tamanvi
ಸ್ಥಳೀಯ

ವಾಣಿಜ್ಯ ಸಂಕೀರ್ಣದ ಮುಂದೆ ಬ್ಯಾನರ್: ಗ್ರಾಪಂಗೆ ದೂರು | ತಕ್ಷಣ ತೆರವುಗೊಳಿಸಲು ಸೂಚನೆ: ಪಿಡಿಓ

ಈ ಸುದ್ದಿಯನ್ನು ಶೇರ್ ಮಾಡಿ

ಪೆರಾಬೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಂತೂರು ಕೆಳಗಿನ ಪೇಟೆಯಲ್ಲಿ ರಸ್ತೆ ಬದಿಯ ವಾಣಿಜ್ಯ ಸಂಕೀರ್ಣವೊಂದರ ಮುಂಭಾಗ ಬ್ಯಾನರ್ ಹಾಕಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ.

ತಮ್ಮ ವಾಣಿಜ್ಯ ಸಂಕೀರ್ಣದ ಮುಂದೆ ಬ್ಯಾನರ್ ಹಾಕಿದ್ದು, ದೈನಂದಿನ ವ್ಯವಹಾರಕ್ಕೆ ತೊಡಕಾಗಿದೆ ಎಂದು ಪೆರಾಬೆ ಗ್ರಾಮ ಪಂಚಾಯತ್ ಪಿಡಿಓ ಅವರಿಗೆ ದೂರು ನೀಡಿದ್ದಾರೆ. ತಕ್ಷಣದಲ್ಲೇ ಇದನ್ನು ತೆರವು ಮಾಡಿ, ಕ್ರಮ ಕೈಗೊಳ್ಳುವಂತೆಯೂ ಆಗ್ರಹಿಸಿದ್ದಾರೆ.

ಜೂನ್ 2ರಂದು ಬ್ಯಾನರ್ ಅಳವಡಿಸಲಾಗಿತ್ತು. ಇದರ ಬಗ್ಗೆ ಗ್ರಾಮ ಪಂಚಾಯತ್ ಪಿಡಿಓ ಅವರ ಗಮನಕ್ಕೆ ತಂದಿದ್ದೇನೆ. ಆದರೆ ಆಗ ಅನುಮತಿ ನೀಡಿರಲಿಲ್ಲ. ತಾನು ದೂರು ನೀಡಿದ ಬಳಿಕ ಗ್ರಾಮ ಪಂಚಾಯತ್’ನಿಂದ ಅನುಮತಿ ಪಡೆದುಕೊಂಡಿದ್ದಾರೆ. ಇದರ ಬಗ್ಗೆ ಪಿಡಿಓ ಅವರಲ್ಲಿ ವಿಚಾರಿಸಿದಾಗ, ಒಂದು ವಾರದಲ್ಲಿ ಬ್ಯಾನರ್ ತೆರವು ಮಾಡುತ್ತಾರೆ ಎಂದು ತಿಳಿಸಿದ್ದರು. ಇದೀಗ 10 ದಿನ ಕಳೆದಿದೆ. ಆದರೂ ಬ್ಯಾನರ್ ತೆರವು ಮಾಡಿಲ್ಲ ಎಂದು ಕುಂತೂರು ಮಲ್ಲಿಕಾ ಲೇಡಿಸ್ ಟೈಲರ್ ಮಾಲಕಿ ಮಲ್ಲಿಕಾ ಅವರು ತಿಳಿಸಿದ್ದಾರೆ.

ತಕ್ಷಣ ತೆರವಿಗೆ ಸೂಚನೆ: ಪಿಡಿಓ

ಯಾರಿಗೂ ಸಮಸ್ಯೆ ಆಗುವ ರೀತಿಯಲ್ಲಿ ಬ್ಯಾನರ್ ಹಾಕಲೇ ಬಾರದು. ಕುಂತೂರು ಬಳಿ ವಾಣಿಜ್ಯ ಸಂಕೀರ್ಣದ ಮುಂದೆ ಬ್ಯಾನರ್ ಹಾಕಿದ್ದು, ಅದಕ್ಕೆ ಅನುಮತಿ ಪಡೆದುಕೊಂಡಿದ್ದಾರೆ. ಈ ಬ್ಯಾನರನ್ನು ತೆಗೆಸುವಂತೆ ವಾಣಿಜ್ಯ ಸಂಕೀರ್ಣದವರು ಮನವಿಯನ್ನು ನೀಡಿದ್ದಾರೆ. ತಕ್ಷಣದಲ್ಲೇ ತೆರವು ಮಾಡಲು ಸೂಚಿಸಲಾಗುವುದು.

ಅಮ್ಮಿ ಬಿ.ಪಿ., ಪಿಡಿಓ, ಪೆರಾಬೆ ಗ್ರಾಪಂ


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

1 of 135