ದೇಶ

ಉಗ್ರರ ವೈಭವೀಕರಿಸಿದ ಜಮ್ಮು – ಕಾಶ್ಮೀರದ ಸರ್ಕಾರಿ ಶಾಲಾ ಪುಸ್ತಕ: ಆಕ್ರೋಶ!

ಈ ಸುದ್ದಿಯನ್ನು ಶೇರ್ ಮಾಡಿ

ಜಮ್ಮು: ಜಮ್ಮು ಮತ್ತು ಕಾಶ್ಮೀರದ ಒಮರ್ ಅಬ್ದುಲ್ಲಾ ಸರ್ಕಾರವು ಈಗ ಹೊಸದೊಂದು ಭಾರಿ ವಿವಾದಕ್ಕೆ ಸಿಲುಕಿದೆ. ಸರ್ಕಾರಿ ಶಾಲಾ ಗ್ರಂಥಾಲಯಗಳಿಗೆ ವಿತರಿಸಲಾದ ಪುಸ್ತಕವೊಂದರಲ್ಲಿ ಪ್ರತ್ಯೇಕತಾವಾದಿ ನಾಯಕರು ಹಾಗೂ ಶಿಕ್ಷೆಗೊಳಗಾದ ಭಯೋತ್ಪಾದಕರನ್ನು “ಮಹಾನ್ ವ್ಯಕ್ತಿಗಳು” ಮತ್ತು “ದಂತಕಥೆಗಳು” ಎಂದು ಬಿಂಬಿಸಿ ವೈಭವೀಕರಿಸಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

maithri

ತರಗತಿಗಳಲ್ಲಿ ದೇಶಭಕ್ತಿಯನ್ನು ಬೋಧಿಸುವ ಬದಲು, ಭಾರತವನ್ನು ವಿಭಜಿಸಲು ಸಂಚು ರೂಪಿಸಿದವರನ್ನು ವೈಭವೀಕರಿಸಲು ಬಳಸಲಾಗುತ್ತಿದೆ ಎಂದು ಆರೋಪಿಸಲಾಗಿದೆ. ಗ್ರೇಟ್ ಪರ್ಸನಾಲಿಟೀಸ್ ಆಂಡ್ ಲೆಜೆಂಡ್ಸ್ ಆಫ್ ಜಮ್ಮು ಆಂಡ್ ಕಾಶ್ಮೀರ (ಸೀರೀಸ್-4)’ ಎಂಬ ಈ ಪುಸ್ತಕದಲ್ಲಿ ಮಕ್ಬೂಲ್ ಭಟ್, ಸೈಯದ್ ಅಲಿ ಶಾ ಗಿಲಾನಿ, ಮಸರತ್ ಆಲಂ ಮತ್ತು ಹುರಿಯತ್ ನಾಯಕ ಮಿರ್ವೈಜ್ ಉಮರ್ ಫಾರೂಕ್ ಅವರಂತಹ ಪ್ರತ್ಯೇಕತಾವಾದಿಗಳು ಮತ್ತು ಭಯೋತ್ಪಾದಕರನ್ನು ಯುವ ಪೀಳಿಗೆಗೆ ಮಾದರಿಗಳಾಗಿ ಬಿಂಬಿಸಲಾಗಿದೆ.

ಈ ಘಟನೆಯನ್ನು “ಶೈಕ್ಷಣಿಕ ಜಿಹಾದ್” ಎಂದು ಬಣ್ಣಿಸಿರುವ ಬಿಜೆಪಿ ನಾಯಕ ಹಾಗೂ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸುನಿಲ್ ಶರ್ಮಾ, ಯುವ ಮನಸ್ಸುಗಳನ್ನು ಕಲುಷಿತಗೊಳಿಸಲು ಈ ಪ್ರಯತ್ನ ಮಾಡಲಾಗಿದೆ ಎಂದು ಕಿಡಿಕಾರಿದ್ದಾರೆ. “ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಅವರು ತಮ್ಮ ಶಿಕ್ಷಣ ಸಚಿವೆ ಸಕೀನಾ ಇಟೂ ಅವರನ್ನು ತಕ್ಷಣವೇ ವಜಾಗೊಳಿಸಬೇಕು ಮತ್ತು ಶಾಲಾ ಗ್ರಂಥಾಲಯಗಳಿಗೆ ಈ ವಿವಾದಾತ್ಮಕ ಪುಸ್ತಕವನ್ನು ಶಿಫಾರಸು ಮಾಡಿದ ಮತ್ತು ಸರಬರಾಜು ಮಾಡಿದ ಎಲ್ಲರನ್ನು ಬಂಧಿಸಬೇಕು,” ಎಂದು ಸುನಿಲ್ ಶರ್ಮಾ ಆಗ್ರಹಿಸಿದ್ದಾರೆ.

ಈ ವಿವಾದದ ಕುರಿತು ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ, “ನಾನು ಆ ಪುಸ್ತಕವನ್ನು ಇನ್ನು ಓದಿಲ್ಲ, ಕನಿಷ್ಠ ಪಕ್ಷ ಅದನ್ನು ನೋಡಿಯೂ ಇಲ್ಲ,” ಎಂದು ಹೇಳಿದ್ದಾರೆ.

ಈ ವಿಷಯವನ್ನು ಮೊದಲು ಮುನ್ನಲೆಗೆ ತಂದ ‘ಜಮ್ಮು ಮತ್ತು ಕಾಶ್ಮೀರ ಪೀಪಲ್ಸ್ ಫೋರಂ’ (JKPF) ಎಂಬ ನಾಗರಿಕ ಸಂಘಟನೆಯು, ಈ ಪುಸ್ತಕವು ಹುತಾತ್ಮರ ಕುಟುಂಬಗಳಿಗೆ ಮಾಡಿದ ದ್ರೋಹವಾಗಿದೆ ಎಂದು ಕರೆದಿದ್ದು, ಪುಸ್ತಕವನ್ನು ತಕ್ಷಣವೇ ನಿಷೇಧಿಸಬೇಕು ಮತ್ತು ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದೆ.

“ರಕ್ತಸಿಕ್ತ ಇತಿಹಾಸ ಹೊಂದಿರುವ ಮಕ್ಬೂಲ್ ಭಟ್ ಅವರಂತಹ ಭಯೋತ್ಪಾದಕರನ್ನು ವೈಭವೀಕರಿಸುವ ಮೂಲಕ, ಇಷ್ಟು ವರ್ಷಗಳ ಕಾಲ ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆಯ ವಿರುದ್ಧ ಹೋರಾಡಿ ಪ್ರಾಣತ್ಯಾಗ ಮಾಡಿದ ಹುತಾತ್ಮರ ಕುಟುಂಬಗಳ ಗಾಯದ ಮೇಲೆ ಉಪ್ಪು ಸವರಿದಂತಾಗಿದೆ,” ಎಂದು ಜೆಕೆ ಪೀಪಲ್ಸ್ ಫೋರಂ ಸದಸ್ಯ ದೀಪಕ್ ಕಪೂರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಬಕ್ರೀದ್ ದಿನ ವಿಶಾಲ್ ಆಗಿ ಮತಾಂತರಗೊಂಡ ಬಿಲಾಲ್! ಮುಸ್ಲಿಂ ಧರ್ಮ ತ್ಯಜಿಸಿ ಹಿಂದೂ ಧರ್ಮ ಸ್ವೀಕರಿಸಿ ರಾಮಚರಿತ ಮಾನಸ ಪಠಣ!

ಇಸ್ಲಾಂ ಧರ್ಮದ ಪವಿತ್ರ ಹಬ್ಬವಾದ ಬಕ್ರೀದ್ ಆಚರಣೆಯಂದೇ ಬಿಲಾಲ್ ಎಂಬ ಮುಸ್ಲಿಂ ಯುವಕ ಹಿಂದೂ…