ಪುತ್ತೂರು: ಅಕ್ಷಯ ಕಾಲೇಜಿನ ವಾಗ್ವೈಭವ ಸಂಸ್ಕೃತ ಸಂಘದ ವತಿಯಿಂದ ಸಂಸ್ಕೃತ ದಿನವನ್ನು ಆಚರಿಸಲಾಯಿತು.
ಮುಖ್ಯಅತಿಥಿಯಾಗಿದ್ದ ಸುದಾನ ವಸತಿಯುತ ಶಾಲಾ ಶಿಕ್ಷಕಿ ಚೇತನಾ ಪಿ.ಕೆ. ಅವರು ಸಂಸ್ಕೃತದ ಪ್ರಾಮುಖ್ಯತೆ, ಉಪಯೋಗಗಳು ಮತ್ತು ಉದ್ದೇಶಗಳ ಕುರಿತು ಮಾಹಿತಿ ನೀಡಿದರು. ಸಂಸ್ಕೃತದ ಸಾಂಸ್ಕೃತಿಕ ಮಹತ್ವವನ್ನು ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕ್ಷಯ ಕಾಲೇಜಿನ ಪ್ರಾಂಶುಪಾಲ ಸಂಪತ್ ಕೆ. ಪಕ್ಕಳ ವಹಿಸಿದ್ದರು. ಐಕ್ಯೂಎಸಿ ಸಂಯೋಜಕಿ ರಶ್ಮಿ ಕೆ., ಸಂಸ್ಕೃತ ವಿಭಾಗ ಮುಖ್ಯಸ್ಥೆ ಸಾಯಿ ಕೃಪಾ ಹಾಗೂ ಸಂಸ್ಕೃತ ಸಂಘದ ಕಾರ್ಯದರ್ಶಿ ಶ್ರೇಯಾ ಉಪಸ್ಥಿತರಿದ್ದರು.
ಸೆಮಿಸ್ಟರ್ ಪರೀಕ್ಷೆಯ ಸಂಸ್ಕೃತ ವಿಷಯದಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ನೀಡಿ ಗೌರವಿಸಲಾಯಿತು.
ಸಾಯಿ ಕೃಪಾ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿನಿಯರಾದ ಲಾವಣ್ಯ, ಕಾವ್ಯ ಪ್ರಾರ್ಥಿಸಿದರು. ರಶ್ಮಿ ರಾವ್ ಸ್ವಾಗತಿಸಿದರು. ಪೂರ್ವಿ ವಂದಿಸಿದರು. ದಿಥಿ, ಅಂಕಿತಾ ಮತ್ತು ಅಮೂಲ್ಯ ಗುಂಪು ಗೀತೆಯನ್ನು ಪ್ರಸ್ತುತಪಡಿಸಿದರು.
























