ಟ್ರೆಂಡಿಂಗ್ ನ್ಯೂಸ್

ಮಾದಕ ಮುಕ್ತ ಕರ್ನಾಟಕ ನಿರ್ಮಾಣ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ: ಅನಿಲ್ ಭೂಮಾರೆಡ್ಡಿ | ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್, ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ರೋಟರಿ ಕ್ಲಬ್ ಪುತ್ತೂರು ಯುವದ ಆಶ್ರಯದಲ್ಲಿ ಪ್ರಬಂಧ ಸ್ಪರ್ಧಾ ವಿಜೇತರಿಗೆ ಬಹುಮಾನ

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಮಾದಕ ಮುಕ್ತ ಕರ್ನಾಟಕ ನಿರ್ಮಾಣವು ಕೇವಲ ಸರ್ಕಾರ ಅಥವಾ ಪೊಲೀಸ್ ಇಲಾಖೆಯ ಜವಾಬ್ದಾರಿಯಲ್ಲ; ಇದು ಪ್ರತಿಯೊಬ್ಬ ನಾಗರಿಕನ ರಾಷ್ಟ್ರೀಯ ಹೊಣೆಗಾರಿಕೆಯಾಗಿದೆ. ಸಮಾಜದ ಎಲ್ಲ ವರ್ಗದವರು ಕೈಜೋಡಿಸಿದಾಗ ಮಾತ್ರ 2028ರ ವೇಳೆಗೆ ಡ್ರಗ್ ಫ್ರೀ ಕರ್ನಾಟಕದ ಗುರಿಯನ್ನು ಸಾಧಿಸಲು ಸಾಧ್ಯ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಅನಿಲ್ ಭೂಮಾರೆಡ್ಡಿ ಹೇಳಿದರು.

maithri

ಅವರು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ (ಪುತ್ತೂರು ಉಪ ವಿಭಾಗ), ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ರೋಟರಿ ಕ್ಲಬ್ ಪುತ್ತೂರು ಯುವ ಇವರ ಸಂಯುಕ್ತ ಆಶ್ರಯದಲ್ಲಿ ನೆಹರುನಗರದ ಸುಧಾನ ವಿದ್ಯಾಸಂಸ್ಥೆಗಳ ಎಡ್ವರ್ಡ್ ಸಭಾಂಗಣದಲ್ಲಿ “ಮಾದಕ ದ್ರವ್ಯಗಳ ದುರುಪಯೋಗ ಮತ್ತು ಅಕ್ರಮ ಸಾಗಣೆ ವಿರುದ್ಧದ ಅಂತರರಾಷ್ಟ್ರೀಯ ದಿನ–2026” ಅಂಗವಾಗಿ ಆಯೋಜಿಸಲಾದ ಪ್ರಬಂಧ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕರ್ನಾಟಕ ಸರ್ಕಾರವು 2028ರ ಅಂತ್ಯದೊಳಗೆ ರಾಜ್ಯವನ್ನು ಮಾದಕ ಮುಕ್ತ ಕರ್ನಾಟಕವನ್ನಾಗಿ ರೂಪಿಸುವ ಗುರಿ ಹೊಂದಿದ್ದು, ಅದರ ಅಂಗವಾಗಿ ಕರ್ನಾಟಕ ಪೊಲೀಸ್ ಇಲಾಖೆ “ಬೇಡ ಬ್ರೋ” ಹಾಗೂ “RISE” ಅಭಿಯಾನಗಳನ್ನು ಆರಂಭಿಸಿದೆ. ಮಾದಕ ದ್ರವ್ಯಗಳ ವಿರುದ್ಧದ ಹೋರಾಟದಲ್ಲಿ ಸಾರ್ವಜನಿಕರು ಡ್ರಗ್ ಫ್ರೀ ಕರ್ನಾಟಕ ಆ್ಯಪ್, 112 ಸಹಾಯವಾಣಿ ಹಾಗೂ ಇತರೆ ಅಧಿಕೃತ ವ್ಯವಸ್ಥೆಗಳ ಮೂಲಕ ಮಾಹಿತಿ ನೀಡಬೇಕು. ಮಾಹಿತಿ ನೀಡುವವರ ವಿವರವನ್ನು ಸಂಪೂರ್ಣ ಗೌಪ್ಯವಾಗಿಡಲಾಗುವುದು ಎಂದು ಅವರು ತಿಳಿಸಿದರು.

ಕಾರ್ಯಕ್ರಮವನ್ನು ಪೊಲೀಸ್ ಉಪಾಧೀಕ್ಷಕ ಪ್ರಮೋದ್ ಕುಮಾರ್ ಬಿ. ಉದ್ಘಾಟಿಸಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಅವರು, ಮಾದಕ ದ್ರವ್ಯ ವಿರೋಧಿ ಜನಜಾಗೃತಿ ಅಭಿಯಾನವನ್ನು ವಿವಿಧ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಯಶಸ್ವಿಯಾಗಿ ನಡೆಸಲಾಗಿದ್ದು, ಪ್ರಬಂಧ ಸ್ಪರ್ಧೆಯ ಮೂಲಕ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವಲ್ಲಿ ಉತ್ತಮ ಸ್ಪಂದನೆ ದೊರೆತಿದೆ ಎಂದು ತಿಳಿಸಿ ವಿಜೇತರಿಗೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಕೆಂಪೇಗೌಡ ಪ್ರಶಸ್ತಿ ಪುರಸ್ಕೃತರು ಹಾಗೂ ಎಸ್.ಆರ್.ಕೆ. ಲ್ಯಾಡರ್ಸ್‌ನ ಮಾಲಕರಾದ ಕೇಶವ ಅಮೈ ಅವರನ್ನು ಗೌರವಿಸಲಾಯಿತು. ಅವರ ಅಭಿನಂದನಾ ಪತ್ರವನ್ನು ರೋಟರಿ ಕ್ಲಬ್ ಪುತ್ತೂರು ಯುವದ ಅಧ್ಯಕ್ಷೆ ವಚನ ಜಯರಾಮ್ ವಾಚಿಸಿದರು.

“ಮಾದಕತೆ ಮಾರಣಾಂತಿಕ” ವಿಷಯದ ಕುರಿತು ಪ್ರೇರಣಾ ಭಾಷಣಕಾರ ಹಾಗೂ ಸಾಹಿತಿ ಕೆ. ಎಂ. ಇಕ್ಬಾಲ್, ಬಾಳಿಲ ಅವರು ವಿಶೇಷ ಉಪನ್ಯಾಸ ನೀಡಿ, ಮಾದಕ ದ್ರವ್ಯಗಳ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಿದರು. ಇದೇ ಸಂದರ್ಭದಲ್ಲಿ ಅವರು ತಮ್ಮ “ಮಾದಕತೆ ಮಾರಣಾಂತಿಕ” ಕೃತಿಯ 50 ಪ್ರತಿಗಳನ್ನು ವಿಜೇತರಿಗೆ ಉಚಿತವಾಗಿ ಕೊಡುಗೆಯಾಗಿ ನೀಡಿದರು. ಅವರ ಈ ಸಮಾಜಮುಖಿ ಕೊಡುಗೆಯನ್ನು ಗುರುತಿಸಿ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ “ಪುಸ್ತಕ ಮಹಾದಾನಿ” ಗೌರವ ಪತ್ರ ನೀಡಿ ಸನ್ಮಾನಿಸಲಾಯಿತು.

ಮಾದಕ ದ್ರವ್ಯ ವಿರೋಧಿ ಜನಜಾಗೃತಿ ಅಭಿಯಾನದ ಅಂಗವಾಗಿ ಆಯೋಜಿಸಲಾಗಿದ್ದ ಮ್ಯಾರಥಾನ್ ಅನ್ನು ಅತ್ಯಂತ ಯಶಸ್ವಿಯಾಗಿ ಸಂಘಟಿಸಿದ ರೋಟರಿ ಕ್ಲಬ್ ಪುತ್ತೂರು ಯುವದ ಸದಸ್ಯ ಅನಿಲ್ ಮುಂಡೋಡಿ ಅವರನ್ನು ಅಭಿನಂದಿಸಲಾಯಿತು. ಇದೇ ಸಂದರ್ಭದಲ್ಲಿ ಬೀದಿ ನಾಟಕಗಳ ಮೂಲಕ ಮಾದಕ ದ್ರವ್ಯಗಳ ದುಷ್ಪರಿಣಾಮಗಳ ಕುರಿತು ಪರಿಣಾಮಕಾರಿ ಜನಜಾಗೃತಿ ಮೂಡಿಸಿದ ಕಲಾವಿದರಾದ ಮೌನೇಶ್ ವಿಶ್ವಕರ್ಮ ಹಾಗೂ ಬಾಲು ನಾಯ್ಕ್ ಅವರನ್ನು ಗೌರವಿಸಿ ಅಭಿನಂದಿಸಲಾಯಿತು.

ಸಾರ್ವಜನಿಕ ಹಾಗೂ ವಿದ್ಯಾರ್ಥಿ ವಿಭಾಗಗಳನ್ನು ಸೇರಿಸಿ 200ಕ್ಕೂ ಅಧಿಕ ಸ್ಪರ್ಧಿಗಳು ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ತಜ್ಞರ ಮೌಲ್ಯಮಾಪನದ ಆಧಾರದ ಮೇಲೆ ಆಯ್ಕೆಯಾದ 50 ಮಂದಿ ವಿಜೇತರಿಗೆ ಪುಸ್ತಕ ಬಹುಮಾನ, ಕನ್ನಡ ಶಾಲು ಹಾಗೂ ಪ್ರಶಂಸಾ ಪತ್ರಗಳನ್ನು ಪ್ರಧಾನ ಮಾಡಲಾಯಿತು.

ವಿದ್ಯಾರ್ಥಿ ವಿಭಾಗದ ವಿಜೇತರ ವಿವರವನ್ನು ವಿದ್ಯಾರ್ಥಿ ವಿಭಾಗದ ತೀರ್ಪುಗಾರರಾದ ಶಂಕರಿ ಶರ್ಮ ವಾಚಿಸಿದರೆ, ಸಾರ್ವಜನಿಕ ವಿಭಾಗದ ವಿಜೇತರ ವಿವರವನ್ನು ಗಡಿನಾಡ ಶ್ರೇಯೋಭಿವೃದ್ಧಿ ಟ್ರಸ್ಟ್‌ನ ಅಧ್ಯಕ್ಷ ಹಾಗೂ ತೀರ್ಪುಗಾರರಾದ ಡಾ. ಅಬೂಬಕ್ಕರ್ ಅರ್ಲಪದವು ವಾಚಿಸಿದರು.

ಕಾರ್ಯಕ್ರಮದ ನಿರೂಪಣೆಯನ್ನು ಪ್ರಬಂಧ ಸ್ಪರ್ಧೆಯ ಸಂಯೋಜಕರೂ, ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರೂ ಆದ ಪುತ್ತೂರು ಉಮೇಶ್ ನಾಯಕ್ ನಿರ್ವಹಿಸಿದರು.

ವೇದಿಕೆಯಲ್ಲಿ ರೋಟರಿ ಕ್ಲಬ್ ಪುತ್ತೂರು ಎಲೈಟ್‌ನ ಅಧ್ಯಕ್ಷ ಮೊಹಮ್ಮದ್ ಶಾಕಿರ್, ಕಾರ್ಯದರ್ಶಿ ಸುಶಾಂತ್ ಹಾರ್ವಿನ್, ರೋಟರಿ ಜಿಲ್ಲೆ 3181ರ ಮಾಜಿ ಸಹಾಯಕ ಗವರ್ನರ್ ಆಸ್ಕರ್ ಆನಂದ್, ರೋಟರಿ ಕ್ಲಬ್ ಪುತ್ತೂರು ಯುವದ ನಿಕಟಪೂರ್ವ ಅಧ್ಯಕ್ಷ ಕುಸುಮರಾಜ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಆರಂಭದಲ್ಲಿ ಅಶ್ವಿನಿ ರಾಘವೇಂದ್ರ ಶೆಣೈ ಅವರ ನೇತೃತ್ವದಲ್ಲಿ ಅಂಬಿಕಾ ವಿದ್ಯಾಲಯದ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು. ಸುಬ್ರಹ್ಮಣ್ಯ ಶರ್ಮ ಪ್ರಾರ್ಥನಾ ಗೀತೆ ಹಾಡಿದರು.

ತಾರಾನಾಥ ಸವಣೂರು, ಡಾ. ಹರಿಪ್ರಸಾದ್, ಆದಿತ್ಯ ಬಂಡಾರ್ಕರ್ ಅವರು ಅತಿಥಿಗಳನ್ನು ಸ್ವಾಗತ ಸ್ವಾಗತಿಸಿದರು. ಗೀತಾ ಕೊಂಕೋಡಿ, ನಾರಾಯಣ ಕುಂಬ್ರ, ಶ್ರೀಕಲಾ ಕಾರಂತ್ ಹಾಗೂ ಶೈಲಜಾ ಕೇಕಣಾಜೆ ಕಾರ್ಯಕ್ರಮದ ವಿವಿಧ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸಿದರು.

ರೋಟರಿ ಕ್ಲಬ್ ಪುತ್ತೂರು ಯುವದ ಕಾರ್ಯದರ್ಶಿ ಅನುಪ್ ಕೆ. ಜೆ. ವಂದಿಸಿದರು.

ಕಾರ್ಯಕ್ರಮದಲ್ಲಿ ಪೊಲೀಸ್ ಅಧಿಕಾರಿಗಳು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಶಿಕ್ಷಕರು, ವಿದ್ಯಾರ್ಥಿಗಳು, ಸಾರ್ವಜನಿಕರು ಹಾಗೂ ರೋಟರಿ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಮಾದಕ ಮುಕ್ತ ಸಮಾಜ ನಿರ್ಮಾಣದ ಸಂಕಲ್ಪಕ್ಕೆ ಬೆಂಬಲ ವ್ಯಕ್ತಪಡಿಸಿದರು.

ವಿಜೇತರ ವಿವರ

ಸಾರ್ವಜನಿಕ ವಿಭಾಗದಲ್ಲಿ ಪ್ರಥಮ ಬಹುಮಾನಕ್ಕೆ  ತಾರಾನಾಥ್ (ಸವಣೂರು), ಗೀತಾ ಕೊಂಕೋಡಿ, ರಹ್ಮತ್ (ಬೊಳವಾರು, ಪುತ್ತೂರು) ಹಾಗೂ ತ್ವಯ್ಯಿಬ್ ಮಾಹ್‌ಲರಿ (ಕುಂಬ್ರ) ಆಯ್ಕೆಯಾಗಿದ್ದಾರೆ.

ದ್ವಿತೀಯ ಬಹುಮಾನಕ್ಕೆ ಡಾ. ಮೈತ್ರಿ ಭಟ್ (ವಿಟ್ಲ), ಶ್ರೀಕಲಾ ಬಿ. ಕಾರಂತ್ (ಅಳಿಕೆ), ಅಕ್ಷತಾ ಸತೀಶ್ (ಪುತ್ತೂರು) ಹಾಗೂ ವನಿತಾ ಕೆ. (ಈಶ್ವರಮಂಗಲ) ಆಯ್ಕೆಯಾಗಿದ್ದಾರೆ.

ತೃತೀಯ ಬಹುಮಾನಕ್ಕೆ ಶೈಲಜಾ ಕೇಕಣಾಜೆ, ಶರ್ಮಿಳಾ ನಾಗೇಶ್, ಜಯಶ್ವಿನಿ ದೇರಾಜೆ (ಈಶ್ವರಮಂಗಲ) ಹಾಗೂ ಡಾ. ಹರಿಪ್ರಸಾದ್ (ಉಪ್ಪಿನಂಗಡಿ) ಆಯ್ಕೆಯಾಗಿದ್ದಾರೆ.

ಪ್ರೋತ್ಸಾಹಕ ಬಹುಮಾನಕ್ಕೆ ಕೆ. ದಿನೇಶ್ ರಾವ್ ಕಂಪ, ಸರಳಾ ಬಿ. ದೊಡ್ಡಡ್ಕ, ಅಬ್ದುಲ್ ಶಂಮಸ್ ಪಟ್ರ್‌ಕೋಡಿ, ಜಯಶ್ರೀ ಎಸ್. ಚಾಕೋಟೆ, ಸಂತ್ಯಾ ರಂಶೀದಾ, ಅಶ್ವಿನಿ ರಾಘವೇಂದ್ರ ಶೆಣೈ, ಅಶೋಕ್ ಬಿ.ಕೆ., ನಾರಾಯಣ ಕುಂಬ್ರ, ಪ್ರಗತಿ ಭಂಡಾರಿ (ಎಡಮೊಗರು), ದಿವ್ಯ ರೈ ಪಿ. (ಪೆರುವಾಜೆ), ಕಾವ್ಯಶ್ರೀ ಎಸ್. (ಸಾಮೆತಡ್ಕ), ಝುಲೈಖಾ ಮುಮ್ತಾಜ್ (ಮಂಗಳೂರು), ಝುನೈಫ್ ಕೊಳ್ಪೆ (ನೆಲ್ಯಾಡಿ), ಲೀನಾ ಮೆಂಡೊನ್ಸಾ (ಕೊಡಿಜಾಲು), ಗುರುಪ್ರಸಾದ್ ಭಟ್ (ಕಿನ್ನಿಮೂಲ್ಕಿ), ಬಾಲಕೃಷ್ಣ ಪಾಟಲಿ (ರೆಂಜ) ಹಾಗೂ ನಯನ ರತ್ನಕುಮಾರ್ (ಚಾರ್ವಕ) ಆಯ್ಕೆಯಾಗಿದ್ದಾರೆ.

ವಿದ್ಯಾರ್ಥಿ ವಿಭಾಗದಲ್ಲಿ ಪ್ರಥಮ ಬಹುಮಾನಕ್ಕೆ ಅನರ್ಘ್ಯ ಶ್ರೀ (ಅಂಬಿಕಾ ವಿದ್ಯಾಲಯ, ಪುತ್ತೂರು), ಮನಸ್ವಿ ಆರ್. ಕೆ. (ಜೆಸೀಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆ, ವಿಟ್ಲ) ಹಾಗೂ ಶ್ರೀವಿದ್ಯಾ ಎನ್. (ಸೈಂಟ್ ಫಿಲೋಮಿನಾ ಕಾಲೇಜು, ಪುತ್ತೂರು) ಆಯ್ಕೆಯಾಗಿದ್ದಾರೆ.

ದ್ವಿತೀಯ ಬಹುಮಾನಕ್ಕೆ ಮಹಿಮಾ ಆರ್. ಕೆ. (ಅಂಬಿಕಾ ಪದವಿ ಪೂರ್ವ ವಿದ್ಯಾಲಯ, ಪುತ್ತೂರು), ಬೃಂದಾ ಆರ್. ಕೆ. (ರಾಮಕೃಷ್ಣ ಪ್ರೌಢಶಾಲೆ, ಕೊಂಬೆಟ್ಟು), ದೈವಿಕ್ ಶೆಟ್ಟಿ (ಅಂಬಿಕಾ ವಿದ್ಯಾಲಯ, ಪುತ್ತೂರು) ಹಾಗೂ ಶಿಲ್ಪಾ ಎಸ್. ನಾಯಕ್ (ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ, ತೆಂಕಿಲ) ಆಯ್ಕೆಯಾಗಿದ್ದಾರೆ.

ತೃತೀಯ ಬಹುಮಾನಕ್ಕೆ ನಿಖಿತ (ಸರ್ಕಾರಿ ಪ್ರೌಢಶಾಲೆ, ಮಣಿಕರ), ಮಾನ್ವಿ ಶೆಟ್ಟಿ (ರಾಮಕೃಷ್ಣ ಪ್ರೌಢಶಾಲೆ, ಪುತ್ತೂರು) ಹಾಗೂ ಆಪ್ತಿ ಎಸ್. ರೈ (ಪ್ರಿಯದರ್ಶಿನಿ ಪ್ರೌಢಶಾಲೆ, ಬೆಟ್ಟಂಪಾಡಿ) ಆಯ್ಕೆಯಾಗಿದ್ದಾರೆ.

ಪ್ರೋತ್ಸಾಹಕ ಬಹುಮಾನಕ್ಕೆ ದಿಶಾ, ದೀಪ್ತಿ ಕೆ. ಸಿ., ಆರ್ಯ ಮೋಹನ್ ಎಚ್., ಪೂರ್ವಿ ವಿ., ದೀಕ್ಷಾ ಕೆ. ಸಿ., ಸಿಂಸಾರುಲ್ ಹಕ್, ನೇಷಾಶ್ರೀ ಎಸ್. ಕೆ., ಮುಹಮ್ಮದ್ ಇಂದಾದ್, ಅನಸ್, ಶಮಿಲ್ ಹಾಗೂ ಕೆ. ಆದಿತ್ಯ ಬಂಡಾರ್ಕರ್ ಆಯ್ಕೆಯಾಗಿದ್ದಾರೆ.

ಈ ಎಲ್ಲಾ 50 ಮಂದಿ ವಿಜೇತರಿಗೆ ಬಹುಮಾನ ವಿತರಣಾ ಸಮಾರಂಭದಲ್ಲಿ ಪುಸ್ತಕ ಬಹುಮಾನ, ಕನ್ನಡ ಶಾಲು ಹಾಗೂ ಪ್ರಶಂಸಾ ಪತ್ರ ನೀಡಿ ಗೌರವಿಸಲಾಯಿತು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಮೈತ್ರಿ ಎಲೆಕ್ಟ್ರಿಕ್ ಕಂಪನಿಯಲ್ಲಿ ಲಿಷಾ ಉತ್ಪನ್ನಗಳ ಪ್ರಾತ್ಯಕ್ಷಿಕೆ, ಮಾಹಿತಿ ಕಾರ್ಯಾಗಾರ

ಪುತ್ತೂರು: ಲಿಷಾ ಕಂಪನಿಯ ಉತ್ಪನ್ನಗಳ ಪ್ರಾತ್ಯಕ್ಷಿಕೆ ಹಾಗೂ ಮಾಹಿತಿ ಕಾರ್ಯಗಾರ ಜುಲೈ 9ರಂದು…

ನಾಡಪ್ರಭು ಕೆಂಪೇಗೌಡ ರಾಜ್ಯ ಪ್ರಶಸ್ತಿ ಪುರಸ್ಕೃತ ಕೇಶವ ಅಮೈ ಅವರಿಗೆ ದರ್ಬೆಯಲ್ಲಿ ಸ್ವಾಗತ, ಮೆರವಣಿಗೆ

ಫುತ್ತೂರು: ಬೆಂಗಳೂರಿನಲ್ಲಿ ನಾಡಪ್ರಭು ಕೆಂಪೇಗೌಡ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಎಸ್.ಆರ್.ಕೆ.…