tamanvi
ಪ್ರಚಲಿತ

ಮಡಿಕೇರಿಯಲ್ಲಿ ಮಳೆಯ ಆರ್ಭಟ| ಸ್ಟೋನ್‌ ಹಿಲ್‌ನಿಂದ ಕಸದ ರಾಶಿ ಕುಸಿತ

D_shiva_bhat

ಈ ಸುದ್ದಿಯನ್ನು ಶೇರ್ ಮಾಡಿ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಭಾರಿ ಮಳೆಯ ನಡುವೆಯೇ ಮಡಿಕೇರಿ ನಗರದ ಸ್ಟೋನ್‌ ಹಿಲ್‌ ಬೆಟ್ಟದಲ್ಲಿ ಭೂಕುಸಿತ ಸಂಭವಿಸಿದೆ. ಬೆಟ್ಟದ ಮೇಲ್ಭಾಗದಲ್ಲಿ ವರ್ಷಗಳಿಂದ ಸಂಗ್ರಹವಾಗಿದ್ದ ನೂರಾರು ಟನ್‌ ಕಸದ ರಾಶಿ ಮಣ್ಣು ಮತ್ತು ನೀರಿನೊಂದಿಗೆ ಕೆಳಭಾಗಕ್ಕೆ ಕೊಚ್ಚಿ ಬಂದಿದೆ.

maithri

ಬೆಟ್ಟದ ಮೇಲ್ಭಾಗದಲ್ಲಿ ಅವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡುತ್ತಿರುವುದೇ ಭೂಕುಸಿತಕ್ಕೆ ಪ್ರಮುಖ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದು, ನಗರಸಭೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪೊಲೀಸ್‌ ವಸತಿಗೃಹಗಳಿಗೆ ಕಸದ ರಾಶಿಯ ಆತಂಕ

ಸ್ಟೋನ್‌ ಹಿಲ್‌ನ ಕೆಳಭಾಗದಲ್ಲಿರುವ ಪೊಲೀಸ್‌ ವಸತಿ ಸಮುಚ್ಚಯದತ್ತ ಕಸ ಹಾಗೂ ಮಣ್ಣಿನ ರಾಶಿ ಹರಿದುಬಂದಿದ್ದು, ಅಲ್ಲಿನ ನಿವಾಸಿಗಳಲ್ಲಿ ಆತಂಕ ಮೂಡಿಸಿದೆ. ಹೆಚ್ಚಿನ ಪ್ರಮಾಣದಲ್ಲಿ ಮಣ್ಣು ಹಾಗೂ ಕಸ ಮತ್ತಷ್ಟು ಕುಸಿದುಬಂದರೆ ವಸತಿಗೃಹಗಳಿಗೆ ಅಪಾಯ ಎದುರಾಗುವ ಸಾಧ್ಯತೆ ಇದೆ.

ಸ್ಥಳೀಯ ನಗರಸಭೆ ಸದಸ್ಯ ಅಪ್ಪಣ್ಣ ಮಾತನಾಡಿ, ಬೆಟ್ಟದಲ್ಲಿ ಸಂಗ್ರಹವಾಗಿರುವ ಕಸವನ್ನು ಕೂಡಲೇ ತೆರವುಗೊಳಿಸುವುದರ ಜೊತೆಗೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಭಾರಿ ಅನಾಹುತ ಸಂಭವಿಸುವ ಸಾಧ್ಯತೆ ಇದೆ ಎಂದು ಎಚ್ಚರಿಸಿದ್ದಾರೆ.

ಆಕಾಶವಾಣಿ ಟವರ್‌ ಬಳಿ ತಡೆಗೋಡೆ ಕುಸಿತ

ಇನ್ನೊಂದೆಡೆ, ಭಾರಿ ಮಳೆಯಿಂದಾಗಿ ಮಡಿಕೇರಿಯ ಆಕಾಶವಾಣಿ ಟವರ್‌ ಬಳಿ ನಿರ್ಮಾಣ ಹಂತದಲ್ಲಿದ್ದ ತಡೆಗೋಡೆಯೂ ಕುಸಿದಿದೆ. ಘಟನೆಯ ವೇಳೆ ಸ್ಥಳದಲ್ಲಿದ್ದ ಕಾರ್ಮಿಕರು ಅಪಾಯದಿಂದ ಪಾರಾಗಿದ್ದಾರೆ.

2018ರ ಮಳೆಗಾಲದಲ್ಲಿ ಇದೇ ಪ್ರದೇಶದಲ್ಲಿ ಬರೆ ಕುಸಿತ ಸಂಭವಿಸಿತ್ತು. ಈ ಹಿನ್ನೆಲೆಯಲ್ಲಿ ಮಳೆಗಾಲದಲ್ಲಿ ಮತ್ತೆ ಬರೆ ಕುಸಿಯದಂತೆ ತಡೆಗೋಡೆ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗಿತ್ತು.  ನಿರಂತರ ಮಳೆಯಿಂದಾಗಿ ಮಣ್ಣಿನಲ್ಲಿ ತೇವಾಂಶ ಹೆಚ್ಚಾಗಿ ಮೇಲ್ಭಾಗದ ಮಣ್ಣು ಸಣ್ಣ ಪ್ರಮಾಣದಲ್ಲಿ ಕುಸಿದಿದೆ.

ಭಾರಿ ಮಳೆಯ ಹಿನ್ನೆಲೆಯಲ್ಲಿ ಸ್ಟೋನ್‌ ಹಿಲ್‌ ಹಾಗೂ ಆಕಾಶವಾಣಿ ಟವರ್‌ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಧಿಕಾರಿಗಳು ಮುನ್ನೆಚ್ಚರಿಕೆ ವಹಿಸುವ ಅಗತ್ಯವಿದೆ.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ನಿಂತ್ರೆ ನಿಂತ ಹಾಗೇ – ಬೆಲ್ ಬಾಟಂ ಸಿನಿಮಾ ಮಾದರಿಯ ಡ್ರಗ್!! ಇಬ್ಬರು ಯುವಕರ ವಿಚಿತ್ರ ವರ್ತನೆಗೆ ಸಾರ್ವಜನಿಕರ ಆತಂಕ!

ರಾಜಸ್ಥಾನ: ಶ್ರೀ ಗಂಗಾನಗರದಲ್ಲಿ ಇಬ್ಬರು ಯುವಕರು ರಸ್ತೆಬದಿಯಲ್ಲಿ ಯಾವುದೇ ಚಲನೆಯಿಲ್ಲದೆ…