Gl
ಕರಾವಳಿಪ್ರಚಲಿತಸ್ಥಳೀಯ

ಸರಕಾರಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿ ವಂಚಿಸಿದ ಶಾಲಾ ಅಧ್ಯಾಪಿಕೆ..!!!

ಸರಕಾರಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಹಲವರಿಂದ ಲಕ್ಷಾಂತರ ರೂಪಾಯಿ ವಂಚಿಸಿದ ಪ್ರಕರಣದ ಮಾಜಿ ಡಿವೈಎಫ್ ಐ ನೇತಾರೆ ಬಾಡೂರು ಎಎಲ್ಪಿ ಶಾಲೆ ಅಧ್ಯಾಪಿಕೆ ಶೇಣಿ ಬಲ್ಕಕಲ್ಲುವಿನ ಸಚಿತಾ ರೈ ವಿರುದ್ದ ಮಹಿಳೆಯೊಬ್ಬರು ಉಪ್ಪಿನಂಗಡಿ ಠಾಣೆಯಲ್ಲೂ ವಂಚನೆ ದೂರು ನೀಡಿದ್ದಾರೆ.

ಈ ಸುದ್ದಿಯನ್ನು ಶೇರ್ ಮಾಡಿ

ಉಪ್ಪಿನಂಗಡಿ: ಸರಕಾರಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಹಲವರಿಂದ ಲಕ್ಷಾಂತರ ರೂಪಾಯಿ ವಂಚಿಸಿದ ಪ್ರಕರಣದ ಮಾಜಿ ಡಿವೈಎಫ್ ಐ ನೇತಾರೆ ಬಾಡೂರು ಎಎಲ್ಪಿ ಶಾಲೆ ಅಧ್ಯಾಪಿಕೆ ಶೇಣಿ ಬಲ್ಕಕಲ್ಲುವಿನ ಸಚಿತಾ ರೈ ವಿರುದ್ದ ಮಹಿಳೆಯೊಬ್ಬರು ಉಪ್ಪಿನಂಗಡಿ ಠಾಣೆಯಲ್ಲೂ ವಂಚನೆ ದೂರು ನೀಡಿದ್ದಾರೆ.

rachana_rai
Pashupathi
akshaya college

ಸಚಿತಾ ರೈಯವರ ಕಾಲೇಜ್ ಸಹಪಾಠಿ ರಕ್ಷಿತಾ ರೈ ಎಂಬವರು ದೂರು ನೀಡಿದವರು. ಸಚಿತಾ ರೈ ಹಾಗೂ ರಕ್ಷಿತಾ ರೈ ಪುತ್ತೂರಿನ ಕಾಲೇಜ್ ನಲ್ಲಿ ಸಹಪಾಠಿಗಳಾಗಿದ್ದರು. ಆರೋಪಿ ಸಚಿತಾ ರೈ ವಿರುದ್ದ ಕಾಸರಗೋಡು ಜಿಲ್ಲೆಯ ಮಂಜೇಶ್ವರ ಠಾಣೆಯಲ್ಲಿ ಈಗಾಗಲೇ ವಂಚನೆ ಪ್ರಕರಣ ದಾಖಲಾಗಿದೆ. ಕಿದೂರಿನ ನಿಶ್ಮಿತಾ ಶೆಟ್ಟಿಯವರು ಆರೋಪಿಯ ವಿರುದ್ದ ದೂರು ನೀಡಿದ್ದರು. CPCRIಯಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಸುಮಾರು 15 ಲಕ್ಷದಷ್ಟು ಹಣ ವಂಚಿಸಿರುವುದಾಗಿ ನಿಶ್ಮಿತಾ ಆರೋಪಿಸಿದರು. ಈ ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸದಂತೆ ಕಾಸರಗೋಡಿನ ನ್ಯಾಯಾಲಯ ತಾತ್ಕಲಿಕ ತಡೆಯಾಜ್ಞೆ ನೀಡಿದೆ

pashupathi

ರಕ್ಷಿತಾ ರೈ ನೀಡಿದ ದೂರಿನಲ್ಲಿ ಏನಿದೆ ?

ಸಚಿತಾ ರೈ ಎಂಬಾಕೆ ಕೇರಳ ರಾಜ್ಯದ ನೀರಾವರಿ ಇಲಾಖೆ ಅಥವಾ ಎಸ್ಬಿಐ ಬ್ಯಾಂಕಿನಲ್ಲಿ ಉದ್ಯೋಗ ಒದಗಿಸಿಕೊಡುವುದಾಗಿ ನಂಬಿಸಿ, ವಿವಿಧ ಕಂತುಗಳಲ್ಲಿ ಒಟ್ಟು 13,11,600 ರೂಪಾಯಿ ಪಡೆದುಕೊಂಡಿದ್ದಾರೆ. ಅದರಲ್ಲಿ 8,66,868 ರೂಪಾಯಿಯನ್ನು ಬ್ಯಾಂಕ್‌ ಖಾತೆಯ ಮೂಲಕ ವರ್ಗಾಯಿಸಿದ್ದು, ಉಳಿದ ಮೊತ್ತವನ್ನು ಗೂಗಲ್ ಪೇ ಮಾಡಿರುವುದಾಗಿ ರಕ್ಷಿತಾರವರು ತಾವು ನೀಡಿದ ದೂರಿನಲ್ಲಿ ತಿಳಿಸಿದ್ದಾರೆ

ಪುತ್ತೂರಿನ ಕಾಲೇಜಿನಲ್ಲಿ ರಕ್ಷಿತಾರವರ ಸಹಪಾಠಿಯಾಗಿದ್ದ ಸಚಿತಾ ರೈ ಈಗ ವಿವಾಹಿತರಾಗಿ ಕಾಸರಗೋಡಿನ ಪೆರ್ಲದಲ್ಲಿ ಶಿಕ್ಷಕಿಯಾಗಿದ್ದಾರೆ. ಅಲ್ಲಿನ ಆಡಳಿತ ಪಕ್ಷದ ಪ್ರಭಾವಿ ವ್ಯಕ್ತಿಯೋರ್ವನನ್ನು ಮದುವೆಯಾಗಿದ್ದಾರೆ. ಹೀಗಾಗಿ ಸರಕಾರಿ ಉದ್ಯೋಗ ಕೊಡಿಸುವಷ್ಟು ಸರಕರಾದ ಮಟ್ಟದಲ್ಲಿ ಪ್ರಭಾವವಿದೆ ಎಂದು ಬಿಂಬಿಸಿ, ನಂಬಿಸಿ ಒಟ್ಟು 13 ಲಕ್ಷಕ್ಕೂ ಮಿಕ್ಕಿದ ಹಣವನ್ನು ಪಡೆದಿರುತ್ತಾಳೆಂದು ತಿಳಿಸಿರುತ್ತಾರೆ.

ನಿವೃತ್ತಿ ವೇಳೆ ತಂದೆಗೆ ದೊರೆತ ಹಣ ನೀರುಪಾಲು!!

ನಿಗಮವೊಂದರ ಉದ್ಯೋಗಿಯಾಗಿದ್ದ ರಕ್ಷಿತಾರವರ ತಂದೆ ಇತ್ತೀಚೆಗೆ ನಿವೃತ್ತಿಯಾಗಿದ್ದು, ನಿವೃತ್ತಿಯ ವೇಳೆ ದೊರಕಿದ ಹಣದಲ್ಲಿ ಮಗಳ ಭವಿಷ್ಯ ಉಜ್ವಲವಾಗಲಿ ಎಂದು ಮೊದಲ ಕಂತು ನೀಡಿದ್ದರು. ಬಳಿಕ ಮೊದಲು ಕೊಟ್ಟ ಹಣದ ಸುರಕ್ಷತೆಯ ನೆಲೆಯಲ್ಲಿ ಮತ್ತೆ ಮತ್ತೆ ಹಣವನ್ನು ಪಾವತಿಸುತ್ತಾ ಹೋದ ಅವರು ಇದೀಗ ವಂಚನಾ ಜಾಲ ಬಹಿರಂಗಗೊಂಡ ಬಳಿಕ ಆಘಾತಕ್ಕೆ ಒಳಗಾಗಿ ಅಸ್ವಸ್ಥಗೊಂಡಿದ್ದಾರೆ.

ರಕ್ಷಿತಾ ರೈವರ ಪತಿ ಕೂಡ ಕಿದೂರಿನವರಾಗಿದ್ದಾರೆ. ಆದರೇ ಉಪ್ಪಿನಂಗಡಿಯ ಬ್ಯಾಂಕ್ ಖಾತೆಯಿಂದ ಹಂತ ಹಂತವಾಗಿ ಹಣವನ್ನು ಸುಚಿತಾ ರೈಯವರಿಗೆ ರಕ್ಷಿತಾರವರು ನೀಡಿದ್ದು ಹೀಗಾಗಿ ಕೇಸ್ ಅನ್ನು ಉಪ್ಪಿನಂಗಡಿ ಠಾಣೆಯಲ್ಲಿ ದಾಖಲಾಗಿದೆ. ಉಪ್ಪಿನಂಗಡಿ ಪೊಲೀಸರು ಕಾಸರಗೋಡಿಗೆ ತೆರಳಿ ಆರೋಪಿಯನ್ನು ಬಂಧಿಸುವ ಸಾಧ್ಯತೆಯಿದೆ ಎನ್ನಲಾಗಿದೆ.

ಸುಚಿತಾ ರೈವರು ಇದೆ ರೀತಿ ಹಲವರಿಗೆ ಮೋಸ ಮಾಡಿದ್ದಾರೆ ಎನ್ನುವ ಆರೋಪಗಳು ಕೇಳಿ ಬಂದಿದೆ.ಉದ್ಯೋಗದ ಭರವಸೆಯನ್ನು ನೀಡಿ ಬಡಪಾಯಿಗಳಿಂದ ಹಣವನ್ನು ದೋಚುವ ಇಂತಹ ಜಾಲವನ್ನು ಮಟ್ಟ ಹಾಕಿ ವಂಚನೆಗೆ ಒಳಗಾದವರಿಗೆ ನ್ಯಾಯ ಒದಗಿಸುವ ಬಗ್ಗೆ ಸರಕಾರ ಗಮನ ಹರಿಸಬೇಕಾಗಿದೆ ಎಂಬ ಆಗ್ರಹ ಎಲ್ಲೆಡೆ ವ್ಯಕ್ತವಾಗುತ್ತಿದೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

Related Posts

ಜಗನ್ನೀವಾಸ್ ರಾವ್ ಅವರ ವಿರುದ್ಧವೂ ಕ್ರಮ!! ಇದುವರೆಗೆ ಪ್ರತಿಕ್ರಿಯೆ ನೀಡದಿರುವುದರ ಬಗ್ಗೆಯೂ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ

ಪುತ್ತೂರು: ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅವರು ಗುರುವಾರ ಪುತ್ತೂರಿನ ಬಿಜೆಪಿ ಕಚೇರಿಗೆ…

ಕ್ರಿಯಾಶೀಲ ವ್ಯಕ್ತಿ ಮರಣದ ಬಳಿಕವೂ ಸಜೀವ | ಕಲಾಸಿರಿ ಗೊಂಬೆ ಬಳಗದ ಅಣ್ಣಪ್ಪ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಉದಯ್

ಸಮಾಜದ ಕಟ್ಟಕಡೆಯ ವ್ಯಕ್ತಿಗಾಗಿ ಯಾರ ಮನಸ್ಸು ಮಿಡಿಯುತ್ತದೆಯೋ ಅವರು ಸಜೀವ ಆಗಿರುತ್ತದೆ ಎಂದು…

1 of 137