tamanvi
ನಿಧನ

ಬೆಂಕಿ ಹಚ್ಚಿಕೊಂಡು ವೃದ್ಧೆ ಆತ್ಮಹತ್ಯೆ!

D_shiva_bhat

ಈ ಸುದ್ದಿಯನ್ನು ಶೇರ್ ಮಾಡಿ

ವಯೋಸಹಜ ಕಾಯಿಲೆಯಿಂದ ಬಳಲುತಿದ್ದ ವೃದ್ಧೆಯೋರ್ವರು ಜೀವನದಲ್ಲಿ ಜಿಗುಪ್ಸೆಗೊಂಡು ಬುಧವಾರ ಬೆಳಗ್ಗೆ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಮೈಮೇಲೆ ಡಿಸೇಲ್ ಸುರಿದುಕೊಂಡು ಬೆಂಕಿಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

maithri

ಸಿದ್ಧಾಪುರ ಗ್ರಾಮದ ಗಿರಿಜಮ್ಮ ಶೆಡ್ತಿ (82) ಆತ್ಮಹತ್ಯೆ ಮಾಡಿಕೊಂಡವರು.

ಹೊರಹೋಗಿದ್ದ ಮಗ ಶಿವರಾಮ ಶೆಟ್ಟಿ ಬೆಳಗ್ಗೆ 9:45ರ ಸುಮಾರಿಗೆ ಮರಳಿ ಬಂದಾಗ, ಮನೆ ಬಳಿಯಿಂದ ದಟ್ಟ ಹೊಗೆ ಬರುವುದನ್ನು ನೋಡಿ ಧಾವಿಸಿ ಬಂದಾಗ ಅರೆಬೆಂದ ಸ್ಥಿತಿಯಲ್ಲಿ ತಾಯಿ ಇರುವುದು ಕಂಡುಬಂದಿತ್ತು. ಮನೆಯ ಹೊರಗೆ ಅಂಗಳದಲ್ಲಿ ಹಾಸಿಗೆ, ಇನ್ನಿತರ ಬಟ್ಟೆ ಹಾಕಿ ಬೆಂಕಿ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಶಂಕರನಾರಾಯಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಮಂತ್ರಾಲಯಕ್ಕೆ ತೆರಳಿ ವಾಪಸಾಗುತ್ತಿದ್ದ ಪುತ್ತೂರು ಮೂಲದ ಉದ್ಯಮಿ ಬಳ್ಳಾರಿಯಲ್ಲಿ ಹೃದಯಾಘಾತಕ್ಕೆ ಬಲಿ

ಪುತ್ತೂರು: ಮಂತ್ರಾಲಯಕ್ಕೆ ತೆರಳಿ ವಾಪಸಾಗುತ್ತಿದ್ದ ಪುತ್ತೂರು ಮೂಲದ ಉದ್ಯಮಿಯೊಬ್ಬರು ಬಳ್ಳಾರಿ…