ಕಡಬ ತಾಲೂಕಿನ ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ, ಓಂತ್ರಡ್ಕದಲ್ಲಿ ಆಂಗ್ಲ ಭಾಷ ಪದವೀಧರ ಶಿಕ್ಷಕರಾಗಿ ಕರ‍್ಯನಿರ್ವಹಿಸುತ್ತಿರುವ ಶೈಕ್ಷಣಿಕ ಚಿಂತಕ, ಅಂಕಣಕಾರ, ಕಥೆಗಾರ ದಿಲೀಪ್ ಕುಮಾರ್ ಸಂಪಡ್ಕ ಇವರಿಗೆ ಕರ್ನಾಟಕ ರಾಜ್ಯ ಬರಹಗಾರರ ಸಂಘ ಹೂವಿನ ಹಡಗಲಿ (ರಿ) ನೀಡುವ ರಾಷ್ಟಿçÃಯ ಶಿಕ್ಷಣ ಸೌರಭ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಇವರು ಓಂತ್ರಡ್ಕ ಶಾಲೆಯಲ್ಲಿ ೦೯ ವರ್ಷಗಳಿಂದ ಪದವೀಧರ ಪ್ರಾಥಮಿಕ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಹಿಂದೆ ಸುಮಾರು ಒಂಭತ್ತು ವರ್ಷಗಳ ಕಾಲ ಬೆಂಗಳೂರಿನ ಪ್ರತಿಷ್ಠಿತ ಸಿ.ಬಿ.ಎಸ್.ಸಿ ಶಾಲೆಗಳಲ್ಲಿ ಶೈಕ್ಷಣಿಕ ಕೋ-ಆರ್ಡಿನೇಟರ್, ಪ್ರಾಂಶುಪಾಲರಾಗಿ ಸಹ ಕಾರ್ಯನಿರ್ವಹಿಸಿರುತ್ತಾರೆ. ಒಟ್ಟು ೧೬ ವರ್ಷಗಳ ಸೇವಾನುಭವನ್ನು ಹೊಂದಿದ್ದಾರೆ. ಶಿಕ್ಷಣ ಇಲಾಖೆಯಲ್ಲಿ ಹಲವು ತರಬೇತಿಗಳಿಗೆ ರಾಜ್ಯ ಸಂಪನ್ಮೂಲ ವ್ಯಕ್ತಿಯಾಗಿ ಜಿಲ್ಲಾ ಮತ್ತು ರಾಜ್ಯಮಟ್ಟದಲ್ಲಿ ಶಿಕ್ಷಕರಿಗೆ ತರಬೇತುದಾರರಾಗಿ ಸೇವೆ ಸಲ್ಲಿಸಿದ್ದಾರೆ. ಕೊರೋನಾ ಕಾಲದಲ್ಲಿ ಕಲಿಕಾ ಚೇತರಿಕೆಯ ೮ನೇ ತರಗತಿಯ ಇಂಗ್ಲೀಷ್ ಕಲಿಕಾ ಹಾಳೆ ತಯಾರಿಕೆಯ ಸಂಪನ್ಮೂಲ ತಂಡದಲ್ಲಿ ಸದಸ್ಯರಾಗಿ ಕಾರ್ಯನಿರ್ವಹಿಸಿರುತ್ತಾರೆ. ಇವರ ಹಲವು ಲೇಖನಗಳು ರಾಜ್ಯದ ಹಲವು ಪತ್ರಿಕೆಗಳಲ್ಲಿ, ರಾಷ್ಟಿçÃಯ ಮತ್ತು ಅಂತರಾಷ್ಷೀಯ ನಿಯತಕಾಲಿಕೆಗಳಲ್ಲಿ ಕೂಡ ಪ್ರಕಟಗೊಂಡಿದೆ. ಈ ಹಿಂದೆ ಇವರು ಬರೆದಿರುವ ಲೇಖನವನ್ನು ಮೆಚ್ಚಿ ಅಂದಿನ ಶಿಕ್ಷಣ ಸಚಿವರಾಗಿದ್ದ ಶ್ರೀ ಸುರೇಶ್ ಕುಮಾರ್‌ರವರು ಇವರಿಗೆ ದೂರವಾಣಿ ಕರೆ ಮಾಡಿ ಅಂಭಿನAದಿಸಿರುವುದನ್ನು ಇಲ್ಲಿ ಸ್ಮರಿಸಬಹುದು. ಇದರ ಜೊತೆ ರಾಷ್ಡಿçÃಯ ಮಟ್ಟದಲ್ಲಿ ಶೈಕ್ಷಣಿಕ ಆಡಳಿತ ಸುಧಾರಣೆಗೆ ಭಾರತೀಯ ಶಿಕ್ಷಣ ಸೇವೆ (ಐಇಎಸ್) ಯನ್ನು ಆರಂಭಿಸಬೇಕು ಮತ್ತು ಈ ಪರೀಕ್ಷೆಯನ್ನು ನಡೆಸುವ ನಿಯಮಗಳ ಬಗ್ಗೆ ಇವರು ಸಿದ್ದಪಡಿಸಿದ ಪ್ರಸ್ತಾವನೆಗೆ ಪ್ರಧಾನ ಮಂತ್ರಿಗಳಿAದ ಸ್ಪಂದನೆ ಕೂಡ ದೊರೆತಿರುವುದು ಇವರ ಶೈಕ್ಷಣಿಕ ಚಿಂತನೆಗೆ ಸಾಕ್ಷಿಯಾಗಿದೆ. ಇವರು ರಾಷ್ಟಿçÃಯ ಮತ್ತು ಅಂತರಾಷ್ಷೀಯ ಸಮ್ಮೆಳನಗಳಲ್ಲಿ ಕೂಡ ತಮ್ಮ ಸಂಶೋಧನಾ ಲೇಖನಗಳನ್ನು ಮಂಡಿಸಿರುತ್ತಾರೆ. ಕೆಲವು ಪದವಿ ಮಟ್ಟದ ಪಠ್ಯಪುಸ್ತಕಗಳಿಗೆ ಪಾಠಗಳನ್ನು ಬರೆದಿರುವ ಅನುಭವ ಇವರಿಗಿದೆ. ಕುವೆಂಪು ವಿಶ್ವವಿದ್ಯಾನಿಲಂiÀiದಿAದ ಎಂ.ಎ ಅರ್ಥಶಾಸ್ತçದಲ್ಲಿ ಎಳನೆಯ ರ‍್ಯಾಂಕ್ ಗಳಿಸಿರುವ ಇವರು ಅಳಗಪ್ಪ ವಿಶ್ವವಿದ್ಯಾನಿಲಯಿಂದ ಎಂ.ಎ (ಇಂಗ್ಲೀಷ್), ಕುವೆಂಪು ವಿಶ್ವವಿದ್ಯಾನಿಲಯಿಂದ ಎಂ.ಎ (ಇತಿಹಾಸ), ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯಿಂದ ಎಂ.ಇಡಿ (ಶಿಕ್ಷಣ)ಮತ್ತು ಮೈಸ್ ನಿಂದ ಡಿ.ಸಿ.ಎ ಪದವಿಗಳನ್ನು ಪಡೆದಿರುತ್ತಾರೆ. ಕೆ-ಸೆಟ್ ಪರೀಕ್ಷೆಯನ್ನು ಕೂಡ ತೆರ್ಗಡೆ ಹೊಂದಿರುತ್ತಾರೆ. ಇವರು ರಂಗಭೂಮಿ ಕಲಾವಿದರಾಗಿ, ಹಲವಾರು ರಂಗಪ್ರÀದರ್ಶನಗಳಲ್ಲಿ ಸಹ ಹೆಸರು ಮಾಡಿದ್ದಾರೆ. ವಿವಿಧ ಶಿಕ್ಷಕ ಸಂಘಟನೆಗಳ ಮೂಲಕ ಶಿಕ್ಷಕರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ದಿಲೀಪ್ ಕುಮಾರ್‌ರವರ ಶಿಕ್ಷಣ, ಸಂಘಟನೆ ಹಾಗೂ ಸಮಾಜ ಸೇವೆೆಯನ್ನು ಪರಿಗಣಿಸಿ ಭಾನುವಾರ ಶಿವಮೊಗ್ಗದ ಕರ್ನಾಟಕ ಸಂಘದ ಸಭಾಭವನದಲ್ಲಿ ನಡೆದ ರಾಷ್ಟçಮಟ್ಟದ ಕನ್ನಡ ನುಡಿ ವೈಭವ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಬರಹಗಾರರ ಸಂಘ ಹೂವಿನ ಹಡಗಲಿ (ರಿ) ಅಧ್ಯಕ್ಷರಾದ ಶ್ರೀ ಮುಧುನಾಯ್ಕ ಲಂಬಾಣಿ ಇವರ ಸಮ್ಮುಖದಲ್ಲಿ ರಾಷ್ಟçಮಟ್ಟದ ಶಿಕ್ಷಣ ಸೌರಭ ಪ್ರಶಸ್ತಿಯನ್ನು ಪ್ರಧಾನ ಮಾಡಲಾಯಿತು. ಈ ಹಿಂದೆ ಇವರಿಗೆ ಕನ್ನಡ ರಕ್ಷಣಾ ವೇದಿಕೆಯು ರಾಜ್ಯಮಟ್ಟದ ಶಿಕ್ಷಣ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಇತ್ತೀಚಿಗೆ ಇವರ ‘ಕೊರೊನಾ ಕಾಲದ ಮಾತು ಮಂಥನ’ ಎಂಬ ಕೃತಿಯು ಪ್ರಕಟಗೊಂಡಿದೆ. ರಾಜ್ಯ ಮತ್ತು ಜಿಲ್ಲೆಯ ಹಲವು ಸಂಘ, ಸಂಸ್ಥೆಗಳೂ ಸೇರಿದಂತೆ ಶಿಕ್ಷಕರು, ಸಂಘಟನೆಗಳು ಇವರನ್ನು ಅಭಿನಂದಿಸಿವೆ.
ರಾಷ್ಟ್ರ ಮಟ್ಟದ ‘ಶಿಕ್ಷಣ ಸೌರಭ’ ಪ್ರಶಸ್ತಿಗೆ ದಿಲೀಪ್ ಕುಮಾರ್ ಆಯ್ಕೆ
What's your reaction?
- 394c
- 394cc
- 3ai technology
- 3ajjavara
- 3alwas
- 3apology
- 3artificial intelegence
- 3avg
- 3belthangady-provocative-speech-case-conviction
- 3bihar minister
- 3bjp
- 3bjp leader
- 3bjp national president
- 3bt ranjan
- 3co-operative
- 3coastal
- 3Court convicts accused in provocative speech case
- 3crime
- 3crime news
- 2cyclothon
- 2darmasthala
- 2death news
- 2dust bin
- 2education
- 2fraud
- 2gl
- 2gods own country
- 2gold
- 2google for education
- 2independence
- 2jewel
- 2jewellers
- 2jnana vikasa
- 2karnataka state
- 2kerala village
- 2kukke - kollur temple
- 2lokayuktha
- 2lokayuktha raid
- 2manipal
- 1minister krishna bairegowda
- 1mla ashok rai
- 1mohan alwa
- 1mudubidre
- 1nidana news
- 1nirvathu mukku
- 1nitin nabin
- 1police
- 1ptr tahasildar
- 1puttur
- 1puttur news
- 1puttur tahasildar
- 1republic
- 1revenue
- 1revenue department
- 1revenue minister
- 1school
- 1senior citizen
- 1silver
- 1society
- 0sowmya
- 0students
- 0tahasildar
- 0tahasildar absconded
- 0teachers
- 0tour
- 0trending
- 0udupi
- 0wastage
Related Posts
ಆಸೆಗಳ ತ್ಯಾಗದಿಂದ ಶಿಕ್ಷಣದಲ್ಲಿ ಸಾಧನೆ ಸಾಧ್ಯ: ಅವಿನಾಶ್ ಕೊಡಂಕಿರಿ
ಪುತ್ತೂರು: ಪದವಿಪೂರ್ವ ಶಿಕ್ಷಣ ಹಂತದಲ್ಲಿ ಕೈಗೊಳ್ಳುವ ನಿರ್ಧಾರಗಳು ಜೀವನವನ್ನೇ ಬದಲಾಯಿಸುವ…
ಬ್ಯಾಂಕ್ ಆಫ್ ಬರೋಡದಲ್ಲಿ ಬ್ಯಾಂಕಿಂಗ್ ಅಸಿಸ್ಟೆಂಟ್ ಆಗಿ ಆಯ್ಕೆಯಾದ ವಿದ್ಯಾಮಾತಾ ಅಕಾಡೆಮಿ ವಿದ್ಯಾರ್ಥಿನಿ ಜಯಪ್ರಭಾ ಕೆ
ಪುತ್ತೂರು: ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಯಲ್ಲಿ ನಿರಂತರ ಯಶಸ್ಸು ದಾಖಲಿಸುತ್ತಿರುವ…
ಅಕ್ಷಯ ಕಾಲೇಜು – ಅಭಿಜ್ಞ ಎಜುಕೇಶನ್ ಒಡಂಬಡಿಕೆ: ಎಐ, ಸೈಬರ್ ಭದ್ರತೆ ಓರಿಯೆಂಟೇಶನ್
ಪುತ್ತೂರು: ಅಕ್ಷಯ ಕಾಲೇಜಿನ ಬೈಟ್ಬ್ಲಿಟ್ಜ್–ಐಟಿ ಕ್ಲಬ್ ಹಾಗೂ ಐಕ್ಯೂಎಸಿ (IQAC) ಸಂಯುಕ್ತ…
ಅಕ್ಷಯ ಪದವಿ ಕಾಲೇಜಿನ ವಿದ್ಯಾರ್ಥೀ ಒಕ್ಕೂಟ ಪರಿಷತ್ ಪದಗ್ರಹಣ | ನಾಗರಿಕ ಮೌಲ್ಯದೊಂದಿಗೆ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಿ: ಕೃಷ್ಣಮೋಹನ್ ಪಿ.ಎಸ್.
ಪುತ್ತೂರಿನ ಅಕ್ಷಯ ಪದವಿ ಕಾಲೇಜಿನಲ್ಲಿ 2026-27ನೇ ಶೈಕ್ಷಣಿಕ ಸಾಲಿನ ವಿದ್ಯಾರ್ಥಿ ಒಕ್ಕೂಟ…
ಕರಾಟೆ ಸ್ಪರ್ಧೆ: ಕನ್ಯಾನ ಸರಸ್ವತಿ ವಿದ್ಯಾಲಯ ವಿದ್ಯಾರ್ಥಿಗಳ ಸಾಧನೆ
ದಡ್ಡಲಕಾಡು ಸರ್ಕಾರಿ ಶಾಲೆಯಲ್ಲಿ ನಡೆದ 2026-27ನೇ ಸಾಲಿನ ಬಂಟ್ವಾಳ ತಾಲೂಕು ಮಟ್ಟದ ಕರಾಟೆ…
ಶಿಸ್ತು, ಶ್ರದ್ಧೆ, ಭಕ್ತಿಯಿಂದ ಯಶಸ್ಸು: ಗುರುವಾಯನಕೆರೆ ವಿದ್ವತ್ ಪಿಯು ಕಾಲೇಜಿನಲ್ಲಿ ಸಾಧಕರೊಂದಿಗೆ ಸಂವಾದ, ಸನ್ಮಾನ ಸಮಾರಂಭದಲ್ಲಿ ಪ್ರತಾಪ್ ಸಿಂಹ ನಾಯಕ್ | ವಿದ್ಯಾಸಂಸ್ಥೆಗಳು ಶಿಕ್ಷಣ ನೀಡುವ ಭವ್ಯ ಕೇಂದ್ರವಾಗಬೇಕು: ಸುಭಾಶ್ಚಂದ್ರ ಶೆಟ್ಟಿ
ಬೆಳ್ತಂಗಡಿ: ಪ್ರತಿಯೊಬ್ಬರಲ್ಲೂ ಅದ್ಭುತ ದೈವೀ ಶಕ್ತಿಯಿದೆ. ಅದನ್ನ ಗುರುತಿಸಿ ಪ್ರಕಟಿಸುವುದೇ…
ಒಂದೂವರೆ ಕೋಟಿ ರೂ.ಗೂ ಮಿಕ್ಕಿ ವಿದ್ಯಾರ್ಥಿವೇತನ ವಿತರಿಸಿದ ಎಸ್.ಡಿ.ಎಂ. ಎಜುಕೇಶನಲ್ ಟ್ರಸ್ಟ್ | ವಿದ್ಯಾವಂತರು, ವಿಚಾರವಂತರೂ, ಆಚಾರವಂತರೂ ಆದಾಗ ಕಲಿತ ವಿದ್ಯೆ ಸಾರ್ಥಕ: ಡಿ. ಹರ್ಷೇಂದ್ರ ಕುಮಾರ್
ಉಜಿರೆ: ವ್ಯಕ್ತಿತ್ವದ ಸರ್ವತೋಮುಖ ಬೆಳವಣಿಗೆಯೇ ಶಿಕ್ಷಣದ ಗುರಿಯಾಗಿದ್ದು ವಿದ್ಯಾವಂತರು,…
ಎಸ್.ಡಿ.ಎಂ. ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನಗಳ ಕಾಲೇಜಿನ ವಾರ್ಷಿಕೋತ್ಸವ
ಉಜಿರೆ: ಕಾಲೇಜಿನ ಪ್ರಗತಿ-ಸಾಧನೆ ಬಗ್ಯೆ ಅವಲೋಕನದೊಂದಿಗೆ ಮುಂದಿನ ವರ್ಷದ ಚಟುವಟಿಕೆಗಳಿಗೆ…
ಅಂಬಿಕಾ ವಿದ್ಯಾಲಯ ಸಿಬಿಎಸ್ಇ ಸಂಸ್ಥೆಯಲ್ಲಿ ಗುರುಪೂರ್ಣಿಮಾ ಆಚರಣೆ | ವ್ಯಕ್ತಿತ್ವ ನಿರ್ಮಾಣಕ್ಕೆ ಶಿಕ್ಷಣದೊಂದಿಗೆ ಸಂಸ್ಕಾರವೂ ಬೇಕು: ಪುರೋಹಿತ ನಾಗರಾಜ ಭಟ್
ಪುತ್ತೂರು: ವ್ಯಾಸ ಪೂರ್ಣಿಮೆಯು ಅಜ್ಞಾನದ ಕತ್ತಲೆಯನ್ನು ದೂರ ಮಾಡಿ ಜ್ಞಾನದ ದೀಪ ಬೆಳಗಿಸಿದ…
ಅಕ್ಷಯ ಪದವಿ ಕಾಲೇಜಿನಲ್ಲಿ ‘ಮನದ ಮಾತು–ಕವಿತೆಯ ಹಾದಿ’ ಕವನ ಕಮ್ಮಟ ಯಶಸ್ವಿ
ಪುತ್ತೂರು: ಅಕ್ಷಯ ಪದವಿ ಕಾಲೇಜಿನಲ್ಲಿ ಕನ್ನಡ ಭಾಷಾ ವಿಭಾಗ ಹಾಗೂ ಅದ್ವಯ ಕನ್ನಡ ಸಾಹಿತ್ಯ ಸಂಘದ…























