tamanvi
ಕರಾವಳಿ

ಮಂಗಳೂರು, ಪುತ್ತೂರು, ಸುಳ್ಯದಲ್ಲಿ ಕೋರ್‌ ಮೆಗಾ ಸೇಲ್‌.. ರಿಫರ್ಬಿಶ್ಡ್ ಲ್ಯಾಪ್’ಟಾಪ್ ಖರೀದಿಗೆ ಸಿಗಲಿದೆ ಭರ್ಜರಿ ಆಫರ್ಸ್!!

ಈ ಸುದ್ದಿಯನ್ನು ಶೇರ್ ಮಾಡಿ

ಮಂಗಳೂರು: ಪುತ್ತೂರು, ಸುಳ್ಯ ಹಾಗೂ ಮಂಗಳೂರಿನಲ್ಲಿ ಶಾಖೆಗಳನ್ನು ಹೊಂದಿರುವ ಕೋರ್ ಟೆಕ್ನಾಲಜೀಸ್ ಸಂಸ್ಥೆಯ ಮೆಗಾ ಸೇಲ್‌ಗೆ ಸೆ.21ರಂದು ಚಾಲನೆ ದೊರೆತಿದೆ. ನವೆಂಬರ್ ತಿಂಗಳ ಅಂತ್ಯದವರೆಗೆ ನಡೆಯಲಿರುವ ಸೇಲ್‌ನಲ್ಲಿ ಕಂಪ್ಯೂಟರ್‌, ಡೆಸ್ಕ್‌ಟಾಪ್‌, ಲ್ಯಾಪ್‌ಟಾಪ್‌, ಟ್ಯಾಬ್ ಹಾಗೂ ವಿವಿಧ ಆಕ್ಸಸರೀಸ್‌ಗಳು ಆಕರ್ಷಕ ರಿಯಾಯಿತಿ ದರದಲ್ಲಿ ಲಭ್ಯವಿರಲಿವೆ.

ಕಂಕನಾಡಿಯಲ್ಲಿರುವ ಕೋರ್ ಟೆಕ್ನಾಲಜೀಸ್ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಎನ್‌ಐ ಮಂಗಳೂರು ಹಾಗೂ ಉಡುಪಿ ವಿಭಾಗದ ಎಕ್ಸಿಕ್ಯೂಟಿವ್ ಡೈರೆಕ್ಟರ್ ಗಣೇಶ್ ಶರ್ಮಾ ಅವರು ಮೆಗಾ ಸೇಲ್‌ನ ಪೋಸ್ಟರ್ ಬಿಡುಗಡೆಗೊಳಿಸಿ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸ್ಥೆಯ ಮಾಲೀಕ ಅನೂಪ್ ಕೆಜೆ, ಕಳೆದ 7–8 ವರ್ಷಗಳಿಂದ ಗ್ರಾಹಕರ ವಿಶ್ವಾಸವನ್ನು ಗಳಿಸಿರುವ ಕೋರ್ ಟೆಕ್ನಾಲಜೀಸ್, ಗುಣಮಟ್ಟದ ಸೇವೆ ನೀಡುವಲ್ಲಿ ಗಮನಹರಿಸಿದೆ ಎಂದರು. ದೊಡ್ಡ ಎಲೆಕ್ಟ್ರಾನಿಕ್ಸ್ ಮಳಿಗೆಗಳು ಡಿಸ್ಕೌಂಟ್ ಸೇಲ್ ನಡೆಸುತ್ತಿರುವ ಸಂದರ್ಭದಲ್ಲಿ ಗ್ರಾಹಕರ ಅನುಕೂಲಕ್ಕಾಗಿ ಕೋರ್ ಟೆಕ್ನಾಲಜೀಸ್ ಕೂಡ ಮೆಗಾ ಸೇಲ್ ಆರಂಭಿಸಿದೆ ಎಂದು ತಿಳಿಸಿದರು.

ಈ ಮೆಗಾ ಸೇಲ್‌ನಲ್ಲಿ ಕಂಪ್ಯೂಟರ್‌, ಡೆಸ್ಕ್‌ಟಾಪ್‌, ಲ್ಯಾಪ್‌ಟಾಪ್‌, ಟ್ಯಾಬ್ ಹಾಗೂ ವಿವಿಧ ಆಕ್ಸಸರೀಸ್‌ಗಳು ವಿಶೇಷ ಆಫರ್‌ಗಳೊಂದಿಗೆ ದೊರೆಯಲಿವೆ. ಕಂಪ್ಯೂಟರ್‌ಗಳು ಹಾಗೂ ಲ್ಯಾಪ್‌ಟಾಪ್‌ಗಳನ್ನು ಬಾಡಿಗೆಗೆ ಪಡೆಯುವ ಸೌಲಭ್ಯವೂ ಇದೆ. ಡೇಟಾ ರಿಕವರಿ, ಸಿಸಿಟಿವಿ ಮಾರಾಟ ಮತ್ತು ಅಳವಡಿಕೆ, ಬಯೋಮೆಟ್ರಿಕ್ ಸೆಕ್ಯೂರಿಟಿ ಸಿಸ್ಟಮ್ಸ್ ಹಾಗೂ ಬಿಲ್ಲಿಂಗ್ ಸಾಫ್ಟ್‌ವೇರ್ ಸೇರಿದಂತೆ ವಿವಿಧ ತಾಂತ್ರಿಕ ಸೇವೆಗಳು ಸಂಸ್ಥೆಯಲ್ಲಿ ಲಭ್ಯವಿವೆ.

ವಿದ್ಯಾರ್ಥಿಗಳಿಗೆ ರೆಫ್ಯೂರ್ಬಿಸ್ಡ್ ಲ್ಯಾಪ್‌ಟಾಪ್‌ಗಳ ಅನುಕೂಲ

ಮೆಗಾ ಸೇಲ್‌ಗೆ ಚಾಲನೆ ನೀಡಿ ಮಾತನಾಡಿದ ಗಣೇಶ್ ಶರ್ಮಾ, ಪುತ್ತೂರಿನಲ್ಲಿ ಆರಂಭವಾದ ಕೋರ್ ಟೆಕ್ನಾಲಜೀಸ್ ಸಂಸ್ಥೆಯು ಸುಳ್ಯ ಹಾಗೂ ಮಂಗಳೂರಿಗೂ ವಿಸ್ತರಿಸಿರುವುದು ಗಮನಾರ್ಹ ಎಂದರು.

ಕಂಪ್ಯೂಟರ್ ಮತ್ತು ಲ್ಯಾಪ್‌ಟಾಪ್‌ಗಳ ಬೆಲೆ ಏರಿಕೆಯಾಗಿರುವ ಸಂದರ್ಭದಲ್ಲಿ ಎಂಜಿನಿಯರಿಂಗ್ ಸೇರಿದಂತೆ ವಿವಿಧ ಕೋರ್ಸ್‌ಗಳನ್ನು ಕಲಿಯುವ ವಿದ್ಯಾರ್ಥಿಗಳಿಗೆ ರೆಫ್ಯೂರ್ಬಿಸ್ಡ್ ಲ್ಯಾಪ್‌ಟಾಪ್‌ಗಳು ಅನುಕೂಲಕರವಾಗಿವೆ. ಕೋರ್ ಟೆಕ್ನಾಲಜೀಸ್ ಸಂಸ್ಥೆಯು ವಿದ್ಯಾರ್ಥಿಗಳು ಹಾಗೂ ಉದ್ಯೋಗಸ್ಥರಿಗೆ 6 ತಿಂಗಳ ವಾರಂಟಿಯೊಂದಿಗೆ ರೆಫ್ಯೂರ್ಬಿಸ್ಡ್ ಲ್ಯಾಪ್‌ಟಾಪ್‌ಗಳನ್ನು ಪೂರೈಸುತ್ತಿರುವುದು ಉತ್ತಮ ಕ್ರಮವಾಗಿದೆ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಬಿಎನ್‌ಐ ಪ್ರಗತಿ ಚಾಪ್ಟರ್ ಅಧ್ಯಕ್ಷ ಭರತ್ ಶೆಟ್ಟಿ ಹಾಗೂ ರೋಟರಿ ಕ್ಲಬ್ ಪುತ್ತೂರು ಯುವದ ಅಧ್ಯಕ್ಷೆ ವಚನಾ ಜಯರಾಂ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶುಭ ಹಾರೈಸಿದರು. ಬಿಎನ್‌ಐನ ಹಲವು ಸದಸ್ಯರು, ಗ್ರಾಹಕರು ಹಾಗೂ ಹಿತೈಷಿಗಳು ಉಪಸ್ಥಿತರಿದ್ದರು.

ಮೂರು ಶಾಖೆಗಳಲ್ಲೂ ಮೆಗಾ ಸೇಲ್

ಕಳೆದ ವರ್ಷದ ಮೆಗಾ ಸೇಲ್‌ಗೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದ ಹಿನ್ನೆಲೆಯಲ್ಲಿ ಈ ಬಾರಿ ಮತ್ತಷ್ಟು ರಿಯಾಯಿತಿಗಳನ್ನು ಘೋಷಿಸಲಾಗಿದೆ. ನವೆಂಬರ್ ತಿಂಗಳ ಅಂತ್ಯದವರೆಗೆ ಮಂಗಳೂರು, ಪುತ್ತೂರು ಹಾಗೂ ಸುಳ್ಯ ಶಾಖೆಗಳಲ್ಲಿ ಮೆಗಾ ಸೇಲ್ ಲಭ್ಯವಿರಲಿದೆ. ಹೊಸ ಕಂಪ್ಯೂಟರ್‌, ಡೆಸ್ಕ್‌ಟಾಪ್‌ ಅಥವಾ ರೆಫ್ಯೂರ್ಬಿಸ್ಡ್ ಲ್ಯಾಪ್‌ಟಾಪ್ ಖರೀದಿಸಲು ಬಯಸುವವರಿಗೆ ಇದು ಅನುಕೂಲಕರ ಅವಕಾಶವಾಗಿದೆ ಎಂದು ಸಂಸ್ಥೆಯ ಮಾಲೀಕ ಅನೂಪ್ ಕೆಜೆ ತಿಳಿಸಿದ್ದಾರೆ.

ಕೋರ್ ಟೆಕ್ನಾಲಜೀಸ್ ಶಾಖೆಗಳ ವಿವರ:

ಮಂಗಳೂರು: 1ನೇ ಮಹಡಿ, ಕಂಕನಾಡಿ ಗೇಟ್ ಬಿಲ್ಡಿಂಗ್.

ಸುಳ್ಯ: ಸೋಂತೋಡು ಎಂಪೋರಿಯಂ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಎದುರು.

ಪುತ್ತೂರು: ಮಹಾಲಸಾ ಆರ್ಕೇಡ್, ಸಂಗೀತಾ ಮೊಬೈಲ್ಸ್ ಎದುರು, ಮುಖ್ಯ ರಸ್ತೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:

ಮಂಗಳೂರು: 8277834777

ಪುತ್ತೂರು: 8277227287

ಸುಳ್ಯ: 8277874777


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಮಂಗಳೂರು: ತಂಗಿಯ ಸಾವಿನಿಂದ ನೊಂದಿದ್ದ ಅಣ್ಣನೂ ಮೃತ್ಯು| ಎರಡು ತಿಂಗಳ ಅಂತರದಲ್ಲಿ ಕುಟುಂಬಕ್ಕೆ ಆಘಾತ

ಮಂಗಳೂರು: ತಂಗಿಯ ಸಾವಿನಿಂದ ತೀವ್ರವಾಗಿ ನೊಂದಿದ್ದ ಯುವಕನೊಬ್ಬ ಸಾವನ್ನಪ್ಪಿರುವ ಹೃದಯವಿದ್ರಾವಕ…