ಪುತ್ತೂರು: ಹಾರಾಡಿ ಸ ಮಾ ಉ ಹಿ ಪ್ರಾ ಶಾಲೆಯ 2026 2029ನೇ ಸಾಲಿನ ಎಸ್ ಡಿ ಎಂಸಿ ರಚನೆಯನ್ನು ಮಾಜಿ ಎಸ್ ಡಿ ಎಂ ಸಿ ಅಧ್ಯಕ್ಷ ಹರಿಪ್ರಸಾದ್ ಇವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.
ಅಧ್ಯಕ್ಷರಾಗಿ ಹರೀಶ್ ಶಾಂತಿ ಪುತ್ತೂರು ಹಾಗೂ ಉಪಾಧ್ಯಕ್ಷರಾಗಿ ಜ್ಯೋತಿ ದೇಂತಡ್ಕ ಬನ್ನೂರು ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಪೋಷಕರ ಸಹಭಾಗಿತ್ವದೊಂದಿಗೆ ಹೊಸ ಸದಸ್ಯರ ಆಯ್ಕೆ ಪ್ರಕ್ರಿಯೆ ನಡೆಸಲಾಯಿತು.
18 ಸದಸ್ಯರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಇದರ ಆಯ್ಕೆ ಪ್ರಕ್ರಿಯೆಯನ್ನು ಮುಖ್ಯ ಶಿಕ್ಷಕ ಕೆಕೆ ಮಾಸ್ಟರ್ ಅವರು ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ನಿರ್ಗಮಿತ ಎಸ್ ಡಿ ಎಂ ಸಿ ಯ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರನ್ನು ಗೌರವಿಸಲಾಯಿತು.
ಹಿರಿಯ ಶಿಕ್ಷಕಿ ಚಿತ್ರ ರೈ ಸ್ವಾಗತಿಸಿ, ಜಿಪಿಟಿ ಶಿಕ್ಷಕ ಜನಾರ್ಧನ ದುರ್ಗ ವಂದಿಸಿದರು. ಜಿಪಿಟಿ ಶಿಕ್ಷಕ ಅಬ್ದುಲ್ ಲತೀಫ್ ಸಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿಯರಾದ ವನಿತಾ, ಧನ್ಯ ಸಹಕರಿಸಿದರು.
























