tamanvi
ಟ್ರೆಂಡಿಂಗ್ ನ್ಯೂಸ್

ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ವತಿಯಿಂದ ಪುತ್ತೂರಿನಲ್ಲಿ ಕಾರ್ಗಿಲ್ ವಿಜಯ ದಿವಸ್ ಆಚರಣೆ | ಸೈನಿಕ ದೇವೋಭವ ಎನ್ನುವುದು ನಮ್ಮ ಸಂಕಲ್ಪವಾಗಬೇಕು: ಸುಬ್ರಹ್ಮಣ್ಯ ನಟ್ಟೋಜ

D_shiva_bhat

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು ತಾಲೂಕಿನಲ್ಲಿ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಕರ್ನಾಟಕ ಇವರ ಮಾರ್ಗದರ್ಶನದಲ್ಲಿ 4ನೇ ಬಾರಿಗೆ ಕಾರ್ಗಿಲ್ ವಿಜಯ್ ದಿವಸ್ ಆಚರಣೆಯನ್ನು ಪುತ್ತೂರಿನ ಕಿಲ್ಲೆ ಮೈದಾನಲ್ಲಿನ ಅಮರ್ಜವಾನ್ಜ್ಯೋತಿ ಸ್ಮಾರಕದಲ್ಲಿ ಜುಲೈ 26ರಂದು ಆಚರಿಸಲಾಯಿತು.

kargil

maithri

ಮುಂಜಾನೆ 5 ಗಂಟೆಗೆ ಆರಂಭವಾದ ಕಾರ್ಯಕ್ರಮದಲ್ಲಿ ದಿಕ್ಸೂಚಿ ಮಾತುಗಾರರಾಗಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿರುವ ಮತ್ತು ನಮ್ಮ ಸಮಿತಿಯ ಲೆಕ್ಕ ಪತ್ರ ಪ್ರಮುಖರಾದ ದಯಾನಂದ ಅವರು ಕಾರ್ಗಿಲ್ ಯುದ್ಧದ ಹಿನ್ನೆಲೆ, ಅದರ ಮಹತ್ವ, ಕಾರ್ಗಿಲ್ಯುದ್ಧದಲ್ಲಿ ನಡೆದ ಘಟನೆಗಳು ಹಾಗೂ ಅಮರ ಜ್ಯೋತಿಯ ಕುರಿತು ಅನೇಕ ಮಾಹಿತಿಗಳನ್ನು ನಮಗೆ ಸರಳವಾಗಿ ಮತ್ತು ಅರ್ಥಪೂರ್ಣವಾಗಿ ತಿಳಿಸಿಕೊಟ್ಟರು.

ಮುಖ್ಯ ಅಭ್ಯಾಗತರಾಗಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ, ತಮ್ಮ ನಿನ್ನೆಗಳನ್ನ ನಮಗೆ ಧಾರೆ ಎರೆದ ವೀರ ಯೋಧರಿಗೆ ನಮನ ಸಲ್ಲಿಸುವ ಸಲುವಾಗಿ ರಾಷ್ಟ್ರ ಪ್ರೇಮದ ತ್ಯಾಗದ ಬಗ್ಗೆ ಹೃದಯ ತಟ್ಟುವಂತೆ ವಿವರಿಸಿದರು. ನಾವು ಸಾಮಾನ್ಯವಾಗಿ ಪಿತೃ ಋಣ, ಮಾತೃ ಋಣ ಎಂಬ ಮಾತುಗಳನ್ನು ಕೇಳುತ್ತಾ ಇರುತ್ತೇವೆ. ಆದರೆ ಇವೆಲ್ಲಕ್ಕಿಂತ ಮೊದಲು ನಮ್ಮ ದೇಶವನ್ನು ಕಾಪಾಡುವ ಸೈನಿಕರ ಋಣವನ್ನು ನಾವು ಮರೆಯಲೇಬಾರದು. ಗಡಿಯಲ್ಲಿ ಸೈನಿಕರು ಎಚ್ಚರದಿಂದ ನಿಂತಿರುವುದರಿಂದ ನಾವು ನಮ್ಮ ಮನೆಗಳಲ್ಲಿ ನೆಮ್ಮದಿಯಾಗಿ ಬದುಕಲು, ನಿದ್ರೆ ಮಾಡಲು ಮತ್ತು ನಮ್ಮ ಜೀವನವನ್ನು ನಡೆಸಲು ಸಾಧ್ಯವಾಗಿದೆ. ಆದ್ದರಿಂದ ನಮ್ಮ ಮೇಲೆ ಸೈನಿಕರ ಋಣ ಅಪಾರವಾಗಿದೆ. ಸೈನಿಕರ ನೆನಪಿಗಾಗಿ ಪ್ರತಿದಿನ ಬೆಳಗುವ ಜ್ಯೋತಿ ಕೇವಲ ಒಂದು ಬೆಳಕು ಅಲ್ಲ. ಅದು ನಮ್ಮ ವೀರಯೋಧರ ತ್ಯಾಗವನ್ನು ಸದಾ ನೆನಪಿಸುವ ಕೃತಜ್ಞತೆಯ ಜ್ಯೋತಿ. ರಾಷ್ಟ್ರದೇವೋಭವ, ಅತಿಥಿದೇವೋಭವ, ಮಾತೃದೇವೋಭವ, ಪಿತೃ ದೇವೋಭವ ಅನ್ನುತ್ತೇವೆ ಆದರೆ ಸೈನಿಕರ ತ್ಯಾಗಕ್ಕಾಗಿ ಅವರಿಗೆ ಸೈನಿಕದೇವೋಭವ ಎಂದು ಹೇಳಬೇಕಾದುದು ನಮ್ಮ ಸಂಕಲ್ಪವಾಗಬೇಕು ಎಂದರು.

ಅಧ್ಯಕ್ಷತೆಯನ್ನು ವಹಿಸಿದ್ದ ತಾಲೂಕು ವಿಸ್ತರಣಾ ಪ್ರಮುಖರಾದ ಪುಷ್ಪರಾಜ್ ಮಾತನಾಡಿ, ಎಸ್ಪಿವೈಎಸ್ಎಸ್ಸಮಿತಿಯ ಧ್ಯೇಯೋದ್ದೇಶದ ಬಗ್ಗೆ ತಿಳಿಸುತ್ತಾ, ಹಿಮಾವೃತವಾದ ಪ್ರದೇಶದಲ್ಲಿ ತಮ್ಮ ಹೆಂಡತಿ ಮಕ್ಕಳು ಹಾಗೂ ಕುಟುಂಬವನ್ನು ಬಿಟ್ಟು ದೇಶದ ರಕ್ಷಣೆ ತಮ್ಮ ಮೊದಲ ಕರ್ತವ್ಯವೆಂದು ಭಾವಿಸಿ, ಸೈನಿಕರು ಹೋರಾಡಿದ ತ್ಯಾಗ ಮತ್ತು ಸೇವೆಯ ಕುರಿತು ಮಾತನಾಡುತ್ತಾ ನಮ್ಮ ಪ್ರೀತಿ ಪಾತ್ರವನ್ನು ಬಿಟ್ಟು ಪ್ರಾಣದ ಹಂಗನ್ನೂ ತೊರೆದು ದೇಶಕ್ಕಾಗಿ ಹೋರಾಡುವ ಸೈನಿಕರ ತ್ಯಾಗವನ್ನು ನಾವು ಎಷ್ಟು ಗೌರವಿಸಿದರೂ ಕಡಿಮೆಯೇ ಎಂದರು.

ನಿವೃತ್ತ ಯೋಧರಾದ ಸುಂದರಗೌಡ, ಕೆ.ಎಸ್. ಲಿಂಗಪ್ಪ, ಪುರಂದರ ಗೌಡ, ಉದನೇಶ್ವರ ಪ್ರಸಾದ್, ಚಂದ್ರಶೇಖರ ಗೌಡ ಅರಿಯಡ್ಕ, ಚಂಚಲಾಕ್ಷ ಬಿ, ಮತ್ತು ಜಯಂತ ಬೇಕಲ್ ಇವರುಗಳನ್ನು ದೇವಣ್ಣ, ತುಕಾರಾಮ, ಸಂತೋಷ್, ಸುಂದರ, ಪ್ರಭಾಕರ, ಪ್ರಕಾಶ್ ಅಣ್ಣಡ್ಕ, ಜ್ಞಾನೇಶ್ ಅವರು ಶಾಲು, ಹೂವು ಹಣ್ಣು, ಸ್ಮರಣಿಕೆಯೊಂದಿಗೆ ಗೌರವಪೂರ್ವಕವಾಗಿ ಸನ್ಮಾನಿಸಿದರು. ತದನಂತರ ಅತಿಥಿಗಳಿಂದ ಹಾಗೂ ಯೋಗಬಂಧುಗಳಿಂದ ಅಮರ್ಜವಾನ್ಜ್ಯೋತಿ ಸ್ಮಾರಕಕ್ಕೆ ಪುಷ್ಪಾರ್ಚನೆ ಮಾಡಲಾಯಿತು.

ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಜಿಲ್ಲಾ ಪ್ರಮುಖರು, ತಾಲೂಕು ಪ್ರಮುಖರು, ಶಿಕ್ಷಕರು ಹಾಗೂ ಯೋಗ ಬಂಧುಗಳು ಉಪಸ್ಥಿತರಿದ್ದರು.

ಶೈಲಾ ರೈ ಮತ್ತು ಚಂದ್ರಾವತಿ ವಂದೇ ಮಾತರಂ ಗೀತೆ ಹಾಡಿದರು. ಉಷಾ ದೇಶಭಕ್ತಿಗೀತೆ ಹಾಡಿದರು. ವಿನಯಾ ಪೈ ಪ್ರಾರ್ಥಿಸಿ, ಗಾಯತ್ರಿ ಸ್ವಾಗತಿಸಿದರು. ಕಾರ್ಯಕ್ರಮದ ಸಂಚಾಲಕ ಮುರಳೀಧರ್ ನಾಯಕ್ ವಂದಿಸಿದರು. ಯಶೋಧ ಕಾರ್ಯಕ್ರಮ ನಿರೂಪಿಸಿದರು.

ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಸುಳ್ಯದಲ್ಲಿ ಇಂದು ‘ದಿ ರಿದಾನ್ ಮಂದಿ’ ಶುಭಾರಂಭ | ಅರೇಬಿಯನ್ ಸಾಂಪ್ರದಾಯಿಕ ರುಚಿಯ ಸವಿಗೆ ಭವ್ಯ ಚಾಲನೆ

ಕರಾವಳಿ ಭಾಗದ ಆಹಾರಪ್ರಿಯರ ಬಹು ನಿರೀಕ್ಷಿತ ‘ದಿ ರಿದಾನ್ ಮಂದಿ’ ಫ್ಯಾಮಿಲಿ ರೆಸ್ಟೋರೆಂಟ್ ಇಂದು…