tamanvi
ಶಿಕ್ಷಣ

ಪುತ್ತೂರು ಬಾಲಕಿಯರ ಪಪೂ ಕಾಲೇಜಿನ ವಿದ್ಯಾರ್ಥಿ ಸಂಘ ಉದ್ಘಾಟನೆ | ವಿದ್ಯಾರ್ಥಿ ನಾಯಕಿಯಾಗಿ ಫಾತಿಮತ್ ಸನಾ, ಕಾರ್ಯದರ್ಶಿಯಾಗಿ ಮನಸ್ವಿ ಎಂ.ಜೆ.

D_shiva_bhat

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಇಲ್ಲಿನ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ 2026–27ನೇ ಸಾಲಿನ ವಿದ್ಯಾರ್ಥಿ ಸಂಘದ ಉದ್ಘಾಟನಾ ಕಾರ್ಯಕ್ರಮ ಜುಲೈ 7ರಂದು ನಡೆಯಿತು.

ವಿದ್ಯಾರ್ಥಿ ಸಂಘವನ್ನು ಉದ್ಘಾಟಿಸಿ ಮಾತನಾಡಿದ ಸವಣೂರು ಸರ್ಕಾರಿ ಪದವಿಪೂರ್ವ ಕಾಲೇಜಿನ ಆಂಗ್ಲ ಭಾಷಾ ಉಪನ್ಯಾಸಕ ಹರಿಶಂಕರ್, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಮನೋಭಾವ ಬೆಳೆಸಿಕೊಳ್ಳಬೇಕು.  ವೈಯಕ್ತಿಕ ಹಾಗೂ ವೃತ್ತಿಪರ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಳ್ಳುವುದರ ಜೊತೆಗೆ ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಕಿವಿಮಾತು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ಪ್ರಮೀಳಾ ಜೆಸ್ಸಿ ಕ್ರಾಸ್ತಾ ಮಾತನಾಡಿ, ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಅಧಿಕಾರಕ್ಕಿಂತ ಜವಾಬ್ದಾರಿಯನ್ನು ಅರಿತು ಸೇವಾ ಮನೋಭಾವದಿಂದ ಕಾರ್ಯನಿರ್ವಹಿಸಬೇಕು. ಉತ್ತಮ ಚಟುವಟಿಕೆಗಳ ಮೂಲಕ ಸಂಸ್ಥೆಯ ಸರ್ವತೋಮುಖ ಅಭಿವೃದ್ಧಿಗೆ ಕೈಜೋಡಿಸಬೇಕೆಂದು ಕರೆ ನೀಡಿದರು.

ಕಾಲೇಜು ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷೆ ಮಲ್ಲಿಕಾ ಜೆ. ರೈ ವಿದ್ಯಾರ್ಥಿನಿಯರಿಗೆ ಹಿತವಚನ ನೀಡಿದರು

ಸದಸ್ಯರಾದ ವಿ.ಕೆ. ಜೈನ್, ಪ್ರೊ. ವಿಷ್ಣು ಭಟ್, ಚಂದ್ರಕಾಂತ್ ನಾಯಕ್, ಅಬ್ದುಲ್ ಅಜೀಜ್, ಶಾಲಿನಿ, ಹಿರಿಯ ಉಪನ್ಯಾಸಕಿ ಚಿತ್ರಲೇಖ, ವಿದ್ಯಾರ್ಥಿ ನಾಯಕಿ ಫಾತಿಮತ್ ಸನಾ ಹಾಗೂ ಕಾರ್ಯದರ್ಶಿ ಮನಸ್ವಿ ಎಂ.ಜೆ. ಉಪಸ್ಥಿತರಿದ್ದರು.

ಪ್ರಾಂಶುಪಾಲರು ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.

ಪ್ರಣ್ಯ, ಅನುಷಾ, ಹರ್ಷಿತಾ ಪ್ರಾರ್ಥಿಸಿದರು. ಭೌತಶಾಸ್ತ್ರ ಉಪನ್ಯಾಸಕಿ ನಿರ್ಮಲಾ ಎನ್. ಮುಖ್ಯ ಅತಿಥಿಗಳನ್ನು ಸಭೆಗೆ ಪರಿಚಯಿಸಿದರು. ಅರ್ಥಶಾಸ್ತ್ರ ಉಪನ್ಯಾಸಕಿ ಶೋಭಾ ಕೆ. ಸ್ವಾಗತಿಸಿ, ರಾಜ್ಯಶಾಸ್ತ್ರ ಉಪನ್ಯಾಸಕಿ ಚಿತ್ರಲೇಖ ಕೆ. ವಂದಿಸಿದರು. ವಾಣಿಜ್ಯಶಾಸ್ತ್ರ ಉಪನ್ಯಾಸಕಿ ಲವೀನಾ ಲತಾ ಸಾಂತ್‌ಮಯೋರ್ ಕಾರ್ಯಕ್ರಮ ನಿರೂಪಿಸಿದರು.

ಸಭಾ ಕಾರ್ಯಕ್ರಮದ ನಂತರ ‘Talentia’ – ಪ್ರತಿಭೆಗಳ ಅನಾವರಣ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ವಿದ್ಯಾರ್ಥಿ ಸಂಘದ ಪದಾಧಿಕಾರಿಗಳ ವಿವರ:

ವಿದ್ಯಾರ್ಥಿ ನಾಯಕಿ ಫಾತಿಮತ್ ಸನಾ, ಕಾರ್ಯದರ್ಶಿ ಮನಸ್ವಿ ಎಂ.ಜೆ., ಸಾಂಸ್ಕೃತಿಕ ಮಂತ್ರಿ ಪ್ರಣ್ಯ, ಉಪ ಸಾಂಸ್ಕೃತಿಕ ಮಂತ್ರಿ ವೀಕ್ಷಿತಾ ಪಿ. ಗೌಡ, ಶಿಸ್ತು ಮಂತ್ರಿ ತವನಿಧಿ ಶೆಟ್ಟಿ ಕೆ., ಉಪ ಶಿಸ್ತು ಮಂತ್ರಿ ಜೀವಿತಾ, ಕ್ರೀಡಾ ಮಂತ್ರಿ ಅಶ್ವಿತಾ, ಉಪಕ್ರೀಡಾ ಮಂತ್ರಿ ಫಾತಿಮತ್ ನಾಸಿರಾ, ಆರೋಗ್ಯ ಮಂತ್ರಿ ತನುಷಾ ಕೆ.ಎಸ್., ಉಪ ಆರೋಗ್ಯ ಮಂತ್ರಿ ಆಯಿಷತ್ ಸುಹೈಲಾ, ಸ್ವಚ್ಛತಾ ಮಂತ್ರಿ ಅನುಷಾ, ಉಪ ಸ್ವಚ್ಛತಾ ಮಂತ್ರಿ ತೇಜಸ್ವಿನಿ, ಕೃಷಿ ಮಂತ್ರಿ ಅಯಿಷತ್ ಅಜ್’ಮೀನಾ, ಉಪ ಕೃಷಿ ಮಂತ್ರಿ ಫಾತಿಮತ್ ತನಷಾ ಆಯ್ಕೆಯಾಗಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಬ್ಯಾಂಕ್ ಆಫ್ ಬರೋಡದಲ್ಲಿ ಬ್ಯಾಂಕಿಂಗ್ ಅಸಿಸ್ಟೆಂಟ್ ಆಗಿ ಆಯ್ಕೆಯಾದ ವಿದ್ಯಾಮಾತಾ ಅಕಾಡೆಮಿ ವಿದ್ಯಾರ್ಥಿನಿ ಜಯಪ್ರಭಾ ಕೆ

ಪುತ್ತೂರು: ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಯಲ್ಲಿ ನಿರಂತರ ಯಶಸ್ಸು ದಾಖಲಿಸುತ್ತಿರುವ…