tamanvi
ಟ್ರೆಂಡಿಂಗ್ ನ್ಯೂಸ್

ನಾಡಪ್ರಭು ಕೆಂಪೇಗೌಡ ರಾಜ್ಯ ಪ್ರಶಸ್ತಿಗೆ ಎಸ್ ಆರ್ ಕೆ ಲ್ಯಾಡರ್ಸ್ ಮಾಲಕ ಕೇಶವ ಅಮೈ ಆಯ್ಕೆ | ಜೂನ್ 27ರಂದು ಬೆಂಗಳೂರಿನಲ್ಲಿ ಪ್ರಶಸ್ತಿ ಪ್ರದಾನ

D_shiva_bhat

ಈ ಸುದ್ದಿಯನ್ನು ಶೇರ್ ಮಾಡಿ

ನಾಡಪ್ರಭು ಕೆಂಪೇಗೌಡ ರಾಜ್ಯ ಪ್ರಶಸ್ತಿಗೆ ಎಸ್.ಆರ್.ಕೆ. ಲ್ಯಾಡರ್ಸ್ ಮಾಲಕ ಕೇಶವ ಅಮೈ ಅವರು ಆಯ್ಕೆಯಾಗಿದ್ದಾರೆ.

maithri

ನಾಡಪ್ರಭು ಕೆಂಪೇಗೌಡ ಪ್ರತಿಷ್ಠಾನವು ಜೂನ್ 27ರಂದು ಬೆಂಗಳೂರಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆಯುವ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಿದೆ.

ತಮ್ಮ ಅಂಗವೈಕಲ್ಯವನ್ನು ಮೆಟ್ಟಿನಿಂತು ಎಸ್.ಆರ್.ಕೆ. ಲ್ಯಾಡರ್ಸ್ ಸಂಸ್ಥೆಯನ್ನು ಕಟ್ಟಿ ಬೆಳೆಸಿರುವ ಕೇಶವ ಅಮೈ ಅವರು, ಕೃಷಿ ಯಂತ್ರೋಪಕರಣಗಳ ಹೊಸ ಆವಿಷ್ಕಾರಗಳ ಮೂಲಕ ಉದ್ಯಮದ ಜೊತೆಗೆ ಕೃಷಿ ಕ್ಷೇತ್ರಕ್ಕೆ ಹೊಸತನ ನೀಡುವಲ್ಲಿಯೂ ಹೆಸರು ಮಾಡಿದ್ದಾರೆ. ಈ ಕೃಷಿ ಯಂತ್ರೋಪಕರಣಗಳು ರೈತರಿಗೆ ಸಹಕಾರಿಯಾಗಿದ್ದು, ಸಂಶೋಧನಾತ್ಮಕ ಕೃಷಿ ಸಂಬಂಧಿತ ಯಂತ್ರೋಪಕರಣಗಳ ಮಹತ್ವದ ಕೊಡುಗೆಯನ್ನು ಗುರುತಿಸಿ ಈ ಪ್ರಶಸ್ತಿಗೆ ಅವರನ್ನು ಆಯ್ಕೆ ಮಾಡಲಾಗಿದೆ.

ನಾಡಪ್ರಭು ಕೆಂಪೇಗೌಡ ರಾಜ್ಯ ಪ್ರಶಸ್ತಿಗೆ ಆಯ್ಕೆಯಾದ ಕೇಶವ ಅಮೈ ಅವರನ್ನು ಪ್ರತಿಷ್ಠಾನದ ಪ್ರಮುಖರು ಭೇಟಿ ಮಾಡಿ ಅಭಿನಂದಿಸಿದರು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯತೀಶ್ ಆರ್ವಾರ, ಬೆಳ್ಳಾರೆ ಸಿಎ ಬ್ಯಾಂಕ್ ಅಧ್ಯಕ್ಷ ಆರ್.ಕೆ. ಭಟ್ ಕುರುಂಬುಡೇಲು, ಸುಳ್ಯ ಎಲ್ ಡಿ ಬ್ಯಾಂಕ್ ಉಪಾಧ್ಯಕ್ಷ ಅವಿನಾಶ್‌ ಕುರುಂಜಿ, ಬಿಜೆಪಿ ಬೆಳ್ಳಾರೆ ಶಕ್ತಿ ಕೇಂದ್ರದ ಅನೂಪ್ ಬಿಳಿಮಲೆ, ದಿನೇಶ್ ಪಂಜಿಗ, ಕೇಶವ ಅಮೈ ಅವರ ತಾಯಿ ರಾಮಕ್ಕ, ಪತ್ನಿ ಮಾಲತಿ, ಪುತ್ರ ಗಗನ್ ಉಪಸ್ಥಿತರಿದ್ದರು.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಆಟಮ್’ಬರ್ಗ್ ಫ್ಯಾನ್ ಮಾರಾಟದಲ್ಲಿ ದಾಖಲೆ: ಮೈತ್ರಿ ಎಲೆಕ್ಟ್ರಿಕ್ ಕಂಪೆನಿಗೆ ಗೋಲ್ಡ್ ಮೆಂಬರ್’ಶಿಪ್

ಪುತ್ತೂರು: ಆಟಮ್’ಬರ್ಗ್ ಫ್ಯಾನ್ ಗಳಲ್ಲಿ ಅತ್ಯಧಿಕ ಮಾರಾಟ ಮಾಡಿ ಸಾಧನೆ ಮಾಡಿದ ಪುತ್ತೂರಿನ…