ಬೆಂಗಳೂರು: ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆ ಬೆನ್ನಲ್ಲೇ ಕಾಂಗ್ರೆಸ್ ನಾಯಕಿ ಕೃಪಾ ಆಳ್ವಾ ಅವರಿಗೆ ನೋಟಿಸ್ ನೀಡಲಾಗಿದೆ ಎಂದು ತಿಳಿದುಬಂದಿದೆ.
ವಿಡಿಯೋದಲ್ಲಿ ಕೈ ನಾಯಕಿ ಕೃಪಾ ಆಳ್ವಾ ಇದ್ದಾರೆ ಎಂದು ಹೆಚ್ಡಿ ಕುಮಾರಸ್ವಾಮಿ ಆರೋಪ ಮಾಡಿದ್ದರು. ಸ್ಟಿಂಗ್ ಆಪರೇಷನ್ ಬಗ್ಗೆ ಯತೀಂದ್ರ ಸಿದ್ದರಾಮಯ್ಯ ಆರೋಪದ ಬಗ್ಗೆ ಮಾತಾಡಿದ ಕೆಪಿಸಿಸಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರು, ನಾನು ಈಗಾಗಲೇ ಹೇಳಿದ್ದೇನೆ, ಸೇಡಿನ ರಾಜಕೀಯವಾಗಿ ಸೇಡು ತೀರಿಸಿಕೊಳ್ಳೋಕೆ ಕೆಲವರು ಮಾಡುವ ಹೀನ ಕೃತ್ಯ ಇದು. ಅದು ಆಗಬಾರದು ಅಂತ ನಾನು ನಿರಂತರವಾಗಿ ಹೇಳಿಕೊಂಡೆ ಬಂದಿದ್ದೇನೆ. ಈ ತರ ಸ್ಟಿಂಗ್ ಆಪರೇಷನ್ ನಲ್ಲಿ ಯಾರಾದರೂ ಕಾಂಗ್ರೆಸ್ ಪಕ್ಷದವರು ಇದ್ದರೆ. ಅದರಲ್ಲಿ ಭಾಗಿಯಾಗಿದ್ದರು ಅದು ವಿಡಿಯೋ ಎಲ್ಲಾ ಹೊರಗಡೆ ಬರುತ್ತೆ. ಈಗಾಗಲೇ ಅವರಿಗೆ ಶೋಕಾಸ್ ನೋಟೀಸ್ ಕೊಡಿ ಅಂತ ಹೇಳಿದ್ದು, ಕ್ರಮ ತೆಗೆದುಕೊಳ್ಳೋದಾಗಿಯೂ ತಿಳಿಸಿದ್ದಾರೆ.
ವಿಡಿಯೋದಲ್ಲಿ ಯಾರಿದ್ದಾರೆ? ಅವರ ಹಿಂದೆ ಯಾರಿದ್ದಾರೆ ಅಂತ ತನಿಖೆ ಮಾಡೋಕೆ ಸಿಐಡಿ, ಸಿಬಿಐ ಎಲ್ಲಾ ಇದೆ. ಆ ರೀತಿ ನೋಡೋಕೆ ಹೋದ್ರೆ ತನಿಖೆ ಬಹಳ ಹಿಂದಿಂದ ಆಗಬೇಕಾಗುತ್ತೆ ಎಂದು ಬಿಕೆ ಹರಿಪ್ರಸಾದ್ ಅವರು ಬಿಜೆಪಿ ವಿರುದ್ಧವೂ ಕಿಡಿಕಾರಿದ್ರು. ಈಗಾಗಲೇ ಅವರಿಗೆ ಕಾರಣ ಕೇಳಿ ನೋಟಿಸ್ ನೀಡುವಂತೆ ಸೂಚಿಸಿದ್ದೇನೆ. ನಂತರ ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಸ್ಪಷ್ಟಪಡಿಸಿದರು.
ಸಿದ್ದರಾಮಯ್ಯ ಅವರನ್ನು ಬ್ಲ್ಯಾಕ್ ಮೇಲ್ ಮಾಡಲು ಸ್ಟಿಂಗ್ ಆಪರೇಷನ್ ಮಾಡಿದ್ದು, ಕಾಂಗ್ರೆಸ್ನವರ ಕೈವಾಡವಿದೆ ಎಂದು ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದ್ದರು.
























