ಟ್ರೆಂಡಿಂಗ್ ನ್ಯೂಸ್

ಪುತ್ತೂರಿನಲ್ಲಿ ಮುಳಿಯ’ಸ್ ಟೈಮ್ ಝೋನ್ ವಾಚ್ ಕೌಂಟರ್ ಶುಭಾರಂಭ | ಗಮನ ಸೆಳೆಯುತ್ತಿವೆ ಉಂಗುರ ವಾಚ್, ಚಿನ್ನಾಭರಣದ ವಾಚ್ ಸೇರಿದಂತೆ ವಿವಿಧ ಬ್ರಾಂಡ್’ಗಳ ವಾಚುಗಳು

GL

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಇಲ್ಲಿನ ಕೋರ್ಟ್ ರಸ್ತೆಯಲ್ಲಿರುವ ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಶೋರೂಂನಲ್ಲಿ ಗುರುವಾರ ಮುಳಿಯ’ಸ್ ಟೈಮ್ ಝೋನ್ ವಾಚ್ ಕೌಂಟರ್ ಶುಭಾರಂಭಗೊಂಡಿತು.

maithri

ವಾಚ್ ಕೌಂಟರ್ ಉದ್ಘಾಟಿಸಿ ಮಾತನಾಡಿದ ಪುತ್ತೂರು ಕೋಟಿ – ಚೆನ್ನಯ ಜೋಡುಕರೆ ಕಂಬಳ ಸಮಿತಿ ಅಧ್ಯಕ್ಷ ಎನ್. ಚಂದ್ರಹಾಸ ಶೆಟ್ಟಿ, ಚಿನ್ನಾಭರಣ ಸಂಸ್ಥೆಗಳ ಪೈಕಿ ಮುಳಿಯ ನಮ್ಮ ಹೆಮ್ಮೆಯ ಬ್ರಾಂಡ್. ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಕ್ಷೇತ್ರಕ್ಕೆ ಸದಾ ಪ್ರೋತ್ಸಾಹ ನೀಡುತ್ತಿರುವ ಮುಳಿಯ ಜ್ಯುವೆಲ್ಸ್, ಪುತ್ತೂರು ಕಂಬಳಕ್ಕೆ ಪ್ರಾರಂಭದಿಂದಲೂ 1 ಪವನ್ ಚಿನ್ನವನ್ನು ನೀಡುತ್ತಾ ಬಂದಿದೆ. ಸಂಸ್ಥೆ ಇನ್ನಷ್ಟು ಖ್ಯಾತಿ ಪಡೆದುಕೊಳ್ಳಲಿ. ರಾಜ್ಯ ಮಾತ್ರವಲ್ಲ ಹೊರರಾಜ್ಯಗಳಿಗೂ ಮುಳಿಯ ಸಂಸ್ಥೆ ವಿಸ್ತರಿಸುವಂತಾಗಲಿ ಎಂದು ಶುಭಹಾರೈಸಿದರು.

ಪುತ್ತೂರು ಮಹಾವೀರ ಮೆಡಿಕಲ್ ಸೆಂಟರ್ ನ ಕಣ್ಣಿನ ತಜ್ಞೆ ಡಾ. ಆಶಾ ಪುತ್ತೂರಾಯ ಮಾತನಾಡಿ, ನಗುಮೊಗದ ಸೇವೆಯಿಂದಲೇ ಎತ್ತರಕ್ಕೆ ಬೆಳೆದಿರುವ ಮುಳಿಯ ಗೋಲ್ಡ್ & ಡೈಮಂಡ್ಸ್ ಜನತೆಯ ಪ್ರೀತಿ – ವಿಶ್ವಾಸ ಗಳಿಸಿದೆ. ಇದೀಗ ಚಿನ್ನಾಭರಣ ಮಳಿಗೆಯಲ್ಲಿ ವಾಚ್ ಕೌಂಟರ್ ಅನ್ನು ಆರಂಭಿಸಿದ್ದು, ಚಿನ್ನಾಭರಣ ಪ್ರಿಯರು ಇದನ್ನು ಖಂಡಿತಾ ಇಷ್ಟಪಡುತ್ತಾರೆ. ಸಮಯದ ಮೌಲ್ಯ ಪ್ರತಿಯೊಬ್ಬರಿಗೂ ಅರಿವಿರುತ್ತದೆ. ಆ ಮೌಲ್ಯವನ್ನು ಪ್ರತಿಪಾದಿಸುವ ವಾಚ್’ನ ಕೌಂಟನ್ನು ಮುಳಿಯ ತೆರೆದಿರುವುದು ಸಂತೋಷದ ವಿಚಾರ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸಂಸ್ಥೆಯ ಆಡಳಿತ ನಿರ್ದೇಶಕ ಕೃಷ್ಣನಾರಾಯಣ ಮುಳಿಯ, ಗ್ರಾಹಕರ ವಿಶ್ವಾಸನೀಯ ಆಭರಣ ಮಳಿಗೆಯಾಗಿರುವ ಮುಳಿಯವು 82 ವರ್ಷಗಳ ಸುದೀರ್ಘ ಅನುಭವದೊಂದಿಗೆ ಕರಾರುವಕ್ಕಾದ ಶುದ್ಧತೆ, ವಿನ್ಯಾಸ, ಗ್ರಾಹಕ ಸ್ನೇಹಿ ಮಳಿಗೆಯ ಮೂಲಕ ಎಲ್ಲರ ಪ್ರೀತಿ-ವಿಶ್ವಾಸವನ್ನು ಗಳಿಸಿಕೊಂಡಿದೆ. ಪುತ್ತೂರು ಮಳಿಗೆಯಲ್ಲಿ ಪ್ರಸ್ತುತ ಹೊಸದಾಗಿ ವಾಚ್ ಕೌಂಟರ್ ಪ್ರಾರಂಭಿಸಲಾಗುತ್ತಿದ್ದು, ಪ್ರತಿಷ್ಠಿತ ಟೈಟಾನ್ ಬ್ರಾಂಡ್ ಜತೆಗೆ ನೆಬುಲಾ ಗೋಲ್ಡ್ ವಾಚ್ ಗಳು ಕೂಡ ಗ್ರಾಹಕರಿಗೆ ಲಭ್ಯವಾಗಲಿದೆ ಎಂದರು.

ಪುತ್ತೂರು ಮಾನಸ ಟೈಮ್ಸ್ ನ ಕೇಶವಮೂರ್ತಿ ಅವರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭ ಅತಿಥಿಗಳು ನೆಬುಲಾ ಗೋಲ್ಡ್ ವಾಚ್ ಅನಾವರಣಗೊಳಿಸಿದರು.

ಸಂಸ್ಥೆಯ ನಿರ್ದೇಶಕಿ ಅಶ್ವಿನಿ ಕೃಷ್ಣನಾರಾಯಣ ಮುಳಿಯ, ಪುತ್ತೂರು ಶಾಖಾ ಪ್ರಬಂಧಕ ರಾಘವೇಂದ್ರ ಪಾಟೀಲ್ ವೇದಿಕೆಯಲ್ಲಿದ್ದರು.

ಪುತ್ತೂರು ಮಳಿಗೆಯ ಸಿಬಂದಿ ಹರೀಶ್ ಸ್ವಾಗತಿಸಿದರು. ರಾಜೇಶ್ ಜಿ. ವಂದಿಸಿದರು. ಮೃದುಲಾ ಕಾರ್ಯಕ್ರಮ ನಿರೂಪಿಸಿದರು.

ಮುಳಿಯ’ಸ್ ವಾಚ್ ಕೌಂಟರ್:

ಇತ್ತೀಚೆಗಷ್ಟೇ ನೂತನವಾಗಿ ಸಿಂಗಾರಗೊಂಡಿರುವ ಪುತ್ತೂರು ಕೋರ್ಟ್ ರಸ್ತೆಯಲ್ಲಿರುವ ಮುಳಿಯ ಗೋಲ್ಡ್ & ಡೈಮಂಡ್ಸ್ ಶೋರೂಂನ ಮಧ್ಯಭಾಗದಲ್ಲಿ ವಾಚ್ ಕೌಂಟರ್ ನಳನಳಿಸುತ್ತಿದೆ. ವಿವಿಧ ಬ್ರಾಂಡ್’ಗಳ ವಾಚುಗಳು ಇಲ್ಲಿದ್ದು, ಚಿನ್ನಾಭರಣದಿಂದಲೇ ಪೋಣಿಸಿದ ವಾಚುಗಳು ಇಲ್ಲಿ ಗಮನ ಸೆಳೆಯುತ್ತಿವೆ. ಉಂಗುರವನ್ನೇ ಹೋಲುವ ಕೈ ಬೆರಳಿಗೆ ಹಾಕಿಕೊಳ್ಳುವ ವಾಚುಗಳೋ ಆಕರ್ಷಣೀಯ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts