tamanvi
ನಿಧನ

ರಾಮಕುಂಜ: ಊಟ ಮಾಡಿ ಮಲಗಿದ್ದ ಅರಣ್ಯ ವೀಕ್ಷಕ ಹೃದಯಾಘಾತದಿಂದ ನಿಧನ

ಈ ಸುದ್ದಿಯನ್ನು ಶೇರ್ ಮಾಡಿ

ರಾಮಕುಂಜ: ಊಟ ಮಾಡಿ ಮಲಗಿದ್ದ ಯುವಕನೋರ್ವ ಹೃದಯಾಘಾತದಿಂದ ಮೃತಪಟ್ಟ ಘಟನೆ ಸೆ.22ರಂದು ರಾಮಕುಂಜದಲ್ಲಿ ನಡೆದಿದೆ. ಮೃತರನ್ನು ಸಚಿನ್‌ (33) ಎಂದು ಗುರುತಿಸಲಾಗಿದೆ.

ಸೆ.22ರಂದು ಮಧ್ಯಾಹ್ನ ಊಟ ಮಾಡಿ ಸಚಿನ್‌ ಅವರು ಮಲಗಿದ್ದರು. ಸಂಜೆ ಸುಮಾರು 3 ಗಂಟೆಯ ವೇಳೆಗೆ ತಾಯಿ ಅವರನ್ನು ಎಬ್ಬಿಸಲು ಬಂದಾಗ ಜೋರಾಗಿ ಉಸಿರಾಡುತ್ತಿರುವುದನ್ನು ಗಮನಿಸಿ, ಮತ್ತೋರ್ವ ಪುತ್ರ ಚರಣ್‌ಗೆ ಮಾಹಿತಿ ನೀಡಿದ್ದಾರೆ.

ಕೂಡಲೇ ಸಚಿನ್‌ ಅವರನ್ನು ಕೊಯಿಲ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು. ಆದರೆ ವೈದ್ಯರು ಪರಿಶೀಲಿಸಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

ಸಚಿನ್‌ ಅವರು ಕರ್ನಾಟಕ ಗೇರು ಅಭಿವೃದ್ಧಿ ನಿಗಮದ (ಕೆಸಿಡಿಸಿ) ಮಂಗಳೂರು ವಿಭಾಗದಲ್ಲಿ ಕಳೆದ ಒಂದೂವರೆ ವರ್ಷದಿಂದ ಹೊರಗುತ್ತಿಗೆ ಆಧಾರದಲ್ಲಿ ಅರಣ್ಯ ವೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇದಕ್ಕೂ ಮೊದಲು ಕಾಜರುಕ್ಕು ಎಂಬಲ್ಲಿ ಬೈಕ್‌ ಸರ್ವಿಸ್‌ ಸ್ಟೇಷನ್‌ ನಡೆಸುತ್ತಿದ್ದರು ಎನ್ನಲಾಗಿದೆ.

ಈ ಕುರಿತು ಮೃತರ ಸಹೋದರ ಚರಣ್‌ ನೀಡಿದ ದೂರಿನ ಆಧಾರದ ಮೇಲೆ ಕಡಬ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts