ಟ್ರೆಂಡಿಂಗ್ ನ್ಯೂಸ್

ಮೈತ್ರಿ ಎಲೆಕ್ಟ್ರಿಕ್ ಕಂಪನಿಯಲ್ಲಿ ಲಿಷಾ ಉತ್ಪನ್ನಗಳ ಪ್ರಾತ್ಯಕ್ಷಿಕೆ, ಮಾಹಿತಿ ಕಾರ್ಯಾಗಾರ

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಲಿಷಾ ಕಂಪನಿಯ ಉತ್ಪನ್ನಗಳ ಪ್ರಾತ್ಯಕ್ಷಿಕೆ ಹಾಗೂ ಮಾಹಿತಿ ಕಾರ್ಯಗಾರ ಜುಲೈ 9ರಂದು ಸಂಜೆ ಸುಷಾ ಚೇಂಬರ್ಸ್ ನ ಮೈತ್ರಿ ಎಲೆಕ್ಟ್ರಿಕ್ ಕಂಪನಿಯಲ್ಲಿ ನಡೆಯಿತು.

 ಲಿಷಾ ಕಂಪನಿಯ ಉತ್ಪನ್ನಗಳ ಬಗ್ಗೆ ಹೆಚ್ಚಿನ ಮಾಹಿತಿ ನೀಡುವ ಸಲುವಾಗಿ ಈ ಕಾರ್ಯಾಗಾರ ಏರ್ಪಡಿಸಲಾಗಿತ್ತು.

ಕಾರ್ಯಾಗಾರ ನಡೆಸಿಕೊಟ್ಟ ಕಂಪನಿಯ ಮಂಗಳೂರು ವಿಭಾಗದ ಎ ಎಸ್ ಎಂ ಶ್ರೀಪತಿ ಮಯ್ಯ ಮಾಹಿತಿ ನೀಡಿ, ಟೆಕ್ನಿಷಿಯನ್ ಗಳೊಂದಿಗೆ ಸುಮಾರು 40 ನಿಮಿಷಗಳ ಸಂವಹನ ಮಾಡಿದರು. ಉತ್ಪನ್ನಗಳ ಒಳಿತು ಕೆಡುಕುಗಳನ್ನು ವಿಮರ್ಶಿಸಿದರು. 

ಮಾಲಿಕರಾದ ರವಿನಾರಾಯಣ ಎಂ. ಸ್ವಾಗತಿಸಿ, ಎಲ್ಲರ ಸಹಕಾರ ಯಾಚಿಸಿದರು. ಮ್ಯಾನೇಜರ್ ಉರ್ಬನ್ ಡಿ’ಸೋಜ ವಂದಿಸಿದರು. ಆಗಮಿಸಿದ ಎಲ್ಲ ಟೆಕ್ನಿಷಿಯನ್ ಗಳಿಗೆ ಉಡುಗೊರೆ ನೀಡಿ ಗೌರವಿಸಲಾಯಿತು.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ತಂಬಾಕು-ನಿಕೋಟಿನ್ ಉತ್ಪನ್ನಗಳ ನಿಷೇಧ: ಅಡಿಕೆ ಬೆಳೆಗಾರರಿಗೆ ತೊಂದರೆಯಾಗದಂತೆ ಕ್ರಮಕ್ಕೆ ಕ್ಯಾಂಪ್ಕೊ ಆಗ್ರಹ

ಮಂಗಳೂರು: ಕರ್ನಾಟಕ ಸರ್ಕಾರವು ತಂಬಾಕು ಮತ್ತು ನಿಕೋಟಿನ್ ಅಂಶವುಳ್ಳ ಉತ್ಪನ್ನಗಳ ಮಾರಾಟ ಹಾಗೂ…

ಕರೆ ಹೋಗ್ತಿಲ್ಲ, ನೆಟ್ ವರ್ಕ್ ಕೆಲಸ ಮಾಡ್ತಿಲ್ಲ!! ವರ್ಷಾಂತ್ಯಕ್ಕೆ ಹೀಗೇಕೆ ಮಾಡ್ತು ಕಂಪೆನಿಗಳು??

ಪುತ್ತೂರು: ಮೊಬೈಲ್ ಕರೆ ಹೋಗ್ತಿಲ್ಲ. ಇಂಟರ್ ನೆಟ್ ವರ್ಕ್ ಆಗ್ತಿಲ್ಲ. ಹೀಗೇಕಾಯ್ತು ಎಂಬ…