ಟ್ರೆಂಡಿಂಗ್ ನ್ಯೂಸ್

ರೋಟರಿ ಕ್ಲಬ್ ಪುತ್ತೂರು ಸ್ವರ್ಣ ಪದಾಧಿಕಾರಿಗಳ ಪದಸ್ವೀಕಾರ ಸಮಾರಂಭ | ಅಧ್ಯಕ್ಷೆಯಾಗಿ ಆಶಾ ರೆಬೆಲ್ಲೋ, ಕಾರ್ಯದರ್ಶಿಯಾಗಿ ಸಂಧ್ಯಾ ಬೈಲಾಡಿ ಪದಸ್ವೀಕಾರ

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ರೋಟರಿ ಕ್ಲಬ್ ಪುತ್ತೂರು ಸ್ವರ್ಣ ಇದರ 2026-27ನೇ ಸಾಲಿನ ನೂತನ ಅಧ್ಯಕ್ಷೆಯಾಗಿ ಆಶಾ ರೆಬೆಲ್ಲೋ, ಕಾರ್ಯದರ್ಶಿಯಾಗಿ ಸಂಧ್ಯಾ ಬೈಲಾಡಿ ಅಧಿಕಾರ ಸ್ವೀಕರಿಸಿದರು.

maithri

ಗುರುವಾರ ಸಂಜೆ ಮನೀಷಾ ಸಭಾಂಗಣದಲ್ಲಿ ಪದಸ್ವೀಕಾರ ಸಮಾರಂಭ ನಡೆಯಿತು.

ಡೈಜಿ ವರ್ಲ್ಡ್ ಸಂಸ್ಥೆಯ ವಾಲ್ಟರ್ ನಂದಳಿಕೆ, ಜಿ.ಎಸ್.ಆರ್. ಚಿದಾನಂದ ಬೈಲಾಡಿ, ಪುತ್ತೂರು ರೋಟರಿ ಕ್ಲಬ್ ಅಧ್ಯಕ್ಷ ದತ್ತಾತ್ರೇಯ ರಾವ್, ರೋಟರಿ ಅಸಿಸ್ಟೆಂಟ್ ಗವರ್ನರ್ ಝೇವಿಯರ್ ಡಿಸೋಜಾ, ಝೋನಲ್ ಲೆಫ್ಟಿನೆಂಟ್ ಸುಂದರ್ ರೈ ಬಲ್ಕಾಡಿ ಉಪಸ್ಥಿತರಿದ್ದರು.

ಕೋಶಾಧಿಕಾರಿಯಾಗಿ ವಿಜಯ್ ವಿಲ್’ಫ್ರೆಡ್ ಡಿ’ಸೋಜ, ಉಪಾಧ್ಯಕ್ಷರಾಗಿ ರಾಮಣ್ಣ ರೈ, ನಿಕಟಪೂರ್ವ ಅಧ್ಯಕ್ಷರಾಗಿ ಸುಭಾಷ್ ರೈ ಬೆಳ್ಳಿಪ್ಪಾಡಿ, ಕ್ಲಬ್ ಲರ್ನಿಂಗ್ ಫೆಸಿಲಿಟೇಟರ್ ಭಾಸ್ಕರ್ ಕೋಡಿಂಬಾಳ, ಸಾರ್ಜಂಟ್ ಎಟ್ ಆರ್ಮ್ಸ್ ಮೀನಾಕ್ಷಿ ಗೌಡ, ಎಕ್ಸಿಕ್ಯೂಟಿವ್ ಕಾರ್ಯದರ್ಶಿ ಪ್ರವೀಣ್ ರೈ ಸಾಂತ್ಯ, ಮೆಂಬರ್ ಶಿಪ್ ಚೇರ್ಮನ್ ಸುರೇಶ್ ಪಿ., ವೊಕೇಶನಲ್ ಸರ್ವಿಸ್ ಚೇರ್ಮನ್ ದೀಪಕ್ ಬೊಳ್ವಾರು, ಕ್ಲಬ್ ಸರ್ವಿಸ್ ಪ್ರಾಜೆಕ್ಟ್ ಚೇರ್ಮನ್ ದಿನೇಶ್‌ ಆಚಾರ್ಯ, ಫೌಂಡೇಶನ್ ಚೇರ್ಮನ್ ಮಹಾಬಲ ಗೌಡ, ನ್ಯೂ ಜನರೇಶನ್ ಚೇರ್ಮನ್ ದೀಪಕ್ ಮಿನೇಜಸ್, ಪಬ್ಲಿಕ್ ಇಮೇಜ್ ಚೇರ್ಮನ್ ಸುನಿಲ್ ಜಾಧವ್, ಪಲ್ಸ್ ಪೋಲಿಯೊ ಚೇರ್ಮನ್ ಸೆನೋರಿಟಾ ಆನಂದ್, ಬುಲೆಟಿನ್ ಎಡಿಟರ್ ಮಹೇಶ್ ಸವಣೂರು, ಕಮ್ಯೂನಿಟಿ ಸರ್ವಿಸ್ ಉಮೇಶ್ ಮಲುವೇಳು, ಇಂಟರ್ನಾಷನಲ್ ಸರ್ವಿಸ್ ಆನಂದ್ ಮೂವಪ್ಪು, ಟೀಚ್ ನಾರಾಯಣ ರೈ, ವಿನ್ಸ್ ರೋಶನ್ ರೈ, ವೆಬ್ ಐಟಿ ಸುಂದರ ಗೌಡ, ಸಿ.ಎಲ್.ಸಿ.ಸಿ.ಸುರೇಂದ್ರ ಆಚಾರ್ಯ, ಡಿಸ್ಟ್ರಿಕ್ಟ್ ಪ್ರಾಜೆಕ್ಟ್ ಉದಯ ಕುಮಾರ್, ಎಥಿಕ್ಸ್ ಕಮಿಟಿ ಜಯಂತ್ ಕೆಟ್ಟ, ಪ್ರೋಗ್ರಾಂ ಸಮಿತಿ ಚಂದ್ರಶೇಖರ  ಅಧಿಕಾರ ಸ್ವೀಕರಿಸಿದರು.

ಆಶಾ ಮರಿಯಾ ರೆಬೆಲ್ಲೋ

ಆಶಾ ಮರಿಯಾ ರೆಬೆಲ್ಲೋ ಅವರು ದರ್ಬೆ ಸಿಸಿಲಿಯಾ ರೆಬೆಲ್ಲೋ ಹಾಗೂ ಬೆನೆಡಿಕ್ಟ್ ರೆಬೆಲ್ಲೋ ಅವರ ಪುತ್ರಿ. ಫಿಲೋಮಿನಾ ಪ್ರೌಢಶಾಲೆಯಲ್ಲಿ ವಿಜ್ಞಾನ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮೈಸೂರಿನ ಕುವೆಂಪು ಮುಕ್ತ ವಿಶ್ವವಿದ್ಯಾಲಯದಲ್ಲಿ ಗಣಿತದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿರುವ ಇವರು ಶಿಕ್ಷಕಿಯಾಗಿ ತನ್ನ ವೃತ್ತಿ ಜೀವನವನ್ನು ಸುಳ್ಯದ ರೋಟರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆರಂಭಿಸಿ, ಬಳಿಕ ಸಂತ ಫಿಲೋಮಿನಾ ಪ್ರೌಢಶಾಲೆಯಲ್ಲಿ, ಮಂಗಳೂರಿನ ಮಿಲಾಗ್ರಿಸ್ ಪ್ರೌಢಶಾಲೆಯಲ್ಲಿ ಮುಂದುವರಿಸಿ, ಪ್ರಸ್ತುತ ಪುತ್ತೂರಿನ ಸಂತ ಫಿಲೋಮಿನಾ ಪ್ರೌಢಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆಯನ್ನು ಸಲ್ಲಿಸುತ್ತಾ ಬರುತ್ತಿದ್ದಾರೆ. ಕಲೆ, ಸಾಹಿತ್ಯ, ಯಕ್ಷಗಾನ ಇವುಗಳಲ್ಲಿ ಆಸಕ್ತಿಯನ್ನು ಹೊಂದಿದವರಾಗಿದ್ದು, ಯಕ್ಷಗಾನದಲ್ಲಿ ಹಲವಾರು ಪಾತ್ರವನ್ನು ನಿರ್ವಹಿಸಿ ಜನ ಮೆಚ್ಚುಗೆಯನ್ನು ಪಡೆದವರಾಗಿರುತ್ತಾರೆ. ಚರ್ಚ್‌ ನಲ್ಲಿ ಐಸಿವೈಎಂ ಮತ್ತು ವೈಸಿಎಸ್ ಸಂಯೋಜಕರಾಗಿ ಕಾರ್ಯ ನಿರ್ವಹಿಸಿದವರಾಗಿರುತ್ತಾರೆ. ರೋಟರಿ ಕ್ಲಬ್ ಸ್ವರ್ಣ ಇದರ ಸ್ಥಾಪಕ ಸದಸ್ಯರಾದ ಇವರು ಈ ಹಿಂದೆ ಕ್ಲಬ್ ನಲ್ಲಿ ಕಾರ್ಯದರ್ಶಿಯಾಗಿ, ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿರುತ್ತಾರೆ.

ಸಂಧ್ಯಾ ಬೈಲಾಡಿ

ನೂತನ ಕಾರ್ಯದರ್ಶಿಯಾಗಿ ಆಯ್ಕೆಯಾದ ಸಂಧ್ಯಾ ಬೈಲಾಡಿರವರು ಸುಳ್ಯ ತಾಲೂಕು, ಅಣ್ಣಾವರ ಗ್ರಾಮದ ಅಡ್ಪಂಗಾಯ ಮನೆತನದ ರಾಮಚಂದ್ರ ಗೌಡ ಮತ್ತು ಪ್ರಭಾವತಿ ದಂಪತಿ ಪುತ್ರಿ. ಬಿ.ಎ ಪದವಿಯೊಂದಿಗೆ ಬಿಎಡ್ ಸುಳ್ಯದಲ್ಲಿ ಪಡೆದು ಪಡೆದಿರುತ್ತಾರೆ. ನಂತರ ಸುಳ್ಯ ಸರಕಾರಿ ಪ್ರೌಢ ಶಾಲೆಯಲ್ಲಿ ಶಿಕ್ಷಕ ವೃತ್ತಿಗೆ ಸೇರಿತದನಂತರ ಬೆಳಿಯೂರು ಕಟ್ಟೆ ಪ್ರೌಢಶಾಲೆ, ಇರ್ದೆ-ಉಪ್ಪಳಿಗೆ ಪ್ರೌಢಶಾಲೆಯಲ್ಲಿ ಸೇವೆ ಸಲ್ಲಿಸಿ ಭಡ್ತಿ ಹೊಂದಿ ಬಂಟ್ವಾಳ ತಾಲೂಕು ಬೋಳಂತಿಮೊಗರು ಪ್ರೌಢಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನ್ಯಾಯವಾದಿ ಚಿದಾನಂದ ಬೈಲಾಡಿರವರ ಪತ್ನಿಯಾಗಿರುವ ಸಂಧ್ಯಾ ಬೈಲಾಡಿರವರು ಒಕ್ಕಲಿಗ ಗೌಡ ಮಹಿಳಾ ಸಂಘ ಪುತ್ತೂರು ಹೀಗೆ ಕೆಲವೊಂದು ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡಿದ್ದು, ಆರು ವರ್ಷದ ಹಿಂದೆ ರೋಟರಿ ಕ್ಲಬ್ ಸ್ವರ್ಣ ಇದಕ್ಕೆ ಸೇರ್ಪಡೆಗೊಂಡು ಹಲವಾರು ಹುದ್ದೆಗಳನ್ನು ಸಮರ್ಥವಾಗಿ ನಿರ್ವಹಿಸಿರುತ್ತಾರೆ.

ವಿಜಯ್ ಡಿ’ಸೋಜ

ನೂತನ ಕೋಶಾಧಿಕಾರಿಯಾಗಿ ಆಯ್ಕೆಯಾದ ವಿಜಯ್ ಡಿ’ಸೋಜರವರು ಮಾಯಿದೆ ದೇವುಸ್ ಚರ್ಚ್ ನ ಐಸಿವೈಎಂ ಸಂಘಟನೆಯ ಅಧ್ಯಕ್ಷರಾಗಿ, ಕ್ರಿಶ್ಚಿಯನ್ ಲೈಫ್ ಕಮ್ಯೂನಿಟಿ, ಡೊನ್ ಬೊಸ್ಕೊ ಕ್ಲಬ್‌ನ ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯದರ್ಶಿಯಾಗಿ, ದಕ್ಷಿಣ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಮುರ ಇದರ ಪ್ರಸ್ತುತ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ, ಪ್ರಸ್ತುತ ವರ್ಷದಿಂದ ಶಾಲೆಯಲ್ಲಿ ಎಲ್ಲರ ಸಹಕಾರದೊಂದಿಗೆ ಉಚಿತ ಎಲ್.ಕೆ.ಜಿ.ಶಿಕ್ಷಣವನ್ನು ಆರಂಭಿಸಿರುತ್ತಾರೆ. ಗ್ಲೋರಿಯಾ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಇದರ ನಿರ್ದೇಶಕರಾಗಿ, ರೋಟರಿ ಸ್ವರ್ಣದ ಸ್ಥಾಪಕ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ. ಕ್ರಿಕೆಟ್ ಹಾಗೂ ಬ್ಯಾಡ್ಮಿಂಟನ್ ಆಟಗಾರರಾಗಿರುವ ಇವರು ನಟನೆ ಮತ್ತು ನೃತ್ಯದಲ್ಲೂ ಒಲವನ್ನು ಹೊಂದಿರುತ್ತಾರೆ. ಎಲೆಕ್ಟ್ರಾನಿಕ್ ಡಿಪ್ಲೋಮಾ ಪದವೀಧರರಾಗಿರುವ ಇವರು ಮಂಗಳೂರಿನಲ್ಲಿ ಮಹಿಮಾ ಎಂಟರ್‌ಪ್ರೈಸಸ್ ಎನ್ನುವ ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ನಾಡಪ್ರಭು ಕೆಂಪೇಗೌಡ ರಾಜ್ಯ ಪ್ರಶಸ್ತಿ ಪುರಸ್ಕೃತ ಕೇಶವ ಅಮೈ ಅವರಿಗೆ ದರ್ಬೆಯಲ್ಲಿ ಸ್ವಾಗತ, ಮೆರವಣಿಗೆ

ಫುತ್ತೂರು: ಬೆಂಗಳೂರಿನಲ್ಲಿ ನಾಡಪ್ರಭು ಕೆಂಪೇಗೌಡ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಎಸ್.ಆರ್.ಕೆ.…