Gl harusha
ಪ್ರಚಲಿತಸ್ಥಳೀಯ

ಅ. 21: ಸೋಮವಾರದ ಪುತ್ತೂರು ಸಂತೆ ರದ್ದು!!

ಪುತ್ತೂರು: ಐತಿಹಾಸಿಕ ಪುತ್ತೂರು ಸಂತೆಯನ್ನು ಅ. 21ರಂದು ರದ್ದು ಪಡಿಸಿ ನಗರಸಭೆ ಪೌರಾಯುಕ್ತರು ಆದೇಶ ಹೊರಡಿಸಿದ್ದಾರೆ.

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಐತಿಹಾಸಿಕ ಪುತ್ತೂರು ಸಂತೆಯನ್ನು ಅ. 21ರಂದು ರದ್ದು ಪಡಿಸಿ ನಗರಸಭೆ ಪೌರಾಯುಕ್ತರು ಆದೇಶ ಹೊರಡಿಸಿದ್ದಾರೆ.

srk ladders
Pashupathi
Muliya

ದಕ್ಷಿಣ ಕನ್ನಡ ಸ್ಥಳೀಯ ಪ್ರಾಧಿಕಾರ ಕ್ಷೇತ್ರದಿಂದ ವಿಧಾನ ಪರಿಷತ್‌ಗೆ ನೂತನ ಸದಸ್ಯರೋರ್ವರ (MLC) ಆಯ್ಕೆಗಾಗಿ ಅ. 21ರಂದು ಉಪಚುನಾವಣೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಸಂತೆ ರದ್ದುಗೊಳಿಸಲಾಗಿದೆ.

ನಗರಸಭಾ ಕಚೇರಿಯೂ ಮತಗಟ್ಟೆಯಾಗಿದ್ದು ಮತಗಟ್ಟೆಯ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದೆ. ಹಾಗಾಗಿ ಅ. 21ರಂದು ಕಿಲ್ಲೆ ಮೈದಾನದಲ್ಲಿ ನಡೆಯಬೇಕಿದ್ದ ಸೋಮವಾರದ ಸಂತೆಯನ್ನು ರದ್ದು ಪಡಿಸಲಾಗಿದೆ ಎಂದು ನಗರಸಭೆ ಪೌರಾಯುಕ್ತ ಮಧು ಎಸ್.ಮನೋಹರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ

Related Posts