tamanvi
ಪ್ರಚಲಿತ

ಜೆಸಿಐ ಪುತ್ತೂರು ನಿಯೋ ಪ್ರೈಮ್ ಅಧಿಕೃತ ಉದ್ಘಾಟನೆ, ಲೋಗೋ ಅನಾವರಣ

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಜೆಸಿಐ ಉಡುಪಿ ಸಿಟಿ ಪ್ರಾಯೋಜಕತ್ವದ ಜೆಸಿಐ ಪುತ್ತೂರು ನಿಯೋ ಪ್ರೈಮ್ ಇದರ ಉದ್ಘಾಟನೆ ಹಾಗೂ ಲೋಗೋ ಅನಾವರಣ ಕಾರ್ಯಕ್ರಮ ಶುಕ್ರವಾರ ಸಂಜೆ ಬಪ್ಪಳಿಗೆ ರಸ್ತೆಯ ಸಂಭ್ರಮ ಹಾಲ್’ನಲ್ಲಿ ನೆರವೇರಿತು.

ಜೆಸಿಐ ಉಡುಪಿ ಸಿಟಿಯ ಅಧ್ಯಕ್ಷೆ ಪಲ್ಲವಿ ಕೊಡಗು ಅಧ್ಯಕ್ಷತೆ ವಹಿಸಿದ್ದು, ಜೆಸಿಐ ಪುತ್ತೂರು ನಿಯೋ ಪ್ರೈಮ್ ಚಾರ್ಟರ್ ಅಧ್ಯಕ್ಷೆ ಅಶ್ವಿನಿ ಕೆ. ಅವರಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಉಳಿದ ಪದಾಧಿಕಾರಿಗಳಿಗೆ ಝೋನ್ ಪ್ರೆಸಿಡೆಂಟ್ ಸಂತೋಷ್ ಶೆಟ್ಟಿ ಪ್ರಮಾಣವಚನ ಬೋಧಿಸಿದರು.

ಕಾರ್ಯದರ್ಶಿಯಾಗಿ ಪ್ರಜ್ವಲ್ ಡಿಸೋಜಾ, ಕೋಶಾಧಿಕಾರಿಯಾಗಿ ರಶ್ಮಿ ಭಟ್, ಉಪಾಧ್ಯಕ್ಷರುಗಳಾಗಿ ಮನೋಹರ್ ಪಾಟಾಳಿ, ಸುದೇಶ್ ರೈ, ದಕ್ಷಿತ್ ಆಚಾರ್ಯ, ನವೀನ್ ಕೊಯಿಲ, ಕಾವ್ಯಾ ಪ್ರಮಾಣವಚನ ಸ್ವೀಕರಿಸಿದರು. ರಘು ಶೆಟ್ಟಿ, ಪ್ರಜ್ವಲ್ ರೈ, ಸೌಜನ್ಯ ಎಂ., ಭವಿತ್ ಕುಮಾರ್, ಕೇಶವ ರಾಜ್ ಇಂದಾಜೆ, ನಿತಿನ್ ಶಂಕರ ವಿ., ಸಾಯಿ ಧ್ರುವ ಶೆಟ್ಟಿ, ನಿರೋಶ್ ಪಿ.ಜಿ., ಡಾ. ಪ್ರಶಾಂತ್ ಶರ್ಮಾ, ಸುಶಾಂತ್ ಹಾರ್ವಿನ್, ಗೌರವ್ ಭಾರಧ್ವಾಜ್, ಕಾರ್ತಿಕ್ ಬಿ., ಮಧುರಾ ಎಸ್. ಭಟ್, ದಿನೇಶ್ ಕುಮಾರ್ ಕಡಮಜಲು, ಶ್ರುತನ್ ಡಿ.ಜಿ. ನೂತನ ಘಟಕಕ್ಕೆ ಸೇರ್ಪಡೆಗೊಂಡರು.

ಜೆಸಿಐ ಸೆನೆಟರ್ ವೇಣುಗೋಪಾಲ್, ಡಾ. ಹರಿಣಾಕ್ಷಿ ಮೊದಲಾದವರು ಉಪಸ್ಥಿತರಿದ್ದರು.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಪುತ್ತೂರಿನಲ್ಲಿ ಸಂಭ್ರಮದ 28ನೇ ವರ್ಷದ ‘ಶ್ರೀಕೃಷ್ಣಲೋಕ’ ;1,250ಕ್ಕೂ ಅಧಿಕ ಪುಟಾಣಿ ಕೃಷ್ಣ-ರಾಧೆಯರಿಂದ ವೈಭವದ ಶೋಭಾಯಾತ್ರೆ

ಪುತ್ತೂರು: ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧೀನದಲ್ಲಿರುವ ಪರ್ಲಡ್ಕ ಶಿವಪೇಟೆಯ ವಿವೇಕಾನಂದ…

ಪುತ್ತೂರು: ₹3 ಲಕ್ಷ ಮೌಲ್ಯದ ಚಿನ್ನ, ಹಣವಿದ್ದ ಪರ್ಸ್ ವಾರಸುದಾರರಿಗೆ ಹಸ್ತಾಂತರ; ಆಟೋ ಚಾಲಕನ ಪ್ರಾಮಾಣಿಕತೆಗೆ ಮೆಚ್ಚುಗೆ

ಪುತ್ತೂರು: ರಾಷ್ಟ್ರೀಯ ಹೆದ್ದಾರಿಯಲ್ಲಿ ಸಿಕ್ಕ ಪರ್ಸ್‌ವೊಂದನ್ನು ಅದರ ವಾರಸುದಾರರನ್ನು…

ಸೆ.18ರಂದು ಮಂಗಳೂರಿನಲ್ಲಿ ರಾಜ್ಯ ಸಚಿವ ಸಂಪುಟ ಸಭೆ; ಕರಾವಳಿ ಅಭಿವೃದ್ಧಿ ಪ್ರಸ್ತಾವನೆಗಳಿಗೆ ಸಿಗಲಿದೆ ಆದ್ಯತೆ

ಮಂಗಳೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಆಡಳಿತವನ್ನು ಜನರ ಬಳಿಗೆ ಕೊಂಡೊಯ್ಯುವ…