಿ ಹಾಗೂ ಚಾಟ್ಸ್ ಸಂಸ್ಥೆ ಪ್ರಭು ಚರುಂಬುರಿ ಇದೀಗ ಪ್ರಭುಸ್ ಆಗಿ…

ನಾಡಪ್ರಭು ಕೆಂಪೇಗೌಡ ರಾಜ್ಯ ಪ್ರಶಸ್ತಿ ಪುರಸ್ಕೃತ ಕೇಶವ ಅಮೈ ಅವರಿಗೆ ದರ್ಬೆಯಲ್ಲಿ ಸ್ವಾಗತ, ಮೆರವಣಿಗೆ

ಫುತ್ತೂರು: ಬೆಂಗಳೂರಿನಲ್ಲಿ ನಾಡಪ್ರಭು ಕೆಂಪೇಗೌಡ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಎಸ್.ಆರ್.ಕೆ.…