ಶಿಕ್ಷಣ

ವಿದ್ಯಾಮಾತಾ ಅಕಾಡೆಮಿಯಲ್ಲಿ ರಾಷ್ಟ್ರೀಯ ಏಕತಾ ದಿನಾಚರಣೆ

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಟೀಮ್ ದಕ್ಷಿಣ ಕಾಶಿ ಉಪ್ಪಿನಂಗಡಿ ಹಾಗೂ ಪುತ್ತೂರು ವಿದ್ಯಾಮಾತಾ ಅಕಾಡೆಮಿ ಆಶ್ರಯದಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲರ ಜನ್ಮದಿನಾಚರಣೆ ಪ್ರಯುಕ್ತ ರಾಷ್ಟ್ರೀಯ ಏಕತಾ ದಿನಾಚರಣೆಯನ್ನು ಅ. 31ರಂದು ಪುತ್ತೂರು ವಿದ್ಯಾಮಾತಾ ಅಕಾಡೆಮಿಯಲ್ಲಿ ಆಯೋಜಿಸಲಾಯಿತು.

ವಿದ್ಯಾಮಾತಾ ಅಕಾಡೆಮಿಯ ಆಡಳಿತ ನಿರ್ದೇಶಕ ಭಾಗ್ಯೇಶ್ ರೈ ಮಾತನಾಡಿ, ಸರ್ದಾರ್ ವಲ್ಲಭಭಾಯಿ ಪಟೇಲರ ತತ್ವ ಸಿದ್ಧಾಂತಗಳನ್ನು ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ವಾಟ್ಸಾಪ್ ಫೇಸ್ ಬುಕ್ ಇರುವಂತ ಈ ಯುಗದಲ್ಲಿ ವಿದ್ಯಾರ್ಥಿಗಳನ್ನು ಹಾಗೂ ಜನರನ್ನ ಒಟ್ಟು ಸೇರಿಸುವುದು ಬಹಳಷ್ಟು ಕಷ್ಟದ ಕೆಲಸ. ಆದರೆ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ಸ್ವಾತಂತ್ರ್ಯ ಹೋರಾಟಕ್ಕಾಗಿ ಅದೆಷ್ಟೋ ಸಂಘಟನೆಗಳನ್ನ ರಚಿಸಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದಾರೆ ಎಂದು ನೆನಪಿಸಿದರು.

ವಿದ್ಯಾಮಾತಾ ಅಕಾಡೆಮಿಯ ನಿರ್ದೇಶಕಿ ರಮ್ಯಾ, ತರಬೇತುದಾರ ಗಣೇಶ್ ಉಪಸ್ಥಿತರಿದ್ದರು.

ವಿದ್ಯಾಮಾತಾ ಅಕಾಡೆಮಿಯ ಉಪನ್ಯಾಸಕ ಚಂದ್ರಕಾಂತ್ ಸ್ವಾಗತಿಸಿದರು. ಸಂಸ್ಥೆಯ ವಿದ್ಯಾರ್ಥಿ ನೇಹಾ ರಾವ್ ಕೆ ಏಕತಾ ದಿನದ ಪ್ರತಿಜ್ಞೆಯನ್ನು ಬೋಧಿಸಿದರು. ಟೀಮ್ ದಕ್ಷಿಣ ಕಾಶಿಯ ಜೊತೆ ಕಾರ್ಯದರ್ಶಿ ವಿಜೇತ್ ಕುಮಾರ್ ವಂದಿಸಿದರು.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಯೂತ್ ರೆಡ್’ಕ್ರಾಸ್ ಪ್ರೇರಣಾ ಶಿಬಿರ: ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜು ವಿದ್ಯಾರ್ಥಿ ತಂಡಕ್ಕೆ ಬೆಸ್ಟ್ ಟೀಮ್ ಅವಾರ್ಡ್

ಪುತ್ತೂರು: ಮಂಗಳೂರು ವಿಶ್ವವಿದ್ಯಾಲಯದ ಯುವ ರೆಡ್‌ಕ್ರಾಸ್ ಘಟಕ, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ…