tamanvi
ಧಾರ್ಮಿಕ

ಕುಕ್ಕೆ ಸುಬ್ರಹ್ಮಣ್ಯ ದೇವರ ದರ್ಶನಕ್ಕೆ ಹೆಚ್ಚುವರಿ ಸಮಯ: ಬದಲಾದ ದರ್ಶನ ಸಮಯ ಇಲ್ಲಿದೆ

D_shiva_bhat

ಈ ಸುದ್ದಿಯನ್ನು ಶೇರ್ ಮಾಡಿ

ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ದೇವರ ದರ್ಶನ ಸಮಯ ಬದಲಾವಣೆಯಾಗಿದ್ದು, ಭಕ್ತರಿಗೆ ಅನುಕೂಲವಾಗಿದೆ.

maithri

ಇದುವರೆಗೆ ಮಧ್ಯಾಹ್ನ 1.30ರಿಂದ 3.30ರವೆರೆಗೆ ದೇವಾಲಯ ಬಂದ್ ಆಗುತ್ತಿತ್ತು. ಅಂದರೆ 2 ಗಂಟೆಗಳ ಕಾಲ ಭಕ್ತರಿಗೆ ದರ್ಶನಕ್ಕೆ ಅವಕಾಶ ಇರಲಿಲ್ಲ. ಇದೀಗ ಈ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ.

ವ್ಯವಸ್ಥಾಪನಾ ಸಮಿತಿ ಈ ಬಗ್ಗೆ ನಿರ್ಣಯ ಕೈಗೊಂಡಿದ್ದು, ಅಧ್ಯಕ್ಷ ಹರೀಶ್ ಇಂಜಾಡಿ ಮಾಹಿತಿ ನೀಡಿದ್ದಾರೆ. ಇನ್ನು ಮುಂದೆ ಮಧ್ಯಾಹ್ನ 2ರಿಂದ 3ರವರೆಗೆ ದೇವಾಲಯ ಬಂದ್ ಮಾಡಲಾಗುವುದು. ದೇವರ ದರ್ಶನಕ್ಕೆ ಹೆಚ್ಚುವರಿ 1 ಗಂಟೆ ಲಭಿಸಲಿದೆ.

ಬೆಳಗ್ಗೆ 6.30 ರಿಂದ 2 ಗಂಟೆ ತನಕ ಮಧ್ಯಾಹ್ನ 3ರಿಂದ 8.30ರ ತನಕ ದೇವರ ದರ್ಶನ ಇರಲಿದೆ. ಮಹಾಮಂಗಳಾರತಿ ಸಮಯ ಮಾತ್ರ ಈ ಹಿಂದಿನಂತೆ ಅಲ್ಪ ಕಾಲ ದೇವರ ದರ್ಶನ ಸ್ಥಗಿತಗೊಳಿಸಲಾಗುತ್ತದೆ. ಈ ವ್ಯವಸ್ಥೆ ಮೇ 10ರಿಂದಲೇ ಜಾರಿಯಾಗಿರುವುದಾಗಿ ತಿಳಿಸಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts