ಪುತ್ತೂರು: ಒಕ್ಕಲಿಗ ಗೌಡ ಸೇವಾ ಸಂಘ ಹಾಗೂ ಮಂಗಳೂರು ಕೆ.ಎಂ.ಸಿ. ಆಸ್ಪತ್ರೆಯ ಸಹಯೋಗದಲ್ಲಿ ಪ್ರಥಮ ಚಿಕಿತ್ಸೆ ತರಬೇತಿ ಕಾರ್ಯಕ್ರಮ ಶನಿವಾರ ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದ ಚುಂಚಶ್ರೀ ಸಭಾಂಗಣದಲ್ಲಿ ಜರಗಿತು.
ಕಾರ್ಯಕ್ರಮ ಉದ್ಘಾಟಿಸಿದ ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ, ಮಹಾಮಾರಿ ಕೊರೋನಾ ಬಂತು. ಅದಕ್ಕೆ ಮುನ್ನೆಚ್ವರಿಕೆಯೊಂದೇ ಪರಿಹಾರ. ಕೆಲ ದೇಶಗಳಲ್ಲಿ ದೀರ್ಘಾಯುಷಿಗಳನ್ನು ಕಾಣಬಹುದು. ಇದಕ್ಕೆ ಅಲ್ಲಿನ ಸರಕಾರ ಏನೆಲ್ಲಾ ಆರೋಗ್ಯದ ಕ್ರಮಗಳನ್ನು ಕೈಗೊಂಡಿದೆ ಎನ್ನುವುದನ್ನು ತಿಳಿದುಕೊಳ್ಳಬೇಕು. ನಮ್ಮಲ್ಲಿ ಯೋಗ ದಿನ ಆಚರಣೆಯ ಹಿಂದಿನ ಉದ್ದೇಶವೂ ಇದೆ. ಯೋಗದಿಂದ ರೋಗ ದೂರ ಮಾಡುವ ಪ್ರಯತ್ನದಲ್ಲಿ ನಾವಿದ್ದೇವೆ ಎಂದರು.
ನನಗೂ ಹಾವು ಕಚ್ಚಿತ್ತು:
ಸಂಜೀವ ಮಠಂದೂರಿಗೆ ಒಂದು ಸಲ ಹಾವು ಕಚ್ವಿತ್ತು. ಪಕ್ಕದಲ್ಲಿ ವೈದ್ಯರಿಲ್ಲ. ಆದರೆ ನಾನು ಬದುಕಬೇಕಿತ್ತು. ಈ ಸಂದರ್ಭ ನಾನೇನು ಮಾಡಬೇಕು ಎನ್ನುವುದು ನಮಗೆ ತಿಳಿದಿರಬೇಕು. ನಮ್ಮ ಎದುರೇ ಒಂದು ಅಪಘಾತ ನಡೆಯುತ್ತದೆ. ಮಗುವೊಂದು ನೀರಿಗೆ ಬಿತ್ತು. ಇಂತಹ ಸಂದರ್ಭ ನಾವೇನು ಮಾಡಬೇಕು ಎನ್ನುವುದನ್ನು ತಿಳಿದುಕೊಳ್ಳಬೇಕು. ನಾವು ಮಾನಸಿಕವಾಗಿ ಸಿದ್ಧರಾಗಿದ್ದರೆ ತಕ್ಷಣದಲ್ಲಿ ಜಾಗೃತರಾಗಬಹುದು. ಬದಲಾವಣೆಯ ಕಾಲಘಟ್ಟದಲ್ಲಿ ನಾವು ಜಾಗೃತರಾಗಬೇಕು. ಇಡೀಯ ಮಾನವ ಕುಲವನ್ನು ರಕ್ಷಣೆ ಮಾಡುವ ಕೆಲಸವನ್ನು ಒಕ್ಕಲಿಗ ಗೌಡ ಸಮಾಜ ಮಾಡಲಿ ಎಂದು ಹಾರೈಸಿದರು.
ಸ್ವಸ್ಥ ಸಮಾಜ ನಿರ್ಮಾಣವಾಗಲಿ: ಚಿದಾನಂದ ಬೈಲಾಡಿ
ಚಿದಾನಂದ ಬೈಲಾಡಿ ಮಾತನಾಡಿ, ಆರೋಗ್ಯ ಕಾಪಾಡುವುದು ಹೇಗೆ ಎಂಬ ಮಾಹಿತಿಯ ಕೊರತೆ ಇದೆ. ಮಕ್ಕಳು ಖಿನ್ನತೆಗೆ ಒಳಗಾಗುತ್ತಿದ್ದಾರೆ. ಇದರಿಂದ ಮಕ್ಕಳನ್ನು ಹೊರಗೆ ತರುವುದು ಹೇಗೆ ಎನ್ನುವುದು ಪೋಷಕರಿಗೆ ತಿಳಿದಿಲ್ಲ. ಹೃದಯಾಘಾತ ಹೆಚ್ಚಾಗ್ತಾ ಇದೆ. ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಎಂಬಂತೆ ಯತೀಶ್ ದೇವ ಅವರ ನೇತೃತ್ವದಲ್ಲಿ ಈ ಶಿಬಿರವನ್ನು ಆಯೋಜಿಸಲಾಗಿದೆ. ಸ್ವಸ್ಥ ಸಮಾಜ ನಿರ್ಮಾಣವಾಗಲಿ ಎಂದರು.
ಸಂಘದ ಅಧ್ಯಕ್ಷ ಸುಂದರ ಗೌಡ ಅಧ್ಯಕ್ಷತೆ ವಹಿಸಿದ್ದರು. ಮಹಿಳಾ ಸಂಘದ ಅಧ್ಯಕ್ಷೆ ಸಂಧ್ಯಾ ಶಶಿಧರ್ ದರ್ಬೆ, ಯುವ ಸಂಘದ ಅಧ್ಯಕ್ಷ ಪ್ರಶಾಂತ್ ಕೆಮ್ಮಾಯಿ, ಡಾ. ವೈಷ್ಣವ್ ನಾಯರ್, ಕೆಎಂಸಿಯ ಸಂಪರ್ಕಾಧಿಕಾರಿ ಮನಮೋಹನ್ ದೇವ, ಕೆಎಂಸಿಯ ದಿತೀಶ್ ಮೊದಲಾದವರು ಉಪಸ್ಥಿತರಿದ್ದರು.
ನಾಗಪ್ಪ ಗೌಡ ಬೊಮ್ಮೆಟ್ಟಿ, ರವಿ ಮುಂಗ್ಲಿಮನೆ, ಲಿಂಗಪ್ಪ ಗೌಡ ತೆಂಕಿಲ, ಡಿ.ವಿ. ಮನೋಹರ್, ಅಮರನಾಥ್ ಗೌಡ ಬಪ್ಪಳಿಗೆ, ಗೌರಿ ಬನ್ನೂರು, ಸುರೇಶ್ ಗೌಡ ಕಲ್ಲಾರೆ, ಪ್ರೇಮಾನಂದ್ ಬನ್ನೂರು, ಆನಂದ ಗೌಡ ಮುವಪ್ಪು ಅತಿಥಿಗಳನ್ನು ಗೌರವಿಸಿದರು.
ಸುಮಲತಾ ಪ್ರಾರ್ಥಿಸಿದರು. ಕಾರ್ಯಕ್ರಮ ಸಂಘಟಕರಾದ ಪುರುಷೋತ್ತಮ್ ಮುಂಗ್ಲಿಮನೆ ಹಾಗೂ ಯತೀಶ್ ದೇವ ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಶ್ರೀಧರ್ ಗೌಡ ಪಾಣೆತ್ತಿಲ ವಂದಿಸಿದರು.






















