ವ್ಯಕ್ತಿಯೊಬ್ಬ ತನ್ನ ಅಜ್ಜಿಯನ್ನು ಕೊಂದು ಆಕೆಯ ರಕ್ತದಿಂದ ಶಿವಲಿಂಗಕ್ಕೆ ಅಭಿಷೇಕ ಮಾಡಿ ಬಳಿಕ ತಾನೂ ತ್ರಿಶೂಲದಿಂದ ಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಭೀಕರ ಘಟನೆ ನಡೆದಿದೆ.
ಛತ್ತೀಸ್‌ಗಢದ ದುರ್ಗ್ ಜಿಲ್ಲೆಯ ನಂಕಟ್ಟಿ ಗ್ರಾಮದವರಾದ ಗುಲ್ಮನ್ ಗೋಸ್ವಾಮಿ(30). ಅಜ್ಜಿ (70)ಯೊಂದಿಗೆ ಶಿವ ದೇವಾಲಯ ಬಳಿಯ ಮನೆಯಲ್ಲಿ ವಾಸಿಸುತ್ತಿದ್ದರು. ಶಿವ ಭಕ್ತನಾಗಿದ್ದ ಗುಲ್ಕನ್ ಗೋಸ್ವಾಮಿ ಪ್ರತಿದಿನ ಶಿವ ದೇವಾಲಯದಲ್ಲಿ ಪೂಜೆ ಮಾಡುತ್ತಿದ್ದ.
ಗುಲ್ಕನ್ ತನ್ನ ಅಜ್ಜಿಯನ್ನು ಶಿವನ ತ್ರಿಶೂಲದಿಂದ ಇರಿದು ಕೊಂದಿದ್ದಾನೆ. ಬಳಿಕ ಮೊಮ್ಮಗ ಶಿವ ದೇವಾಲಯಕ್ಕೆ ಹೋಗಿ ಆಕೆಯ ರಕ್ತವನ್ನು ಶಿವಲಿಂಗಕ್ಕೆ ಅರ್ಪಿಸಿದ್ದಾನೆ. ನಂತರ ಮನೆಗೆ ಮರಳಿ ಅದೇ ತ್ರಿಶೂಲದಿಂದ ಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಇದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪೊಲೀಸರು ಸ್ಥಳಕ್ಕಾಗಮಿಸಿ ಗಾಯಾಳು ಗುಲ್ಮನ್‌ನನ್ನು ಚಿಕಿತ್ಸೆಗಾಗಿ ರಾಯಪುರ ಏಮ್ಸ್‌ಗೆ ರವಾನಿಸಿದ್ದಾರೆ. ವೃದ್ಧೆಯ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮೂಢನಂಬಿಕೆಯಿಂದ ಗುಲ್ಕನ್ ತನ್ನ ಅಜ್ಜಿಯನ್ನು ಬಲಿಕೊಟ್ಟಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ.