tamanvi
ಸ್ಥಳೀಯ

ಮೊಗ್ರು ಶ್ರೀ ರಾಮ ಶಿಶುಮಂದಿರಕ್ಕೆ ಶಾಸಕ ಹರೀಶ್ ಪೂಂಜಾ ಭೇಟಿ

ಈ ಸುದ್ದಿಯನ್ನು ಶೇರ್ ಮಾಡಿ

ಮೊಗ್ರು: ಜೈ ಶ್ರೀ ರಾಮ್ ಸೇವಾ ಟ್ರಸ್ಟ್ (ರಿ.) ಅಲೆಕ್ಕಿ, ಮುಗೇರಡ್ಕ–ಮೊಗ್ರು ಗ್ರಾಮ ಇದರ ಶ್ರೀ ರಾಮ ಶಿಶುಮಂದಿರದ ನೂತನ ಕಟ್ಟಡದ ಮಹಾಪೋಷಕರಾದ ಶಾಸಕ ಹರೀಶ್ ಪೂಂಜಾ ಅವರು ಶಿಶುಮಂದಿರಕ್ಕೆ ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಶಾಸಕರು ಶಿಶುಮಂದಿರದ ಪುಟಾಣಿ ಮಕ್ಕಳೊಂದಿಗೆ ಮಾತುಕತೆ ನಡೆಸಿ, ಅವರ ಕುಶಲೋಪಚಾರ ವಿಚಾರಿಸಿದರು. ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡಲು ಪೂರಕವಾಗುವ ರೀತಿಯಲ್ಲಿ ನಿರ್ಮಿಸಲಾಗಿರುವ ನೂತನ ಕಟ್ಟಡ ಹಾಗೂ ಮಕ್ಕಳ ಅನ್ನಯಜ್ಞದ ಕೊಠಡಿಯನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ಶಾಸಕರನ್ನು ಶಿಶುಮಂದಿರದ ಪುಟಾಣಿಗಳು ಹೂ ನೀಡಿ ಆತ್ಮೀಯವಾಗಿ ಸ್ವಾಗತಿಸಿದರು. ಬಳಿಕ ಶಿಶುಮಂದಿರದ ಸಂಚಾಲಕರು ಗೌರವಾರ್ಪಣೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಶಿಶುಮಂದಿರದ ಸಂಚಾಲಕ ಪ್ರವೀಣ್ ಮತ್ತಿಲಾರು, ಮಾಜಿ ಅಧ್ಯಕ್ಷ ರಮೇಶ್ ನೆಕ್ಕರಾಜೆ, ಬಂದಾರು ಪಂಚಾಯತ್ ಮಾಜಿ ಅಧ್ಯಕ್ಷ ದಿನೇಶ್ ಗೌಡ ಖಂಡಿಗ, ಮಾಜಿ ಸದಸ್ಯ ಗಂಗಾಧರ ಪೂಜಾರಿ, ಬಾಲಕೃಷ್ಣ ಗೌಡ ಮುಗೇರಡ್ಕ, ವಿನಯ ಬರುಂಗುಡೇಲು ಹಾಗೂ ಶಿಶುಮಂದಿರದ ಮಾತಾಜಿಗಳು ಉಪಸ್ಥಿತರಿದ್ದರು.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಪುತ್ತೂರಿನಲ್ಲಿ ಆ.29ರಂದು ಸರ್ಕಾರಿ ನೌಕರರ 2025-26ನೇ ಸಾಲಿನ ವಾರ್ಷಿಕ ಮಹಾಸಭೆ ಮತ್ತು ಅಭಿನಂದನಾ ಕಾರ್ಯಕ್ರಮ

ಪುತ್ತೂರು: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಪುತ್ತೂರು ತಾಲೂಕು ಶಾಖೆಯ ವತಿಯಿಂದ…

1 of 135