tamanvi
ರಾಜಕೀಯ

ತ್ರಿಷಾ ಜನ್ಮದಿನಕ್ಕೆ ವಿಜಯ್ ಉಡುಗೊರೆ?? ದಳಪತಿ ಗೆಲುವಿನ ಓಟದಲ್ಲಿ ತ್ರಿಷಾ ಭಾಗಿ

ಈ ಸುದ್ದಿಯನ್ನು ಶೇರ್ ಮಾಡಿ

ದಳಪತಿ ವಿಜಯ್ ಅವರ ಟಿವಿಕೆ ಪಕ್ಷ ತಮಿಳುನಾಡು ಚುನಾವಣೆಯಲ್ಲಿ ಜಯಭೇರಿ ಭಾರಿಸುವ ಎಲ್ಲಾ ಲಕ್ಷಣಗಳು ಕಂಡುಬಂದಿವೆ. ಇದರ ಬೆನ್ನಲ್ಲೇ ನಟಿ ತ್ರಿಷಾ ಅವರು ವಿಜಯ್ ಮನೆಗೆ ಭೇಟಿ ನೀಡಿದ್ದಾರೆ.

ತಮಿಳುನಾಡು ಚುನಾವಣೆಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಮುನ್ನಡೆಯುತ್ತಿರುವ ಟಿವಿಕೆ ಪಕ್ಷ, ಈಗಾಗಲೇ 108 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಹಾಗಾಗಿ ಗೆಲುವಿನ ಸನಿಹದಲ್ಲೇ ಬಂದು ನಿಂತಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಡಿಎಂಕೆ 71 ಹಾಗೂ ಎಐಎಡಿಎಂಕೆ ತಲಾ 55 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ ಎಂದು ವರದಿಯಾಗಿದೆ.

ಟಿವಿಕೆ ಚುನಾವಣೆಯಲ್ಲಿ ಎಬ್ಬಿಸಿದ ಸುನಾಮಿ ನಡುವೆ, ತ್ರಿಷಾ ಅವರ ನಡೆ ಇನ್ನಷ್ಟು ಕುತೂಹಲಕ್ಕೆ ಕಾರಣವಾಗಿದೆ. ಬೆಳಿಗ್ಗೆ ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಅವರು, ಮಧ್ಯಾಹ್ನದ ಹೊತ್ತಿಗೆ ವಿಜಯ್ ಅವರ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಅಂದಹಾಗೇ, ಇಂದು ತ್ರಿಷಾ ಅವರ ಹುಟ್ಟುಹಬ್ಬ ಕೂಡ. ದಳಪತಿ ವಿಜಯ್ ಅವರು ಗೆಲುವಿನ ಉಡುಗೊರೆಯನ್ನು ತ್ರಿಷಾ ಅವರಿಗೆ ಅರ್ಪಿಸುತ್ತಾರಾ ಎಂದು ಕಾದು ನೋಡಬೇಕಾಗಿದೆ.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಬಿಜೆಪಿಗೆ ರಾಜೀನಾಮೆ ಸಲ್ಲಿಸಿದ ಅಣ್ಣಾಮಲೈ!! ‘ಭಯವಿಲ್ಲದ ಮನಸ್ಸಿಗೆ ಮಿತಿಗಳಿಲ್ಲ’ ಹೊಸ ಸುಳಿವು ನೀಡಿದ ಪೋಸ್ಟರ್ ಸಾಲು!

ತಮಿಳುನಾಡು ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ…

ದಿಢೀರ್ ಕೋರ್ ಕಮಿಟಿ ಸಭೆ ಕರೆದ ಬಿಜೆಪಿ | ಕರ್ನಾಟಕ ಉಳಿಸಿ, ಕಾಂಗ್ರೆಸ್ ತೊಲಗಿಸಿ ಹೋರಾಟಕ್ಕೆ ನಿರ್ಧಾರ!

ಬೆಂಗಳೂರು: ರಾಜ್ಯದಲ್ಲಿ ಕೆಲವು ದಿನಗಳಿಂದ ನಡೆಯುತ್ತಿರುವ ವಿದ್ಯಮಾನಗಳ ಹಿನ್ನೆಲೆಯಲ್ಲಿ ದಿಢೀರ್…