ಸ್ಥಳೀಯ

ರಂಜಾನ್ ಹಿನ್ನೆಲೆ: ಪುತ್ತೂರಿನಲ್ಲಿ ಶಾಂತಿ ಸಭೆ | ಚರ್ಚ್ ಮುಂಭಾಗ ರಿಕ್ಷಾ ಪಾರ್ಕಿಂಗ್!! ದೇವಳ ಮುಂಭಾಗ ಭಿಕ್ಷುಕರ ಹಾವಳಿ!!

GL

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಪೊಲೀಸರು ಇರುವುದು ನಮ್ಮ ರಕ್ಷಣೆಗೆ ಎನ್ನುವ ಮನೋಭಾವ ಜನರಲ್ಲಿ ಬೆಳೆಯಬೇಕು. ಕಾನೂನು ಪಾಲನೆ ಮಾಡುವವರು ಪೊಲೀಸರಿಗೆ ಭಯ ಪಡುವ ಅಗತ್ಯವೇ ಇಲ್ಲ ಎಂದು ಡಿವೈಎಸ್ಪಿ ಪ್ರಮೋದ್ ಹೇಳಿದರು.

chennai-shopping
maithri

shanthi-sabhe

ರಂಜಾನ್ ಹಿನ್ನೆಲೆಯಲ್ಲಿ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ನಡೆದ ಶಾಂತಿ ಸಭೆಯಲ್ಲಿ ಅವರು ಮಾತನಾಡಿದರು.

ಹಬ್ಬ ಬಂದಾಗ ಯುವಕರಿಗೆ ಕಿವಿಮಾತು ಹೇಳುವ ಕೆಲಸ ಸಮುದಾಯಗಳಲ್ಲೇ ಆಗಬೇಕು. ಹಬ್ಬ ಎಂದು ಕಾನೂನು ಉಲ್ಲಂಘನೆ ಮಾಡಲು ಅವಕಾಶ ನೀಡುವುದಿಲ್ಲ. ತ್ರಿಬಲ್ ರೈಡ್ ಸವಾರಿ, ಹೆಲ್ಮೆಟ್ ಧರಿಸದೇ ಇರುವುದು ಮೊದಲಾದ ಕಾನೂನು ಉಲ್ಲಂಘನೆಗಳಿಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು. ಆದ್ದರಿಂದ ಹಬ್ಬಗಳ ಸಂದರ್ಭ ಪ್ರಮುಖರೇ ತಮ್ಮ ಸಮುದಾಯದ ಮಂದಿಗೆ ಕಿವಿಮಾತು ಹೇಳುವ ಕೆಲಸ ಆಗಬೇಕು ಎಂದರು.

ಈ ಬಗ್ಗೆ ಮಸೀದಿಯ ಧರ್ಮಗುರುಗಳ ಮೂಲಕ ಮಾಹಿತಿ ನೀಡುವ ಕೆಲಸ ಮಾಡಲಾಗುವುದು ಎಂದು ಮುಸ್ಲಿಂ ಪ್ರಮುಖರು ತಿಳಿಸಿದರು. ಆದರೆ ಹಬ್ಬದ ಸಂದರ್ಭ ಸಿಕ್ಕಸಿಕ್ಕಲ್ಲಿ ದಂಡ ವಿಧಿಸುವ ಕೆಲಸ ಆಗಬಾರದು. ಇದರಿಂದ ತೊಂದರೆ ಆಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಪ್ರತಿಕ್ರಿಯಿಸಿದ ಡಿವೈಎಸ್ಪಿ, ಕಾನೂನು ಪಾಲನೆ ತೀರಾ ಅಗತ್ಯ. ಕಾನೂನು ಉಲ್ಲಂಘನೆ ಆಗದಂತೆ ನೋಡಿಕೊಳ್ಳುವುದು ಪೊಲೀಸರ ಕರ್ತವ್ಯ. ಕಾನೂನು ಪಾಲನೆ ಮಾಡುವವರು ಪೊಲೀಸರಿಗೆ ಹೆದರುವ ಅಗತ್ಯವೇ ಇರುವುದಿಲ್ಲ ಎಂದರು.

ಸಿದ್ದೀಕ್ ಪುತ್ತೂರು ಮಾತನಾಡಿ,  ಕಾನೂನು ಮೀರಿ ಸಂಚರಿಸಿದರೆ ಆಗ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಇದಕ್ಕೆ ನಮ್ಮ ಪೂರ್ಣ ಸಹಕಾರ ಇದೆ ಎಂದರು. ಕಳೆದ ಕೆಲವು ವರ್ಷದಿಂದ ಅಪಘಾತದ ಪ್ರಮಾಣ ಹೆಚ್ಚಾಗುತ್ತಿದ್ದು ಕಳೆದ ವರ್ಷ ಪುತ್ತೂರು ಟ್ರಾಫಿಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ160 ರಿಂದ 170ರಷ್ಟು ಅಪಘಾತ ಪ್ರಕರಣ ಸಂಭವಿಸಿದೆ ಎಂದು ಪೊಲೀಸ್ ಅಧಿಕಾರಿಗಳು ಗಮನಕ್ಕೆ ತಂದರು.

ಕೇಂದ್ರ ಜುಮಾ ಮಸೀದಿ ಅಧ್ಯಕ್ಷ ಅಬ್ದುಲ್ ರಹಿಮಾನ್ ಮಾತನಾಡಿ, ಮುಂದಿನ ಶುಕ್ರವಾರ ಅಥವಾ ಶನಿವಾರ ರಮ್ಜಾನ್ ನಡೆಯಲಿದೆ. ಈ ಹಬ್ಬದಲ್ಲಿ ಮಸೀದಿಗಳಲ್ಲಿ ಪ್ರಾರ್ಥನೆ, ಸಂಬಂಧಿಕರ ಮನೆಗೆ ತೆರಳುವುದು ಇರುತ್ತದೆ. ಮೆರವಣಿಗೆ, ಸಭೆಗಳು ಇರುವುದಿಲ್ಲ. ಇಷ್ಟರವರೆಗೆ ಪುತ್ತೂರಿನಲ್ಲಿ ಶಾಂತಿಯುತವಾಗಿ ಹಬ್ಬ ನಡೆದಿದೆ ಎಂದರು.

ಇಬ್ರಾಹಿಂ ಗೋಳಿಕಟ್ಟೆ ಹಾಗೂ ಕೇಶವ ಬೆದ್ರಾಳ,. ಮೌರೀಸ್ ಮಸ್ಕರೇನ್ಹಸ್ ಮಾತನಾಡಿದರು. ವೇದಿಕೆಯಲ್ಲಿ ಎಸ್ ಐ ಸುರೇಶ್ , ಜನಾರ್ದನ ಕೆಎಂ., ಸೇಸಮ್ಮ ಉಪಸ್ಥಿತರಿದ್ದರು.

ಚರ್ಚ್ ಮುಂಭಾಗ ರಿಕ್ಷಾ ಪಾರ್ಕಿಂಗ್!!

ಮೌರೀಸ್ ಮಸ್ಕರೇನಸ್ ಮಾತನಾಡಿ, ಪುತ್ತೂರು ಚರ್ಚ್ ಮುಂಭಾಗದ ಗೇಟ್ ಎದುರು ರಿಕ್ಷಾ ನಿಲಿಸ್ತಾರೆ. ಇದರಿಂದ ದಿನಾ ಜಗಳ. ಇನ್ನೊಂದು ಬದಿ ಎಂ.ಟಿ. ರೋಡಿನ ಉದ್ದಕ್ಕೆ ರಿಕ್ಷಾ ಪಾರ್ಕಿಂಗ್ ಮಾಡ್ತಾರೆ. ಇಲ್ಲಿ ಚರ್ಚಿನ ಬಿಲ್ಡಿಂಗ್ ಇದ್ದು, ವ್ಯಾಪಾರಕ್ಕೆ ತೊಂದರೆ ಆಗುತ್ತಿದೆ ಎಂಬ ದೂರು ಇದೆ ಎಂದ ಅವರು, ಎಂ.ಟಿ. ರಸ್ತೆಯ ವನ್ ವೇ ರೂಲ್ಸನ್ನು ಕಡ್ಡಾಯವಾಗಿ ಪಾಲಿಸುವಂತೆ ಮಾಡುವಂತೆ ಒತ್ತಾಯಿಸಿದರು.

ದೇವಳ ಮುಂಭಾಗ ಭಿಕ್ಷುಕರ ಹಾವಳಿ!!

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗ ಭಿಕ್ಷುಕರ ಹಾವಳಿ ಮಿತಿಮೀರಿದೆ. ವ್ಯಾನಲ್ಲಿ ಕರೆತಂದು ಭಿಕ್ಷುಕರನ್ನು ಇಲ್ಲಿ ಬಿಟ್ಟು ಹೋಗ್ತಾರೆ ಎಂದು ವ್ಯವಸ್ಥಾಪನಾ ಸಮಿತಿ ಸದಸ್ಯ ಈಶ್ವರ ನಾಯ್ಕ್ ಹೇಳಿದರು. ದೇವಸ್ಥಾನದ ಮುಂಭಾಗ ಸಿಸಿ ಕ್ಯಾಮರಾ ಹಾಕುವಂತೆ ಹಾಗೂ ವ್ಯಾನಿನ ನಂಬರ್ ನೋಟ್ ಮಾಡಿ ಕೊಡುವಂತೆ ತಿಳಿಸಲಾಯಿತು.

ಪೊಲೀಸ್ ಉಪನಿರೀಕ್ಷಕರಾದ ಸುರೇಶ್, ಜನಾರ್ದನ, ಸೇಸಮ್ಮ ಉಪಸ್ಥಿತರಿದ್ದರು. ಎಲ್ಲಾ ಸಮುದಾಯದ ಪ್ರಮುಖರು ಭಾಗವಹಿಸಿದ್ದರು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಇ-ಖಾತಾ, ಇ-ಸ್ವತ್ತು ವಿತರಣೆಗೆ ವೇಗ: ದಕ್ಷಿಣ ಕನ್ನಡದಲ್ಲಿ ಸಚಿವ ದಿನೇಶ್ ಗುಂಡೂರಾವ್ ಕಟ್ಟುನಿಟ್ಟಿನ ಸೂಚನೆ

ಮಂಗಳೂರು:ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಗ್ರಾಮ ಪಂಚಾಯತ್‌ಗಳು ಇ-ಖಾತಾ ಮತ್ತು ಇ-ಸ್ವತ್ತುಗಳನ್ನು…

1 of 123