ಪುತ್ತೂರು: ಪುತ್ತೂರು ಸೇರಿದಂತೆ ಗ್ರಾಮಾಂತರ ಭಾಗದಲ್ಲಿರುವ ಗೂಡ್ಸ್ ವಾಹನಗಳಾದ ಪಿಕಪ್ ಹಾಗೂ ಇನ್ನಿತರ ವಾಹನದ ಮೇಲೆ ಪೊಲೀಸರು ಕೇಸು ಹಾಕುವ ಮೂಲಕ ತೊಂದರೆ ನೀಡುತ್ತಿದ್ದಾರೆ ಎಂದು ಆರೋಪಿಸಿ ಗೂಡ್ಸ್ ವಾಹನ ಚಾಲಕ, ಮಾಲಕರು ಶಾಸಕ ಅಶೋಕ್ ರೈ ಅವರಿಗೆ ದೂರು ನೀಡಿದ್ದಾರೆ.
ಶಾಸಕರಿಗೆ ನೀಡಿದ ದೂರಿನಲ್ಲಿ “ ಗೂಡ್ಸ್ ವಾಹನ ಚಾಲಕ ಮತ್ತು ಮ್ಹಾಲಕರ ಸಂಘದಲ್ಲಿ ನೊಂದಾಯಿತ ೫೦ ಜನ ಸದಸ್ಯರಿದ್ದಾರೆ. ದೈನಂದಿನ ಜೀವನಕ್ಕೆ ಸಂಘವಾಗಿದ್ದು ಸಂಘದಲ್ಲಿ ಒಟ್ಟು ಆರ್ಥಿಕವಾಗಿ ತುಂಬಾ ಹಿಂದುಳಿದಿರುವವರಾಗಿದ್ದು. ವಾಹನದಲ್ಲಿ ಹಾರ್ಡ್‌ವೇರ್ ಕಲ್ಲು. ಹೊಯಿಗೆ ವಸ್ತುಗಳನ್ನು ವಾಹನದಿಂದ ಬೇಕಾಗಿ ಸಣ್ಣ ಪುಟ್ಟ ಹೊರಗೆ ಬರುವಂತಹ ಸಿಮೆಂಟು, ತಗಡು ಶೀಟು ಮತ್ತು ಕಬ್ಬಿಣದ ರಾಡ್‌ಗಳನ್ನು ಸಾಗಾಟ ಮಾಡಿ ಬಾಡಿಗೆ ಮಾಡುತ್ತಿದ್ದೇವೆ.ನಮ್ಮ ವಾಹನಗಳಿಗೆ ಬಾಡಿಗೆ ಸಿಗುವುದೇ ಕಡಿಮೆ ಆಗಿದೆ. ಸಿಗುವಂತಹ ಬಾಡಿಗೆಯಿಂದ ನಮ್ಮನ್ನು ನಂಬಿರುವ ಕುಟುಂಬದ ಜೀವನ ಸಾಗುವುದಾಗಿದೆ.ಒಂದು ವರ್ಷದಿಂದ ಪೊಲೀಸ್ ಇಲಾಖೆಯವರು ಕ್ಷುಲ್ಲಕ ಕಾರಣವನ್ನು ಒಡ್ಡಿ ಗೂಡ್ಸ್ ವಾಹನದ ಮೇಲೆ ಕೇಸು ಮಾಡುತ್ತಿದ್ದಾರೆ. ಈ ರೀತಿಯಿಂದ ಬಡ ಚಾಲಕ ಮಾಲಿಕರಿಗೆ ಮಾನಸಿಕ ಹಿಂಸೆ ಆಗಿದೆ. ಆದುದರಿಂದ ನಮ್ಮ ಮೇಲೆ ಯದ್ವ ತದ್ವ, ಕೇಸು ಹಾಕುತ್ತಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಗೂಡ್ಸ್ ವಾಹನ ಚಾಲಕರು ಉಪಸ್ಥಿತರಿದ್ದರು.
ಬಡ ಚಾಲಕರಿಗೆ ತೊಂದರೆ ನೀಡದಂತೆ ಶಾಸಕರ ಸೂಚನೆ
ದೂರು ಸ್ವೀಕರಿಸಿದ ಶಾಸಕರು ಪೊಲೀಸ್ ಇಲಾಖೆಗೆ ಕರೆ ಮಾಡಿ ಬಡ ವಾಹನ ಚಾಲಕರ ಮೇಲೆ ಕ್ಷುಲ್ಲಕ ಕಾರಣ ಒಡ್ಡಿ ಯಾವುದೇ ಕೇಸುಗಳನ್ನು ಮಾಡಬೇಡಿ. ಕಾನೂನಿಗೆ ವಿರುದ್ದವಾಗಿ ಮನಡೆದರೆ ಮಾತ್ರ ಕೇಸು ದಾಖಲಿಸಿ. ದಿನದ ಹೊಟ್ಟೆ ಪಾಡಿಗಾಗಿ ಅವರು ಬೆಳಿಗ್ಗೆಯಿಂದ ರಾತ್ರಿ ತನಕ ಬಾಡಿಗೆ ಮಾಡಿ ಕುಟುಂಬವನ್ನು ಸಲಹುತ್ತಿದ್ದಾರೆ. ಕೇಸು ಹಾಕಿ ದಂಡ ವಿಧಿಸಿದರೆ ಅವರು ಕುಟುಂಬವನ್ನು ಸಾಕುವುದಾದರೂ ಹೇಗೆ? ಬಡವರ ಅನ್ನಕ್ಕೆ ಕಲ್ಲು ಹಾಕುವ ಕೆಲಸವನ್ನು ಪೊಲೀಸ್ ಇಲಾಖೆ ಮಾಡಬಾರದು. ಬಡವರ ಮೇಲೆ ಕರುಣೆಯಿಂದ ವರ್ತಿಸಬೇಕು ಎಂದು ಸೂಚನೆ ನೀಡಿದ ಶಾಸಕರು ಕಾನೂನಿಗೆ ವಿರುದ್ದವಾಗಿ ಯಾರೇ ಆಗಲಿ ಏನೇ ಮಾಡಿದರೂ ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಕೇಸು ದಾಖಲಿಸಿ ಆದರೆ ಕ್ಷುಲ್ಲಕ ವಿಚಾರಕ್ಕೆ ಕೇಸು ಮಾಡದಂತೆ ಶಾಸಕರು ಸೂಚನೆಯನ್ನು ನೀಡಿದ್ದಾರೆ.























