ಟ್ರೆಂಡಿಂಗ್ ನ್ಯೂಸ್

ರೋಟರಿ ಕ್ಲಬ್ ಪುತ್ತೂರು ಯುವ ಪದ ಸ್ವೀಕಾರ ಸಮಾರಂಭ – ಅಧ್ಯಕ್ಷೆಯಾಗಿ ವಚನ ಜಯರಾಂ, ಕಾರ್ಯದರ್ಶಿಯಾಗಿ ಅನೂಪ್ ಕೆ.ಜೆ. | ತಾಲೂಕಿನ ವಿದ್ಯಾರ್ಥಿನಿಯರಿಗಾಗಿ ‘ಸುವಿಧಾ ಸಖಿ’ ಯೋಜನೆ ಘೋಷಿಸಿದ ಅಧ್ಯಕ್ಷೆ

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ರೋಟರಿ ಕ್ಲಬ್ ಪುತ್ತೂರು ಯುವದ 2026-27ನೇ ಸಾಲಿನ ಪದಾಧಿಕಾರಿಗಳ ಪದ ಸ್ವೀಕಾರ ಸಮಾರಂಭ ಭಾನುವಾರ ಸಂಜೆ ಸಂತ ಫಿಲೋಮಿನಾ ಕಾಲೇಜಿನ ಸಭಾಂಗಣದಲ್ಲಿ ಅದ್ದೂರಿಯಾಗಿ ನಡೆಯಿತು.

maithri

2026-27ನೇ ಸಾಲಿನ ರೋಟರಿ ಕ್ಲಬ್ ಪುತ್ತೂರು ಯುವದ ಅಧ್ಯಕ್ಷೆಯಾಗಿ ಪದಸ್ವೀಕಾರ ಮಾಡಿದ ವಚನ ಜಯರಾಮ್ ಮಾತನಾಡಿ, ನಮ್ಮ ಒಂದು ವರ್ಷದ ಸೇವಾ ಚಟುವಟಿಕೆಗಳಲ್ಲಿ ಕ್ಲಬ್‌ನ ಪ್ರತಿಯೋರ್ವ ಸದಸ್ಯರು ಸಕ್ರೀಯವಾಗಿ ತೊಡಗಿಸಿಕೊಳ್ಳಲು ನಿರ್ಧರಿಸಿದ್ದೇವೆ. ಈ ರೋಟರಿ ವರ್ಷದಲ್ಲಿ ನಮ್ಮ ಯೋಜನೆಗಳಲ್ಲಿ ಪ್ರಮುಖವಾಗಿರುವುದು – ಸುವಿಧಾ ಸಖಿ. ಶಾಲಾ ವಿದ್ಯಾರ್ಥಿನಿಯರಲ್ಲಿ ಶುಚಿತ್ವದ ಜಾಗೃತಿ ಮೂಡಿಸುವುದೇ ಈ ಯೋಜನೆಯ ಪ್ರಮುಖ ಉದ್ದೇಶ. ಈಗಿರುವ ಮಾಹಿತಿಯಂತೆ 5ರಲ್ಲಿ 1 ಹೆಣ್ಮಗು ಶಾಲೆಯಿಂದ ದೂರ ಉಳಿಯುತ್ತಿವೆ. ಕಾರಣ ಮುಟ್ಟಿನ ಸಮಸ್ಯೆ. ಇದು ಸಮಸ್ಯೆಯಲ್ಲ. ಶುಚಿತ್ವದಿಂದ ನಿಭಾಯಿಸಿದರೆ, ಉಳಿದ ದಿನಗಳಂತೆ ಮುಟ್ಟಿನ ದಿನಗಳನ್ನು ಆರಾಮವಾಗಿ ಕಳೆಯಬಹುದು ಎನ್ನುವುದನ್ನು ಅವರಿಗೆ ಮನವರಿಕೆ ಮಾಡಲಿದ್ದೇವೆ. ಈ ಯೋಜನೆಗೆ 2500 ವಿದ್ಯಾರ್ಥಿನಿಯರನ್ನು ಈ ವರ್ಷ ತೆಗೆದುಕೊಳ್ಳಲಿದ್ದೇವೆ ಎಂದರು.

ಪ್ರಗತಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಡಾ. ಸುಧಾ ಎಸ್. ರಾವ್ ಅವರು ಪದಪ್ರದಾನ ನೆರವೇರಿಸಿದರು. ಅಸಿಸ್ಟೆಂಟ್ ಗವರ್ನರ್ ಝೇವಿಯರ್ ಡಿಸೋಜಾ, ವಲಯ ಸೇನಾನಿ ಪಶುಪತಿ ಶರ್ಮಾ, ರೋಟರಿ ಕ್ಲಬ್ ಪುತ್ತೂರು ಈಸ್ಟ್ ಅಧ್ಯಕ್ಷ ರವಿಕುಮಾರ್ ರೈ ಅತಿಥಿಯಾಗಿದ್ದರು.

ಕಾರ್ಯದರ್ಶಿಯಾಗಿ ಅನೂಪ್ ಕೆ.ಜೆ, ಕೋಶಾಧಿಕಾರಿಯಾಗಿ ನರಸಿಂಹ ಪೈ  ಪದ ಸ್ವೀಕಾರ ಮಾಡಿದರು.

ನಿಕಟಪೂರ್ವ ಅಧ್ಯಕ್ಷರಾಗಿ ಕುಸುಮ್ ರಾಜ್, ಸಾರ್ಜಂಟ್ ಅಟ್ ಆಮ್ಸ್೯ ಆಗಿ ಆಶಾ ನಾಯಕ್, ಜೊತೆ ಕಾರ್ಯದರ್ಶಿಯಾಗಿ ಪ್ರಜ್ಞಾ ದೇವಿ, ನಿಯೋಜಿತ ಅಧ್ಯಕ್ಷರಾಗಿ ಸತೀಶ್ ರೈ ಕಟ್ಟಾವು, ವೊಕೇಶನಲ್ ಸರ್ವಿಸ್ ನಿರ್ದೇಶಕರಾಗಿ ಸಾಯಿರಾಂ ಬಾಳಿಲ, ಕಮ್ಯೂನಿಟಿ ಸರ್ವಿಸ್ ನಿರ್ದೇಶಕರಾಗಿ ಅಭಿಶ್ ಕೆ, ಯೂತ್ ಸರ್ವಿಸ್ ನಿರ್ದೇಶಕರಾಗಿ ಶಿವಪ್ರಕಾಶ್, ಇಂಟರ್ನ್ಯಾಷನಲ್ ಸರ್ವಿಸ್ ನಿರ್ದೇಶಕರಾಗಿ ವಿನೀತ್ ಶೆಣೈ, ಬುಲೆಟಿನ್ ಎಡಿಟರ್ ಆಗಿ ಶರತ್ ಶ್ರೀನಿವಾಸ್, ಕ್ಲಬ್ ಎಕ್ಸಿಕ್ಯೂಟಿವ್ ಕಾರ್ಯದರ್ಶಿಯಾಗಿ ಉಮೇಶ್ ನಾಯಕ್, ಕ್ಲಬ್ ಅಡ್ಮಿನಿಸ್ಟ್ರೇಶನ್ ಚೇರ್ಮನ್ ಅಶ್ವಿನಿ ಮುಳಿಯ, ಕ್ಲಬ್ ಮೆಂಬರ್ ಶಿಪ್ ಚೇರ್ಮನ್ ದೇವಿಚರಣ್ ರೈ, ಕ್ಲಬ್ ಲರ್ನಿಂಗ್ ಫೆಸಿಲಿಟೇಟರ್ ರತ್ನಾಕರ್ ರೈ, ಕ್ಲಬ್ ಫೌಂಡೇಶನ್ ಚೇರ್ಮನ್ ಭರತ್ ಪೈ, ಪಲ್ಸ್ ಪೋಲಿಯೊ ಚೇರ್ಮನ್ ಡಾ.ಯದುರಾಜ್ ಡಿ.ಕೆ, ಪಬ್ಲಿಕ್ ಇಮೇಜ್ ಚೇರ್ಮನ್ ಡಾ.ಹರ್ಷಕುಮಾರ್ ರೈ, ಸಾಂಸ್ಕೃತಿಕ ಇವೆಂಟ್ಸ್ ಚೇರ್ಮನ್ ತ್ರಿವೇಣಿ ಗಣೇಶ್, ಸ್ಪೋರ್ಟ್ಸ್ ಚೇರ್ಮನ್ ಭರತ್ ನಾಯಕ್ ರವರು ಪದ ಸ್ವೀಕರಿಸಿದರು.

ವಚನ ಜಯರಾಮ್:

ನೂತನ ಅಧ್ಯಕ್ಷೆಯಾಗಿ ಆಯ್ಕೆಯಾದ ವಚನ ಜಯರಾಮ್ ರವರು ಪುತ್ತೂರಿನ ರಾಜಕೀಯ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ವಿಶಿಷ್ಟ ಛಾಪು ಮೂಡಿಸಿದ್ದ, ಎಪಿಎಂಸಿ ಸ್ಥಾಪನೆ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದ ದಿ. ಸಿ.ಪಿ. ಜಯರಾಮ್ ಗೌಡ ಹಾಗೂ ಚಂದ್ರಕಲಾರವರ ಪುತ್ರಿ. ಬಿ.ಇ. ಹಾಗೂ ಎಂಬಿಎ ಪದವೀಧರೆ. ಬೆಂಗಳೂರಿನಲ್ಲಿ 18 ವರ್ಷಗಳ ಕಾಲ ಮಾಹಿತಿ ತಂತ್ರಜ್ಞಾನ ಮತ್ತು ಕಾರ್ಪೊರೇಟ್ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ, ಸುಮಾರು 4,500 ಸಿಬ್ಬಂದಿಗಳ ತಂಡದ ಮುಖ್ಯಸ್ಥೆಯಾಗಿ ಕಾರ್ಯ ನಿರ್ವಹಿಸಿ, ಬಳಿಕ “ಮರಳಿ ಮಣ್ಣಿಗೆ” ಎಂಬ ಸಂಕಲ್ಪದೊಂದಿಗೆ ಚಾರ್ವಾಕದಲ್ಲಿ ಕೃಷಿಯಲ್ಲಿ ತೊಡಗಿಸಿಕೊಂಡು, ಪ್ರಸ್ತುತ ಪುತ್ತೂರಿನಲ್ಲಿ ನೆಲೆಸಿದ್ದಾರೆ. ರೋಟರಿ ಕ್ಲಬ್ ಪುತ್ತೂರು ಯುವ ಹಾಗೂ ಇನ್ನರ್ ವ್ಹೀಲ್ ಕ್ಲಬ್‌ನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿರುವ ಅವರು, ಹಲವು ಶಿಕ್ಷಣ ಸಂಸ್ಥೆಗಳ ಸಲಹಾ ಸಮಿತಿಗಳ ಸದಸ್ಯೆಯಾಗಿದ್ದು, ಅದಿವಾ ಲೈಫ್‌ಸ್ಟೈಲ್ ಸಂಸ್ಥೆಯ ಆಡಳಿತ ನಿರ್ದೇಶಕಿಯಾಗಿದ್ದಾರೆ.

ಅನೂಪ್ ಕೆ ಜೆ:

ನೂತನ ಕಾರ್ಯದರ್ಶಿಯಾಗಿ ಆಯ್ಕೆಯಾದ ಅನೂಪ್ ಕೆ.ಜೆ. ಅವರು ಸುಳ್ಯ ತಾಲೂಕಿನ ಒಡಬೈ ನಿವಾಸಿ ನಿವೃತ್ತ ವಿಜಯ ಬ್ಯಾಂಕ್ ಪ್ರಬಂಧಕ ಜನಾರ್ಧನ  ಗೌಡ ಕೊಳಂಜಿ ರೋಡಿ ಮತ್ತು ಕುಸುಮಾ ದಂಪತಿಗಳ ಪುತ್ರ. ಅವರು  ವಿದ್ಯಾಭ್ಯಾಸವನ್ನು ಮುಗಿಸಿ ಐಟಿ ಇಂಜಿನಿಯರ್ ಆಗಿ ತಮ್ಮ ವೃತ್ತಿ ಬದುಕನ್ನು ಬೆಂಗಳೂರಿನ L&T ಸಂಸ್ಥೆಯಲ್ಲಿ ಪ್ರಾರಂಭಿಸಿದ್ದರು. ಬಳಿಕ ಕ್ಯಾಪ್ ಜೆಮಿನಿ ಸಂಸ್ಥೆಯಲ್ಲಿ 9 ವರ್ಷಗಳ ಕಾಲ ಸೇವೆ ಸಲ್ಲಿಸಿ, ತಮ್ಮ ವೃತ್ತಿ ಜೀವನಕ್ಕೆ ವಿದಾಯ ಹೇಳಿ ಸ್ವಂತ ಉದ್ಯಮವನ್ನು ಆರಂಭಿಸುವ ನೆಲೆಯಲ್ಲಿ ಕೋರ್ ಟೆಕ್ನಾಲಜಿಸ್ ಎಂಬ ಸಂಸ್ಥೆಯನ್ನು 2017ರಲ್ಲಿ ಪುತ್ತೂರಿನಲ್ಲಿ ಪ್ರಾರಂಭಿಸಿದರು. ಇದೀಗ  ತನ್ನ ಊರಾದ ಸುಳ್ಯದಲ್ಲಿ ಹಾಗೂ ಮಂಗಳೂರಿನ ಕಂಕನಾಡಿಯಲ್ಲಿ ಮೂರನೇ ಶಾಖೆಯನ್ನು ತೆರೆದಿರುತ್ತಾರೆ. 2009ರಲ್ಲಿ ರೋಟರಾಕ್ಟ್ ಕ್ಲಬ್ ಸುಳ್ಯ ಇದರ ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸಿದ್ದು, ನಂತರ 2023ರಲ್ಲಿ ಜೆಸಿಐ ಸದಸ್ಯರಾಗಿ ಸೇರ್ಪಡೆಗೊಂಡು ಬ್ಯುಸಿನೆಸ್ ವಿಪಿ ಹಾಗೂ ಜೇಕಾಂ ಪುತ್ತೂರು ಟೇಬಲ್ 1.0 ಇದರ ಸ್ಥಾಪಕ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಾರೆ. ಪ್ರಸ್ತುತ ಹಿಂದೂ ಎಕನಾಮಿಕ್ ಫೋರಮ್ ನಾ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ನರಸಿಂಹ ಪೈ:

‌ನೂತನ ಕೋಶಾಧಿಕಾರಿಯಾಗಿ ಆಯ್ಕೆಯಾದ ನರಸಿಂಹ ಪೈರವರು ದರ್ಬೆ ಗಣೇಶ್ ಟ್ರೇಡರ್ಸ್ ಮಾಲಕ ಪಿ.ವಾಮನ್ ಪೈ ಮತ್ತು ಅನುರಾಧ ವಿ. ಪೈರವರ ಪುತ್ರ. ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಬಿಇ ಪದವಿ ಪಡೆದಿದ್ದು, ಅರ್ಹತೆಯಿಂದ ಸಿಎಡಿ ರಚನೆಗಳಲ್ಲಿ ಎಂಟೆಕ್ ಮತ್ತು ವೃತ್ತಿಯಲ್ಲಿ ಉದ್ಯಮಿಯಾಗಿದ್ದಾರೆ. ಪ್ರಸ್ತುತ ಪುತ್ತೂರಿನ ದರ್ಬೆಯಲ್ಲಿರುವ ಗಣೇಶ್ ಟ್ರೇಡರ್ಸ್‌ನ ವ್ಯವಸ್ಥಾಪಕ ಪಾಲುದಾರರಾಗಿರುತ್ತಾರೆ. ರೋಟರಿ ಕ್ಲಬ್ ಪುತ್ತೂರು ಯುವದ ಪೂರ್ವಾಧ್ಯಕ್ಷರಾಗಿ, ವಲಯ ಸೇನಾನಿಯಾಗಿ ಕರ್ತವ್ಯ ನಿರ್ವಹಿಸಿದ್ದು ಅವರು ಉತ್ತಮ ಕ್ರಿಕೆಟಿಗ, ಬ್ಯಾಡ್ಮಿಂಟನ್ ಮತ್ತು ಟೆನಿಸ್ ಆಟಗಾರರಾಗಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ನಾಡಪ್ರಭು ಕೆಂಪೇಗೌಡ ರಾಜ್ಯ ಪ್ರಶಸ್ತಿ ಪುರಸ್ಕೃತ ಕೇಶವ ಅಮೈ ಅವರಿಗೆ ದರ್ಬೆಯಲ್ಲಿ ಸ್ವಾಗತ, ಮೆರವಣಿಗೆ

ಫುತ್ತೂರು: ಬೆಂಗಳೂರಿನಲ್ಲಿ ನಾಡಪ್ರಭು ಕೆಂಪೇಗೌಡ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಎಸ್.ಆರ್.ಕೆ.…