Gl
ಪ್ರಚಲಿತ

ಅಡ್ಯನಡ್ಕ ಕರ್ಣಾಟಕ ಬ್ಯಾಂಕ್ ದರೋಡೆ: ಮೂವರು ಪೊಲೀಸ್ ವಶಕ್ಕೆ | ಮಂಗಳೂರಿನಲ್ಲೂ ಕಳ್ಳತನ ನಡೆಸಿ ತಲೆಮರೆಸಿಕೊಂಡಿದ್ದ ತಂಡ!!

ಈ ಸುದ್ದಿಯನ್ನು ಶೇರ್ ಮಾಡಿ

ವಿಟ್ಲ: ಅಡ್ಯನಡ್ಕ ಕರ್ಣಾಟಕ ಬ್ಯಾಂಕ್ ದರೋಡೆ ಪ್ರಕರಣದಲ್ಲಿ ಪ್ರಮುಖ ಮೂವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಆರೋಪಿಗಳನ್ನು ರಫೀಕ್‌ ಯಾನೆ ಗೂಡಿನ ಬಳಿ ರಫೀಕ್‌, ಮೂಲತಃ ಸುಳ್ಯದ ಕೊಯಿಲ, ಕಾಸರಗೋಡಿನ ಚೌಕಿ ನಿವಾಸಿ ಖಲಂದರ್‌ ಹಾಗೂ ಬಾಯಾರು ನಿವಾಸಿ ದಯಾನಂದ ಎಂದು ಗುರುತಿಸಲಾಗಿದೆ.
ಫೆಬ್ರವರಿ 7ರಂದು ರಾತ್ರಿ ಬ್ಯಾಂಕ್ ಕಟ್ಟಡದ ಹಿಂಬದಿ ಕಿಟಕಿಯ ಸರಳುಗಳನ್ನು ತುಂಡರಿಸಿ ಒಳನುಗ್ಗಿದ ಖದೀಮರು ಕೋಟ್ಯಾಂತರ ರೂ. ಮೌಲ್ಯದ ಚಿನ್ನಾಭರಣ ಹಾಗೂ ಹದಿನಾರು ಲಕ್ಷಕ್ಕೂ ಅಧಿಕ ಮೊತ್ತದ ನಗದು ಹಣ ದರೋಡೆಗೈದಿದ್ದರು.
ಒಟ್ಟು ಈ ಪ್ರಕರಣದಲ್ಲಿ ಐವರು ಆರೋಪಿಗಳಿದ್ದು 3 ಜನರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಇನ್ನಿಬ್ಬರಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ಇದೇ ತಂಡ ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಎರಡು ಕಳ್ಳತನ ಕೃತ್ಯ ಎಸಗಿ ತಲೆಮರೆಸಿಕೊಂಡಿದ್ದರು.
ಅಡ್ಯನಡ್ಕ ಕರ್ನಾಟಕ ಬ್ಯಾಂಕ್ ಕಳ್ಳತನ ಮಾಡಿದ ಈ ತಂಡ ಹಿಂದಿನ ದಿನ ಬಂದು ಸಂಚು ರೂಪಿಸಿದ್ದರು. ಮರುದಿನ ಬಂದ ಐವರ ತಂಡದಲ್ಲಿ 4 ಜನ ಬ್ಯಾಂಕಿನ ಕಿಟಕಿ ಮುರಿದು ಒಳ ನುಗ್ಗಿ ಕೃತ್ಯ ಎಸಗಿದ್ದಾರೆ. ಒಬ್ಬ ಹೊರಗಡೆಯಿಂದ ಸುಳಿವು ನೀಡುತ್ತಿದ್ದ ಎನ್ನಲಾಗಿದೆ.
ಬಂಧಿಸಿದ ಪ್ರಮುಖ ಆರೋಪಿಗಳಲ್ಲಿ ರಫೀಕ್‌ ಯಾನೆ ಗೂಡಿನ ಬಳಿ ರಫೀಕ್‌ ಈತನ ಮೇಲೆ ದರೋಡೆ, ಕಳ್ಳತನದ ಹಲವಾರು ಪ್ರಕರಣಗಳಿವೆ. ಖಲಂದರ್‌ ಎಂಬಾತನ ಮೇಲೆ ಕಣ್ಣೂರು, ಪುತ್ತೂರು, ವಿಟ್ಲ, ಸಂಪ್ಯ ಠಾಣೆಗಳಲ್ಲಿ ಈ ಹಿಂದೆ ಅನೇಕ ಕಳ್ಳತನ ಪ್ರಕರಣಗಳಿವೆ.
ಬಾಯಾರು ನಿವಾಸಿ ದಯಾನಂದ ಎಂಬವನು ವೆಲ್ಡಿಂಗ್‌ ಕೆಲಸ ಮಾಡುತ್ತಿದ್ದು, ಈತ ಹಣದ ಆಸೆಗೊಸ್ಕರ ಇದೇ ಮೊದಲ ಬಾರಿ ಈ ಖರ್ತನಾಕ್‌ ತಂಡದೊಂದಿಗೆ ಸೇರಿಕೊಂಡು ಸ್ಟ್ರಾಂಗ್ ರೂಮಿನ ಭಾರಿ ಭದ್ರತೆಯ ಕಬ್ಬಿಣದ ಬಾಗಿಲನ್ನು ಗ್ಯಾಸ್ ಕಟ್ಟರ್ ಮೂಲಕ ತುಂಡರಿಸುವಲ್ಲಿ ಈತನ ಪ್ರಮುಖ ಪಾತ್ರವಿದೆ.
ದ.ಕ. ಜಿಲ್ಲಾ ಎಸ್ಪಿ ರಿಷ್ಯಂತ್‌ ನೇತೃತ್ವದಲ್ಲಿ ಬೇರೆ ಬೇರೆ ವಿಶೇಷ ತಂಡಗಳನ್ನು ರಚಿಸಿ ಈ ಪ್ರಕರಣವನ್ನು ಬೇಧೀಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಈ ಸುದ್ದಿಯನ್ನು ಶೇರ್ ಮಾಡಿ
Astrologer

Related Posts

ಮುಸ್ಲಿಂ ಯುವಕನನ್ನು ಹೊರಹಾಕಿ ಎಂದ ಸಚಿವ ಗುಂಡೂರಾವ್! ಮಾಧ್ಯಮದೊಂದಿಗೆ ಮಾತನಾಡಿ ತನ್ನ ಅಳಲು ತೋಡಿಕೊಂಡ ಯುವಕ!

ಸುದ್ದಿಗೋಷ್ಠಿ ನಡೆಯುತ್ತಿರುವ ನಡುವೆಯೇ ತನ್ನ ಆಕ್ರೋಶ ವ್ಯಕ್ತಪಡಿಸುತ್ತಿದ್ದ ಯುವಕನೋರ್ವನನ್ನು…

ಉಪ್ಪಿನಂಗಡಿ ಮುಖ್ಯರಸ್ತೆಗೆ ಸ್ವಾತಂತ್ರ್ಯ ಹೋರಾಟಗಾರ ಹುತಾತ್ಮ ಮಂಜ ಬೈದ್ಯ ಹೆಸರು | ಶಾಸಕ ಅಶೋಕ್ ರೈ ಘೋಷಣೆ

ಬಿಲ್ಲವ ಸಮುದಾಯಕ್ಕೆ ಸೇರಿದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿ ಹುತಾತ್ಮರಾದ ಉಪ್ಪಿನಂಗಡಿ…

ಜಾರುಬಂಡಿಯಲ್ಲ; ಇದು ಹೆದ್ದಾರಿ ಸಂಪರ್ಕದ ಕೊಂಡಿ!! ಆರ್ಯಾಪು ಗ್ರಾಪಂ ವ್ಯಾಪ್ತಿಯ, ಜಿಪಂ ರಸ್ತೆಯ ದುಸ್ಥಿತಿಗೊಂದು ಹಿಡಿಶಾಪ!

ಸಂಪ್ಯದಿಂದ ದೇವಸ್ಯ - ಒಳತ್ತಡ್ಕಕ್ಕೆ ಸಮೀಪದಿಂದ ಸಂಪರ್ಕಿಸುವ ಬಳಸು ದಾರಿ ಸಂಪ್ಯ - ಕೋಟ್ಲಾರ್ -…