ಟ್ರೆಂಡಿಂಗ್ ನ್ಯೂಸ್

ರೋಟರಿ ಕ್ಲಬ್ ಬಿರುಮಲೆ ಹಿಲ್ಸ್ ಅಧ್ಯಕ್ಷರಾಗಿ ಡಾ. ಗೋಪಾಲಕೃಷ್ಣ, ಕಾರ್ಯದರ್ಶಿಯಾಗಿ ಸಂತೋಷ್ ಕುಮಾರ್ ಪದ ಸ್ವೀಕಾರ | ಡಾ. ಸುರೇಶ್ ಪುತ್ತೂರಾಯರಿಗೆ ಸನ್ಮಾನ

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ರೋಟರಿ ಕ್ಲಬ್ ಬಿರುಮಲೆ ಹಿಲ್ಸ್ ಪುತ್ತೂರು ಇದರ 2026-27ನೇ ಸಾಲಿನ ನೂತನ ಪದಾಧಿಕಾರಿಗಳ ಪದಸ್ವೀಕಾರ ಸಮಾರಂಭ ಶನಿವಾರ ರೋಟರಿ ಮನೀಷಾ ಸಭಾಂಗಣದಲ್ಲಿ ಜರಗಿತು.

maithri

ಮುಖ್ಯ ಅತಿಥಿ ಅಡಿಷನಲ್ ಎಸ್ಪಿ ಬೂಮಾರೆಡ್ಡಿ ಅವರ ಉಪಸ್ಥಿತಿಯಲ್ಲಿ ಝೋನಲ್ ಲೆಫ್ಟಿನೆಂಟ್ ಝೇವಿಯರ್ ಡಿಸೋಜಾ ಪದಪ್ರದಾನ ನೆರವೇರಿಸಿದರು. ವಲಯ ಸೇನಾನಿ ಪಶುಪತಿ ಶರ್ಮಾ, ರವಿಕುಮಾರ್, ಕೃಷ್ಣಪ್ರಸಾದ್ ಆಳ್ವ, ನಿಕಟಪೂರ್ವ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಇಂದಿರಾ ಪಿ. ಆಳ್ವ ಶಾರದಾ ಕೃಷ್ಣ ಉಪಸ್ಥಿತರಿದ್ದರು.

ಇದೇ ಸಂದರ್ಭ ವೈದ್ಯ ಡಾ. ಸುರೇಶ್ ಪುತ್ತೂರಾಯ ಅವರನ್ನು ಸನ್ಮಾನಿಸಲಾಯಿತು.

ನೂತನ ಅಧ್ಯಕ್ಷರಾಗಿ ಡಾ| ಗೋಪಾಲಕೃಷ್ಣ ಎಂ, ಕಾರ್ಯದರ್ಶಿಯಾಗಿ ಸಂತೋಷ್ ಕುಮಾರ್, ಕೋಶಾಧಿಕಾರಿಯಾಗಿ ರುಕ್ಮಯ ಕುಲಾಲ್ ಪದಸ್ವೀಕಾರ ಮಾಡಿದರು. ಉಳಿದಂತೆ ನಿಕಟಪೂರ್ವ ಅಧ್ಯಕ್ಷರಾಗಿ ಸಾಜ ರಾಧಾಕೃಷ್ಣ ಆಳ್ವ, ಉಪಾಧ್ಯಕ್ಷರಾಗಿ ಜಯರಾಜ್ ರೈ, ವೊಕೇಶನಲ್ ಸರ್ವಿಸ್ ನಿರ್ದೇಶಕರಾಗಿ ದಾಮೋದರ್ ಪಾಟಾಳಿ, ಕಮ್ಯೂನಿಟಿ ಸರ್ವಿಸ್ ನಿರ್ದೇಶಕರಾಗಿ ಕೃಷ್ಣಪ್ರಸಾದ್ ಶೆಟ್ಟಿ, ಇಂಟರ್ನ್ಯಾಷನಲ್ ಸರ್ವಿಸ್ ನಿರ್ದೇಶಕರಾಗಿ ಪುರುಷೋತ್ತಮ ಪ್ರಭು, ಯೂತ್ ಸರ್ವಿಸ್ ನಿರ್ದೇಶಕರಾಗಿ ನಿತಿನ್ ಪಕ್ಕಳ, ಕ್ಲಬ್ ಎಕ್ಸಿಕ್ಯೂಟಿವ್ ಕಾರ್ಯದರ್ಶಿಯಾಗಿ ವಂದನಾ ಶರತ್, ಸಾರ್ಜಂಟ್ ಎಟ್ ಆಮ್ಸ್೯ ಅನಿಲ್ ಡಿ’ಸೋಜ,  ಕ್ಲಬ್ ಮೆಂಬರ್ ಶಿಪ್ ನಿರ್ದೇಶಕರಾಗಿ ಕೃಷ್ಣಪ್ರಸಾದ್ ಆಳ್ವ, ಕ್ಲಬ್ ಪ್ರಾಜೆಕ್ಟ್ ಚೇರ್ಮನ್  ನಿತೀಶ್ ಶಾಂತಿವನ, ಪಲ್ಸ್ ಪೋಲಿಯೋ ಚೇರ್ಮನ್ ಸಂದೀಪ್ ರೈ ಚಿಲ್ಮೆತ್ತಾರ್, ಟಿ ಆರ್ ಎಫ್ ಚೇರ್ಮನ್ ಅಭಿಷೇಕ್ ರೈ, ಕ್ಲಬ್ ಲರ್ನಿಂಗ್ ಫೆಸಿಲಿಟೆಟರ್ ಶರತ್ ಬಲ್ನಾಡು, ಕ್ಲಬ್ ಪಬ್ಲಿಕ್ ಇಮೇಜ್ ಚೇರ್ಮನ್ ಆಗಿ ಮೋಹನ ಕೆ. ಆಯ್ಕೆಯಾಗಿದ್ದಾರೆ.

ನೂತನ ಅಧ್ಯಕ್ಷರಾಗಿ ಡಾ| ಗೋಪಾಲಕೃಷ್ಣ ಎಂ.:

ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿರುವ ಡಾ। ಗೋಪಾಲಕೃಷ್ಣ ಎಂ.ರವರು ಚಿಕ್ಕಮುಡ್ನೂರು ಗ್ರಾಮದ ಮೂಡಾಯೂರು ಮಹಾಲಿಂಗ ಪಾಟಾಳಿ ಹಾಗೂ ಯಮುನಾ ದಂಪತಿ ಪುತ್ರ. ಆರಂಭದಲ್ಲಿ ವಿವಿಧ ಸಣ್ಣ ಸಣ್ಣ ಉದ್ಯೋಗದಲ್ಲಿ ತೊಡಗಿಸಿಕೊಂಡು ಬಳಿಕ ಮಾಣಿಯಲ್ಲಿ ಚೈತನ್ಯ ಟ್ಯುಟೋರಿಯಲ್ಸ್, ಬೊಳುವಾರಿನಲ್ಲಿ ಈಶ ಟ್ಯುಟೋರಿಯಲ್ಸ್, ವಿಟ್ಲದಲ್ಲಿ ಟ್ಯುಟೋರಿಯಲ್ಸ್ ಹೀಗೆ ಐದು ಕಡೆ ವಿದ್ಯಾಸಂಸ್ಥೆಗಳನ್ನು ಪ್ರಾರಂಭಿಸಿ ಪ್ರಸ್ತುತ ಪುತ್ತೂರು ನೆಲ್ಲಿಕಟ್ಟೆಯಲ್ಲಿ ಸ್ವಂತ ಕಟ್ಟಡದಲ್ಲಿ ಎಸೆಸ್ಸೆಲ್ಸಿ. ಪಿಯುಸಿ, ನರ್ಸರಿ ಟೀಚರ್ಸ್ ತರಬೇತಿ, ಕಂಪ್ಯೂಟರ್, ಟೈಲರಿಂಗ್ ಇತ್ಯಾದಿ ಕೋರ್ಸ್’ಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಹಲವು ಸಂಘಟನೆಗಳಲ್ಲಿ ಇವರು ಸಕ್ರೀಯರು.

ನೂತನ ಕಾರ್ಯದರ್ಶಿಯಾಗಿ ಸಂತೋಷ್ ಕುಮಾರ್ ರೈ:

ಸಂತೋಷ್ ಕುಮಾರ್ ರೈ ಅವರು ಕಾಸರಗೋಡು ಜಿಲ್ಲೆಯ ಕುಂಬ್ಡಾಜೆ ಪಂಚಾಯತ್ ನ ಸುಂದರ ರೈ ಗಾಡಿಗುಡ್ಡೆ ಹಾಗೂ ಬೇಬಿ ರೈರವರ ಪುತ್ರನಾಗಿ ಜನಿಸಿದ್ದು ಅರ್ಥಶಾಸ್ತ್ರದಲ್ಲಿ ಪದವೀಧರ. ಸಂತೋಷ್ ಕುಮಾರ್ ರೈ ಅವರು ಕುಂಬ್ಡಾಜೆ ಪಂಚಾಯತ್ ಬಂಟರ ಸಂಘದ ಅಧ್ಯಕ್ಷರಾಗಿ, ಶ್ರೀ ಗಣೇಶೋತ್ಸವ ಸಮಿತಿಯ ಸ್ಥಾಪಕರಾಗಿ, ಅಧ್ಯಕ್ಷರಾಗಿ, ಕರ್ನಾಟಕ ಜಾನಪದ ಪರಿಷತ್ ಪುತ್ತೂರು ತಾಲೂಕು ಘಟಕದ ಅಧ್ಯಕ್ಷರಾಗಿ, ವಿವೇಕಾನಂದ ಶಿಶುಮಂದಿರದ ಶ್ರೀಕೃಷ್ಣ ಜನ್ಮಾಷ್ಟಮಿಯ ಅಧ್ಯಕ್ಷ ಹಾಗೂ ಕಾರ್ಯದರ್ಶಿಯಾಗಿ ಅನುಭವ ಹೊಂದಿದ್ದಾರೆ. ಆರು ವರ್ಷ ಕಾಸರಗೋಡು ಜಿಲ್ಲೆಯಲ್ಲಿ ಯಕ್ಷಗಾನ ಕಲಾ ಸೇವೆ ನೀಡಿರುತ್ತಾರೆ. ಇವರ ಪ್ರಾಯೋಜಕತ್ವದಲ್ಲಿ ಕಾಸರಗೋಡು ಕುಂಬ್ಡಾಜೆ ಪಂಚಾಯತ್ ನಲ್ಲಿನ ಓರ್ವ ಬಡ ಕುಟುಂಬಕ್ಕೆ ಸೂರು ನಿರ್ಮಾಣ ಮಾಡುತ್ತಿದ್ದು ಪ್ರಸ್ತುತ ಇವರು ಪ್ರಗತಿ ಕಾಲೇಜು ಆಫ್ ನರ್ಸಿಂಗ್ ಸೈನ್ಸ್ ನಲ್ಲಿ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts