ಪುತ್ತೂರು: ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ಜುಲೈ 30ರಂದು ಪುತ್ತೂರು, ಕಡಬ, ಸುಬ್ರಹ್ಮಣ್ಯ, ಸವಣೂರು, ನೆಲ್ಯಾಡಿ ಸೇರಿದಂತೆ ಹಲವು ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.
110/33/11 ಕೆ.ವಿ. ಪುತ್ತೂರು ವಿದ್ಯುತ್ ಉಪಕೇಂದ್ರದಿಂದ ಹೊರಡುವ ನಗರ, ರಾಮಕುಂಜ, ಉಪ್ಪಿನಂಗಡಿ ಓಲ್ಡ್, ಉಪ್ಪಿನಂಗಡಿ ಎಕ್ಸ್‌ಪ್ರೆಸ್, ಕಾಂಚನ, ವಾಟರ್ ಸಪ್ಪೆ ಹಾಗೂ ಕೆಮ್ಮಾಯಿ ಫೀಡರ್‌ಗಳಲ್ಲಿ ಬೆಳಿಗ್ಗೆ 10:00ರಿಂದ ಸಂಜೆ 5:30ರವರೆಗೆ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ.
ಇದರ ಪರಿಣಾಮವಾಗಿ ಕಬಕ, ವಿದ್ಯಾಪುರ, ನಗರ, ಮುರ, ಕೊಡಿಪ್ಪಾಡಿ, ಕಲೆಂಬಿ, ಪಡೀಲು, ಸಾಲ್ಮರ, ಬೀರ್ನಹಿತ್ತು, ಕೆಮ್ಮಾಯಿ, ಕೃಷ್ಣನಗರ, ಆನೆಮಜಲು, ಬನ್ನೂರು, ಹಲಂಗ, ಸೇಡಿಯಾಪು, ಕೋಡಿಂಬಾಡಿ, ಮಠಂತಬೆಟ್ಟು, ಶಾಂತಿನಗರ, ದಾರಂದಕುಕ್ಕು, ಕಟಾರ, ಚಿಕ್ಕಮುನ್ನೂರು, ಬೆಳ್ಳಿಪ್ಪಾಡಿ, ರಾಮಕುಂಜ, ಕೊಲ, ಹಿರೇಬಂಡಾಡಿ, ವಾಟರ್ ಸಪ್ಪೆ, ಹಳೆನೇರೆಂಕಿ ಹಾಗೂ ನೆಕ್ಕಿಲಾಡಿ ಭಾಗಗಳ ವಿದ್ಯುತ್ ಬಳಕೆದಾರರು ತೊಂದರೆ ಅನುಭವಿಸಲಿದ್ದಾರೆ.
ಇದೇ ವೇಳೆ, ಬನ್ನೂರು ಜಂಕ್ಷನ್‌ನಲ್ಲಿ ತುರ್ತು ಕಾಮಗಾರಿ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಜುಲೈ 30ರಂದು ಬೆಳಿಗ್ಗೆ 10:00ರಿಂದ ಸಂಜೆ 5:30ರವರೆಗೆ ಪುತ್ತೂರು–ಕಡಬ–ಸುಬ್ರಹ್ಮಣ್ಯ ಹಾಗೂ ಪುತ್ತೂರು–ಸವಣೂರು–ನೆಲ್ಯಾಡಿ 33 ಕೆ.ವಿ. ವಿದ್ಯುತ್ ಮಾರ್ಗಗಳಲ್ಲೂ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ.
ಇದರಿಂದ 33/11 ಕೆ.ವಿ. ಕಡಬ, ಸುಬ್ರಹ್ಮಣ್ಯ, ನೆಲ್ಯಾಡಿ, ಸವಣೂರು ಹಾಗೂ ಬಿಂದು ವಿದ್ಯುತ್ ಉಪಕೇಂದ್ರಗಳಿಂದ ಹೊರಡುವ ಎಲ್ಲಾ 11 ಕೆ.ವಿ. ಫೀಡರ್‌ಗಳ ವ್ಯಾಪ್ತಿಯ ವಿದ್ಯುತ್ ಬಳಕೆದಾರರಿಗೂ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಅಗತ್ಯ ಕಾಮಗಾರಿ ಹಿನ್ನೆಲೆಯಲ್ಲಿ ಸಾರ್ವಜನಿಕರು ಹಾಗೂ ವಿದ್ಯುತ್ ಬಳಕೆದಾರರು ಸಹಕರಿಸುವಂತೆ ಮೆಸ್ಕಾಂ ಮನವಿ ಮಾಡಿದೆ.























