ಪುತ್ತೂರು: 34 ನೆಕ್ಕಿಲಾಡಿ ಗ್ರಾಮದ ಶಾಂತಿನಗರ ನಿವಾಸಿ ಸೀತಾರಾಮ ಆಚಾರ್ಯ (79 ವ.) ಸೆ. 9ರಂದು ಬೆಳಿಗ್ಗೆ ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನರಾದರು.
ಎಸ್.ಕೆ.ಜಿ.ಐ ಬ್ಯಾಂಕಿನ ಫಿಗ್ಮಿ ಕಲೆಕ್ಷನ್ ಮಾಡುತ್ತಿದ್ದ ಅವರು ಕೆಲ ಸಮಯಗಳಿಂದ ನಿವೃತ್ತಿ ಜೀವನ ನಡೆಸುತ್ತಿದ್ದರು. ಇವರು ಉಪ್ಪಿನಂಗಡಿ ವಿಶ್ವಕರ್ಮ ಸಮಾಜ ಸೇವಾ ಸಂಘದ ಮಾಜಿ ಅಧ್ಯಕ್ಷರು.
ಮೃತರು ಪತ್ನಿ ಸುಜಾತಾ, ಪುತ್ರ ಸುಜಿತ್, ಪುತ್ರಿ ನಿಶಾ, ಸೊಸೆ, ಅಳಿಯ, ಮೊಮ್ಮಕ್ಕಳನ್ನು ಅಗಲಿದ್ದಾರೆ.
























