tamanvi
ಸ್ಥಳೀಯ

ಸೋರುವ ಸೂರಿಗೆ ಟಾರ್ಪಲ್ ಹೊದಿಕೆ! ಬಿಜೆಪಿಯ 112ನೇ ಬೂತ್’ನಿಂದ ಜನಮೆಚ್ಚುವ ಕಾರ್ಯ!

D_shiva_bhat

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಆರ್ಯಾಪು ಗ್ರಾಮದ ದಂಬೆತ್ತಿಮಾರಿನ ಮುದರ ಅವರ ಮನೆ ಛಾವಣಿಗೆ ಬಿಜೆಪಿ 112ನೇ ಬೂತ್ ಸಮಿತಿ ವತಿಯಿಂದ ಭಾನುವಾರ ಸೋಲಾರ್ ಟಾರ್ಪಲ್ ಹೊದಿಸಲಾಯಿತು.

maithri

ಮುದರ ಅವರ ಮನೆ ತೀರಾ ದುಸ್ಥಿಯಿಯಲ್ಲಿದ್ದು, ಮಳೆಗೆ ಸೋರುತ್ತಿತ್ತು. ಆದ್ದರಿಂದ ತಕ್ಷಣದ ಕ್ರಮವಾಗಿ ಟಾರ್ಪಲ್ ಹೊದಿಕೆ ಹಾಕಿ, ಮನೆ ವಾಸಕ್ಕೆ ಅನುಕೂಲವಾಗುವಂತೆ ಮಾಡಲಾಯಿತು.

ಬೂತ್ ಅಧ್ಯಕ್ಷ ಸಂತೋಷ್ ಸುವರ್ಣ ಮೇರ್ಲ, ಶಕ್ತಿಕೇಂದ್ರದ ಅಧ್ಯಕ್ಷ ನವೀನ್ ರೈ ಒಳತಡ್ಕ, ಅರ್ಯಾಪು ಗ್ರಾಮ ಪಂಚಾಯತ್ ಮಾಜಿ ಸದಸ್ಯರುಗಳಾದ ಜಯಂತ್ ಶೆಟ್ಟಿ ಕಂಬಳತಡ್ಡ, ವಿನಯ್ ನಾಯ್ಕ್ ಕೋಟ್ಲಾರ್, ನಿಕಟಪೂರ್ವ ಗ್ರಾಮ ಪಂಚಾಯತ್ ಸದಸ್ಯರಾದ ಚೇತನ್ ಡಿ ಕಾರ್ಪಾಡಿ, ನಿಕಟ ಪೂರ್ವ ಬೂತ್ ಅಧ್ಯಕ್ಷರಾದ ನಾಗೇಶ್ ಕಂಬಳತಡ್ಡ, ಕೃಷ್ಣಪ್ಪ ಗೌಡ ಅಡ್ಕ, ರಂಜನ್ ಸುವರ್ಣ ಮೇರ್ಲ, ವಿಜೇತ್ ಬಂಗೇರ ಮೇರ್ಲ ಟಾರ್ಪಲ್ ಹೊದಿಸಿದರು. 

ರೋಹಿತ್ ಕಾರ್ಪಾಡಿ, ತಾಲೂಕು ಯುವಮೋರ್ಚಾ ಉಪಾಧ್ಯಕ್ಷ ಪವನ್ ಶೆಟ್ಟಿ ಕಂಬಳತಡ್ದ, ಕಾರ್ಯದರ್ಶಿ ಧನುಷ್ ಹೊಸಮನೆ, ಆರ್ಯಾಪು ಗ್ರಾಮ ಪಂಚಾಯತ್ ನ 4ನೇ ವಾರ್ಡ್ ನಿಕಟಪೂರ್ವ ಸದಸ್ಯರೂ, ಬಿಜೆಪಿ ಆರ್ಯಾಪು ಶಕ್ತಿ ಕೇಂದ್ರ ಪ್ರಭಾರಿಯೂ ಆದ ಯತೀಶ್ ದೇವ ಸಂಟ್ಯಾರ್, ಗಣೇಶ್ ಆಚಾರ್ಯ ಅರ್ಯಾಪು ಮೊದಲಾದ ಬೂತ್ ಸಮಿತಿ ಬಿಜೆಪಿ ಕಾರ್ಯಕರ್ತರು ಸಹಕರಿಸಿದರು.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಸರ್ಕಾರದ ಪಂಚ ಗ್ಯಾರಂಟಿ ಯೋಜನೆ ದೇಶಕ್ಕೆ ಮಾದರಿ | ಪುತ್ತೂರು ಗೃಹಲಕ್ಷ್ಮೀ ಸಂಭ್ರಮಾಚರಣೆಯಲ್ಲಿ ಉಮಾನಾಥ ಶೆಟ್ಟಿ ಪೆರ್ನೆ

ಪುತ್ತೂರು: ಗೃಹ ಲಕ್ಷ್ಮೀ ಸೇರಿದಂತೆ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಯಿಂದ ಸಾಕಷ್ಟು ಮಂದಿ ಬದುಕು…

ಜಗನ್ನೀವಾಸ್ ರಾವ್ ಅವರ ವಿರುದ್ಧವೂ ಕ್ರಮ!! ಇದುವರೆಗೆ ಪ್ರತಿಕ್ರಿಯೆ ನೀಡದಿರುವುದರ ಬಗ್ಗೆಯೂ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ

ಪುತ್ತೂರು: ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅವರು ಗುರುವಾರ ಪುತ್ತೂರಿನ ಬಿಜೆಪಿ ಕಚೇರಿಗೆ…

1 of 125