ಅಪರಾಧ

ಕಲ್ಲು ಸಾಗಾಟ: ಲಾರಿ ಮಾಲಕ, ಚಾಲಕನ ವಿರುದ್ಧ ಪ್ರಕರಣ ದಾಖಲು!!

ಈ ಸುದ್ದಿಯನ್ನು ಶೇರ್ ಮಾಡಿ

ಸುಳ್ಯ: ಕಾನೂನುಬಾಹಿರವಾಗಿ, ಪರವಾನಿಗೆ ಇಲ್ಲದೇ ಕಲ್ಲು ಸಾಗಾಟ ಮಾಡುತ್ತಿರುವ ಪ್ರಕರಣ ಸುಳ್ಯದಲ್ಲಿ ಗುರುವಾರ ಸಂಜೆ ಪತ್ತೆಯಾಗಿದೆ.

maithri

ಸುಳ್ಯ ಕಲ್ಲುಗುಂಡಿ ಹೊರಠಾಣೆ ಬಳಿ ಲಾರಿ ತಪಾಸಣೆ ನಡೆಸಲು ನಿಲ್ಲಿಸಿದಾಗ, ಚಾಲಕ ಪರಾಗಿಯಾಗಿದ್ದಾನೆ. ಲಾರಿಯನ್ನು ಪರಿಶೀಲಿಸಿದಾಗ 600 ಕಲ್ಲುಗಳನ್ನು ಲೋಡ್ ಮಾಡಿರುವುದು ಪತ್ತೆಯಾಗಿದೆ. ಇದಕ್ಕೆ ಪರವಾನಿಗೆ ಇಲ್ಲದೇ ಕಾನೂನು ಬಾಹಿರವಾಗಿ ಸಾಗಾಟ ಮಾಡುತ್ತಿರುವುದಾಗಿ ತಿಳಿದುಬಂದಿದೆ.

ಕಲ್ಲಿನ ಲಾರಿಯನ್ನು ಸ್ವಾಧೀನ ಪಡಿಸಿಕೊಂಡಿರುವ ಪೊಲೀಸರು. ಲಾರಿ ಮಾಲಿಕ ಹಾಗೂ ಚಾಲಕನ ವಿರುದ್ದ ಸುಳ್ಯ ಪೊಲೀಸ್ ಠಾಣೆಯಲ್ಲಿ ಅ.ಕ್ರ 93/2026 ಕಲಂ:303(2)BNS2023 & ಕಲಂ 4(1),21 Mines And Minarals (Devolopment And Regulation Act 1957 & ಕಲಂ 66 R/W 192(a) IMV Act ರಂತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಮಂಗಳೂರಿನಲ್ಲಿ ಸ್ಕೂಟರ್ ಢಿಕ್ಕಿ: ಜಮ್ಮುವಿನಲ್ಲಿ ಸೇವೆ ಸಲ್ಲಿಸುತ್ತಿದ್ದ ಯೋಧ ಕೊಯಿಲ ಸೀತಾರಾಮ ಗೌಡ ಮೃತ್ಯು!!

ಜಮ್ಮುವಿನಲ್ಲಿ ಸೇವೆ ಸಲ್ಲಿಸುತ್ತಿದ್ದ ಯೋಧನೋರ್ವರು ಬುಧವಾರ ಮಂಗಳೂರಿನ ಕೆಪಿಟಿ ಬಳಿ ಸಂಭವಿಸಿದ…

1 of 114