tamanvi
ಸ್ಥಳೀಯ

ರೋಹಿಣಿ ನೆಹರುನಗರ ಅವರಿಗೆ ಶಿವಶರಣೆ ಗಂಗಾಬಿಕೆ ಪುರಸ್ಕಾರ

D_shiva_bhat

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಎಂ.ಪಿ. ರೋಹಿಣಿ ರಾಘವ ಆಚಾರ್ಯ ಅವರಿಗೆ ಬೆಂಗಳೂರಿನಲ್ಲಿ ಶಿವ ಶರಣೆ ಗಂಗಾಬಿಕೆ ಪುರಸ್ಕಾರವನ್ನು ಪ್ರಧಾನ ಮಾಡಲಾಯಿತು.

maithri

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ವಿಶ್ವ ಕನ್ನಡ ಕಲಾ ಸಂಸ್ಥೆ ಬೆಂಗಳೂರಿನ ಹೆಸರುಘಟ್ಟ ಮುಖ್ಯರಸ್ತೆಯ ಇಂಡೋ ಗ್ಲೋಬ್ ಪಪೂ ಕಾಲೇಜಿನಲ್ಲಿ ಆಯೋಜಿಸಿದ್ದ ವಿಶ್ವ ಕನ್ನಡ ಅಂತರಾಷ್ಟ್ರೀಯ ಮಹಿಳಾ ಸಾಹಿತ್ಯ ಸಮ್ಮೇಳನದಲ್ಲಿ ಸಾಮಾಜಿಕ ಕ್ಷೇತ್ರದ ಸಾಧನೆಗಾಗಿ ಈ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಪ್ರಶಸ್ತಿ ಪುರಸ್ಕೃತರಿಗೆ ಭಾಗೀನ ನೀಡಿ ಗೌರವ ನೀಡಲಾಯಿತು. ಕಾಲೇಜಿನ ಸಂಸ್ಥಾಪಕ ಅಧ್ಯಕ್ಷ ಟಿ.ಎಂ. ಗೌಡ, ಕಾದಂಬರಿಗಾರ್ತಿಗಳಾದ ಸಿ. ನಂದಿನಿ, ಪಿ. ಚಂದ್ರಿಕಾ, ಇಂದು ಸಂಜೆ ಸಂಸ್ಥಾಪಕಿ ಪದ್ಮ ನಾಗರಾಜ್, ಈ. ರವೀಶ ಮೊದಲಾದವರು ಉಪಸ್ಥಿತರಿದ್ದರು.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

1 of 128