tamanvi
ವಿಶೇಷಸ್ಥಳೀಯ

ಪುತ್ತೂರು: ಇನ್ನು ಮುಂದೆ ಪ್ರತೀ ಸೋಮವಾರ ಶಾಸಕರ ಕಚೇರಿಯಲ್ಲಿ ಸಾರ್ವಜನಿಕರಿಗೆ ಗಂಜಿ–ಚಟ್ಟಿ..!

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಶಾಸಕ ಅಶೋಕ್ ಕುಮಾರ್ ರೈ ಅವರ ಕಚೇರಿಗೆ ಅಹವಾಲು ಸಲ್ಲಿಸಲು ಬರುವ ಸಾರ್ವಜನಿಕರಿಗೆ ಇನ್ನು ಮುಂದೆ ಪ್ರತೀ ಸೋಮವಾರ ಮಧ್ಯಾಹ್ನ ಗಂಜಿ ಹಾಗೂ ಚಟ್ಟಿ ದೊರೆಯಲಿದೆ.

ವಾರದ ಪ್ರತೀ ಸೋಮವಾರ ಶಾಸಕರು ಕಚೇರಿಯಲ್ಲಿ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸುತ್ತಿದ್ದು, ಅವರನ್ನು ಭೇಟಿಯಾಗಲು ಸುಮಾರು 500ರಿಂದ 700 ಮಂದಿ ಆಗಮಿಸುತ್ತಾರೆ. ಕಚೇರಿಗೆ ಬರುವ ಪ್ರತಿಯೊಬ್ಬರನ್ನೂ ಮಾತನಾಡಿಸಿ, ಅವರ ಸಮಸ್ಯೆಗಳನ್ನು ಆಲಿಸುವ ಶಾಸಕರು, ಸಾಧ್ಯವಾದಷ್ಟು ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಕಲ್ಪಿಸಲು ಪ್ರಯತ್ನಿಸುತ್ತಿದ್ದಾರೆ.

ಶಾಸಕರ ಭೇಟಿಗಾಗಿ ಸಾರ್ವಜನಿಕರು ಸರದಿ ಸಾಲಿನಲ್ಲಿ ಕಾಯಬೇಕಾಗಿರುವುದರಿಂದ, ಕೆಲವರು ಮಧ್ಯಾಹ್ನದ ಊಟಕ್ಕೂ ತೆರಳದೆ ಕಚೇರಿಯಲ್ಲೇ ಕಾಯುತ್ತಿರುವುದು ಶಾಸಕರ ಗಮನಕ್ಕೆ ಬಂದಿದೆ. ಇದನ್ನು ಮನಗಂಡು, ತಮ್ಮ ಕಚೇರಿಯಲ್ಲಿ ಸಾರ್ವಜನಿಕರಿಗೆ ಗಂಜಿ ವಿತರಿಸುವ ನಿರ್ಧಾರವನ್ನು ಶಾಸಕರು ಕೈಗೊಂಡಿದ್ದಾರೆ.

ಈ ಯೋಜನೆಯ ಆರಂಭಿಕ ದಿನವೇ ಸುಮಾರು 350 ಮಂದಿ ಗಂಜಿ ಸೇವಿಸಿದ್ದಾರೆ. ಆರೋಗ್ಯ ಸಮಸ್ಯೆ ಇರುವವರು, ವೃದ್ಧರು ಹಾಗೂ ಮಕ್ಕಳು ಸಮಯಕ್ಕೆ ಸರಿಯಾಗಿ ಊಟ ಮಾಡದಿದ್ದರೆ ತೊಂದರೆಯಾಗಬಹುದು ಎಂಬ ಕಾರಣಕ್ಕೆ ಈ ವ್ಯವಸ್ಥೆ ಮಾಡಲಾಗಿದೆ ಎಂದು ಶಾಸಕರು ತಿಳಿಸಿದ್ದಾರೆ.

“ನನ್ನನ್ನು ಭೇಟಿಯಾಗಲು ಬರುವ ಸಾರ್ವಜನಿಕರಿಗೆ ಆರಂಭದಿಂದಲೇ ಚಿಕ್ಕಿ ನೀಡುತ್ತಿದ್ದೇನೆ. ಆದರೆ ಕೆಲವರು ಮಧ್ಯಾಹ್ನದ ಊಟ ಮಾಡದೆ ನನ್ನ ಭೇಟಿಗಾಗಿ ಕಾಯುತ್ತಿರುವುದು ಗಮನಕ್ಕೆ ಬಂದಿದೆ. ಯಾರೂ ನನ್ನ ಕಚೇರಿಗೆ ಬಂದು ಹಸಿವಿನಿಂದ ಇರಬಾರದು ಎಂಬ ಉದ್ದೇಶದಿಂದ ಗಂಜಿ ನೀಡುವ ತೀರ್ಮಾನ ಕೈಗೊಂಡಿದ್ದೇನೆ. ನಾನು ಕಚೇರಿಯಲ್ಲಿ ಇರುವ ಪ್ರತೀ ಸೋಮವಾರ ಗಂಜಿ ದೊರೆಯಲಿದೆ. ಕಚೇರಿ ಆವರಣದಲ್ಲೇ ಗಂಜಿ ವಿತರಿಸಲು ಅಗತ್ಯವಿರುವ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ” ಎಂದು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಸರಿಗಮಪ ಲಿಟಲ್ ಚಾಂಪ್ಸ್ ವಿನ್ನರ್ ಅಶ್ಮಿತ್‌ಗೆ ವಿಟ್ಲದಲ್ಲಿ ಅದ್ಧೂರಿ ಸ್ವಾಗತ: ಹುಟ್ಟೂರಿನ ಗೌರವ, ರೋಡ್ ಶೋ

ವಿಟ್ಲ: ಝೀ ಕನ್ನಡದ ಸರಿಗಮಪ ಲಿಟಲ್ ಚಾಂಪ್ಸ್ ರಿಯಾಲಿಟಿ ಶೋನಲ್ಲಿ ವಿಜೇತರಾಗಿ ಹೊರಹೊಮ್ಮಿದ…

1 of 139