tamanvi
ಅಪರಾಧ

ವಿದ್ಯುತ್ ಶಾಕ್‌’ಗೆ ವಿದ್ಯಾರ್ಥಿ ಬಲಿ: ಶವಕ್ಕೆ ಕಲ್ಲು ಕಟ್ಟಿ ಕೆರೆಗೆಸೆದ ಸ್ನೇಹಿತರು!!

ಈ ಸುದ್ದಿಯನ್ನು ಶೇರ್ ಮಾಡಿ

ಹೊಸ ಬಟ್ಟೆ ಖರೀದಿಗೆಂದು ಹೋದ ಬಾಲಕ ವಿದ್ಯುತ್ ಶಾಕ್’ಗೆ ಬಲಿಯಾಗಿದ್ದು, ಬಾಲಕನ ಶವಕ್ಕೆ ಕಲ್ಲು ಕಟ್ಟಿ ಕೆರೆಗೆಸೆದ ಘಟನೆ ರಾಯಚೂರಿನ ಲಿಂಗಸೂಗೂರಿನಲ್ಲಿ ನಡೆದಿದೆ.

ಮೃತ ಬಾಲಕನನ್ನು ಗುಂಡಸಾಗರ ಗ್ರಾಮದ ಕಾರ್ತಿಕ್ (15 ವ.) ಎಂದು ಗುರುತಿಸಲಾಗಿದೆ.

ಶಾಲೆಯಲ್ಲಿ 10ನೇ ತರಗತಿ ವಿದ್ಯಾರ್ಥಿಗಳಿಗೆ ಬಿಳ್ಕೋಡುಗೆ ಸಮಾರಂಭ ಆಯೋಜಿಸಲಾಗಿತ್ತು. ಈ ಹಿನ್ನೆಲೆ ಕಾರ್ಯಕ್ರಮಕ್ಕೆ ಹೊಸಬಟ್ಟೆ ತರುವುದಕ್ಕೆ ತನ್ನ ಇಬ್ಬರು 10ನೇ ತರಗತಿಯ ಸ್ನೇಹಿತರ ಜೊತೆಗೆ 9ನೇ ತರಗತಿಯಲ್ಲಿ ಓದುತ್ತಿದ್ದ ಕಾರ್ತಿಕ್ ಕೂಡ ಹೋಗಿದ್ದರು. ದಾರಿ ಮಧ್ಯೆ ಬಾಯಾರಿಕೆಯಾಗಿದ್ದು, ಬಾವಿಯಲ್ಲಿ ನೀರು ಕುಡಿಯಲು ಹೋದಾಗ ಕಾರ್ತಿಕ್‌ಗೆ ಕರೆಂಟ್ ಶಾಕ್ ತಗುಲಿದ್ದು, ಕಾರ್ತಿಕ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಕಾರ್ತಿಕ್ ಸಾವಿನಿಂದ ಭಯಗೊಂಡ ಸ್ನೇಹಿತರು ಈ ವಿಚಾರವನ್ನು ಯಾರಿಗೂ ತಿಳಿಸದೇ ಸಾವಿನ ಆರೋಪದಿಂದ ತಪ್ಪಿಸಿಕೊಳ್ಳಲು ಗೋಣಿ ಚೀಲದಲ್ಲಿ ಕಾರ್ತಿಕ್ ಶವ ಹಾಕಿ ಸಾಗಿಸಿದ್ದಾರೆ. ಬೈಕ್‌ನಲ್ಲಿ ಶವ ತೆಗೆದುಕೊಂಡು ಕರಡಕಲ್ ಕೆರೆಯಲ್ಲಿ ‌ಕಾರ್ತಿಕ್‌ ಶವಕ್ಕೆ ಕಲ್ಲು ಕಟ್ಟಿ ಎಸೆದು ಅಲ್ಲಿಂದ ಎಸ್ಕೇಪ್ ಆಗಿದ್ದಾರೆ. ಆ ಬಳಿಕ ಕಾರ್ತಿಕ್ ಸ್ನೇಹಿತರು ಗ್ರಾಮಕ್ಕೆ ತೆರಳಿ ಯಾರಿಗೂ ವಿಚಾರ ತಿಳಿಸದೇ ಸುಮ್ಮನೇ ಕುಳಿತಿದ್ದಾರೆ.

ಇತ್ತ ರಾತ್ರಿಯಾದರೂ ಕಾರ್ತಿಕ್ ಮನೆಗೆ ಬಾರದೇ ಹೋದಾಗ ಕಾರ್ತಿಕ್ ಪೋಷಕರು ಮಗನಿಗಾಗಿ ಹುಡುಕಾಟ ನಡೆಸಿದ್ದು, ಕಾರ್ತಿಕ್‌ನನ್ನು ಜೊತೆಗೆ ಕರೆದೊಯ್ದು ಆತನ ಇಬ್ಬರು ಸ್ನೇಹಿತರ ಬಳಿ ಒತ್ತಡ ಹಾಕಿ ವಿಚಾರಿಸಿದಾಗ ಬಾಲಕರು ಸತ್ಯ ಬಾಯ್ಬಿಟ್ಟಿದ್ದಾರೆ. ಕೂಡಲೇ ಇಬ್ಬರನ್ನ ಗ್ರಾಮಸ್ಥರು ಪೊಲೀಸರಿಗೆ ಒಪ್ಪಿಸಿದ್ದಾರೆ.

ಈ ಮಾಹಿತಿ ತಿಳಿದು ಕರಡಕಲ್ ಕೆರೆ ಬಳಿ ಪೊಲೀಸರು ಭೇಟಿ ನೀಡಿದ್ದು, ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಶವಕ್ಕಾಗಿ ಕರೆಯಲ್ಲಿ ಹುಡುಕಾಟ ನಡೆಸಿದ್ದಾರೆ. ನಂತರ ಕರೆಯಲ್ಲಿ ಗೋಣಿ ಚೀಲದಲ್ಲಿ ಕಾರ್ತಿಕ್ ಶವ ಪತ್ತೆಯಾಗಿದೆ. ಸ್ಥಳಕ್ಕೆ ರಾಯಚೂರು ಎಸ್ ಪಿ ಅರುಣಾಂಗ್ಷು ಗಿರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಘಟನೆ ಸಂಬಂಧಿಸಿದಂತೆ ಲಿಂಗಸೂಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಮನೆಗೆ ಬಿಡುವುದಾಗಿ ಬೈಕ್‌ನಲ್ಲಿ ಕರೆತಂದು ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ಆರೋಪ: ಪೋಕ್ಸೋ ಪ್ರಕರಣ ದಾಖಲು

ಮಂಗಳೂರು: ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಅಪ್ರಾಪ್ತ ಬಾಲಕಿಯನ್ನು ಮನೆಗೆ ಬಿಡುವುದಾಗಿ…

1 of 119