tamanvi
ಟ್ರೆಂಡಿಂಗ್ ನ್ಯೂಸ್

ಜಿ.ಎಲ್ ಆಚಾರ್ಯ ಜ್ಯುವೆಲ್ಲರ್ಸ್’ನಲ್ಲಿ ಯುಗಾದಿ ಹಬ್ಬದ ಪ್ರಯುಕ್ತ ವಿಶೇಷ ಕೊಡುಗೆಗಳು

ಈ ಸುದ್ದಿಯನ್ನು ಶೇರ್ ಮಾಡಿ

ಹೊಸ ವರ್ಷದ ಆರಂಭ ಮತ್ತು ಸಮೃದ್ಧಿಯ ಸಂಕೇತವಾದ ಯುಗಾದಿ ಹಬ್ಬದ ಪ್ರಯುಕ್ತ ಪುತ್ತೂರಿನ ಪ್ರತಿಷ್ಠಿತ ಚಿನ್ನಾಭರಣಗಳ ಮಳಿಗೆ ಜಿ.ಎಲ್ ಆಚಾರ್ಯ ಜ್ಯುವೆಲ್ಲರ್ಸ್ ತನ್ನ ಗ್ರಾಹಕರಿಗಾಗಿ ವಿಶೇಷ ಕೊಡುಗೆಗಳನ್ನು ಪ್ರಕಟಿಸಿದೆ.

ಹಳದಿ ಟ್ಯಾಗ್ ಹೊಂದಿರುವ ವಿಶೇಷ ಆಭರಣಗಳ ಮೇಕಿಂಗ್ ಶುಲ್ಕಗಳ ಮೇಲೆ 50%ವರೆಗೆ ರಿಯಾಯಿತಿಯೊಂದಿಗೆ ಖರೀದಿ ಮಾಡುವ ಅವಕಾಶವನ್ನು ಪಡೆಯಬಹುದು. ಪುತ್ತೂರು, ಸುಳ್ಯ, ಹಾಸನ, ಕುಶಾಲನಗರ ಹಾಗೂ ಮೂಡಬಿದ್ರೆಯ ಎಲ್ಲಾ ಮಳಿಗೆಗಳಲ್ಲಿ ಈ ಆಫರ್ ಲಭ್ಯವಿದ್ದು, ಗ್ರಾಹಕರು ಹಬ್ಬದ ಸಂಭ್ರಮವನ್ನು ಹೊಸ ಆಭರಣಗಳೊಂದಿಗೆ ಆಚರಿಸಲು ಉತ್ತಮ ಅವಕಾಶ ಕಲ್ಪಿಸಲಾಗಿದೆ.

ಈ ಕೊಡುಗೆ ಮಾರ್ಚ್ 18ರಿಂದ 23ರವರೆಗೆ ಮಾತ್ರ ಲಭ್ಯವಿರುತ್ತದೆ. ಯುಗಾದಿ ಹಬ್ಬದ ಹಿನ್ನಲೆಯಲ್ಲಿ ಚಿನ್ನ, ವಜ್ರ ಮತ್ತು ಬೆಳ್ಳಿಯ ಆಭರಣಗಳ ಮೇಲೆ ಆಕರ್ಷಕ ರಿಯಾಯಿತಿ ನೀಡಲಾಗುತ್ತಿದೆ.

ಯುಗಾದಿ ಹಬ್ಬಕ್ಕಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ “ಪ್ರಾಚಿ ಇಲೈಟ್”, ‘ಟೆಂಪಲ್ ಜ್ಯುವೆಲ್ಲರಿ’, ಆ್ಯಂಟಿಕ್ ಮತ್ತು ಪರಂಪರೆಯ ವಿನ್ಯಾಸಗಳ ಜೊತೆಗೆ ಆಧುನಿಕ ವಿನ್ಯಾಸಗಳ ಆಭರಣಗಳು ಲಭ್ಯವಿದ್ದು ಮದುವೆ ಹಾಗೂ ಹಬ್ಬಗಳಿಗಾಗಿ ಆಭರಣಗಳ ವಿಶಾಲ ಸಂಗ್ರಹವಿದ್ದು ಎಲ್ಲಾ ವಯೋಮಿತಿಯ ಗ್ರಾಹಕರಿಗೆ ತಕ್ಕಂತೆ ಚಿನ್ನ ಹಾಗೂ ವಜ್ರಾಭರಣಗಳ ಆಯ್ಕೆ ಲಭ್ಯವಿದೆ. ಪುರುಷರಿಗಾಗಿ “ಪಾರ್ಥ ಹಾಗೂ ಡೈಮಂಡ್‌ನಲ್ಲಿ ಗ್ಲೋ ಹಾಗೂ ಗೋಲೈಟ್ ಹಾಗೂ ಕರಿಮಣಿಗಳ ವಿಶೇಷ ಸಂಗ್ರಹವಿದೆ. ಹೆಚ್ಚುತ್ತಿರುವ ಚಿನ್ನದ ಬೆಲೆ ಹಿನ್ನಲೆಯಲ್ಲಿ ಹಳೆಯ ವಿನ್ಯಾಸದ ಆಭರಣಗಳನ್ನು ಹೊಸ ಟ್ರೆಂಡ್‌ಗಳ ಡಿಸೈನ್‌ಗೆ ಬದಲಾಯಿಸಲು ಇದು ಒಂದು ಉತ್ತಮ ಅವಕಾಶವಾಗಿದೆ.

“ಗ್ರಾಹಕರ ನಂಬಿಕೆಯೇ ನಮ್ಮ ಸಂಸ್ಥೆಯ ಮೂಲಾಧಾರ. ಈ ಯುಗಾದಿ ಎಲ್ಲರ ಬಾಳಿನಲ್ಲಿ ಹೊಸ ಬೆಳಕು ತರಲಿ ಎಂಬ ಆಶಯದೊಂದಿಗೆ ನಾವು ಈ ವಿಶೇಷ ಆಫರ್‌ಗಳನ್ನು ಪರಿಚಯಿಸಿದ್ದೇವೆ” ಎಂದು ಸಂಸ್ಥೆಯ ಚೇರ್‌ಮ್ಯಾನ್‌ರಾದ ಜಿ.ಎಲ್. ಬಲರಾಮ ಆಚಾರ್ಯ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಜಿ.ಎಲ್ ಆಚಾರ್ಯ ಜ್ಯುವೆಲ್ಲರ್ಸ್ ವತಿಯಿಂದ ಗಣೇಶ ಚತುರ್ಥಿ ಪ್ರಯುಕ್ತ ವಿಶೇಷ ಕೊಡುಗೆಗಳು

ಪುತ್ತೂರು: ಗಣೇಶ ಚತುರ್ಥಿಯ ಶುಭ ಸಂದರ್ಭವನ್ನು ಇನ್ನಷ್ಟು ಸಡಗರದಿಂದ ಆಚರಿಸಲು ಖ್ಯಾತ ಜಿ ಎಲ್…

ವಾಯುಪಡೆ ಬಳಿಕ ವಾಣಿಜ್ಯ ವಿಮಾನಯಾನಕ್ಕೆ ಅಭಿನಂದನ್ ವರ್ಧಮಾನ್; FLY91ಗೆ ಪೈಲಟ್ ಆಗಿ ಸೇರ್ಪಡೆ..!!

ನವದೆಹಲಿ: ಪಾಕಿಸ್ತಾನದ ವಿರುದ್ಧದ ಬಾಲಾಕೋಟ್ ಕಾರ್ಯಾಚರಣೆಯ ಬಳಿಕ ದೇಶಾದ್ಯಂತ ಸಂಚಲನ ಮೂಡಿಸಿದ್ದ…

ತಂಬಾಕು-ನಿಕೋಟಿನ್ ಉತ್ಪನ್ನಗಳ ನಿಷೇಧ: ಅಡಿಕೆ ಬೆಳೆಗಾರರಿಗೆ ತೊಂದರೆಯಾಗದಂತೆ ಕ್ರಮಕ್ಕೆ ಕ್ಯಾಂಪ್ಕೊ ಆಗ್ರಹ

ಮಂಗಳೂರು: ಕರ್ನಾಟಕ ಸರ್ಕಾರವು ತಂಬಾಕು ಮತ್ತು ನಿಕೋಟಿನ್ ಅಂಶವುಳ್ಳ ಉತ್ಪನ್ನಗಳ ಮಾರಾಟ ಹಾಗೂ…

ನಾಡಪ್ರಭು ಕೆಂಪೇಗೌಡ ರಾಜ್ಯ ಪ್ರಶಸ್ತಿ ಪುರಸ್ಕೃತ ಕೇಶವ ಅಮೈ ಅವರಿಗೆ ದರ್ಬೆಯಲ್ಲಿ ಸ್ವಾಗತ, ಮೆರವಣಿಗೆ

ಫುತ್ತೂರು: ಬೆಂಗಳೂರಿನಲ್ಲಿ ನಾಡಪ್ರಭು ಕೆಂಪೇಗೌಡ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಎಸ್.ಆರ್.ಕೆ.…