tamanvi
ಶಿಕ್ಷಣ

ನೆಲ್ಲಿಕಟ್ಟೆ ಅಂಬಿಕಾ ಪದವಿ ಪೂರ್ವ ವಿದ್ಯಾಲಯದಲ್ಲಿ ಪೋಷಕರ ಸಭೆ | ವಿದ್ಯಾರ್ಥಿಗಳು ದೇಶಕ್ಕೆ ಮಾದರಿಯಾಗಬೇಕು: ಸುಬ್ರಮಣ್ಯ ನಟ್ಟೋಜ

D_shiva_bhat

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಶಿಕ್ಷಣ ವ್ಯವಸ್ಥೆಯಲ್ಲಿ ಶಿಸ್ತು, ಸಂಯಮ ಅತೀ ಮುಖ್ಯ. ಶಿಕ್ಷಣ ಪಡೆದ ವ್ಯಕ್ತಿ ಸಮಾಜದಲ್ಲಿ ಗುರುತಿಸುವಂತಾಗಬೇಕು. ಸಮಾಜಕ್ಕೆ ವಿಶೇಷ ರೀತಿಯಲ್ಲಿ ಕೊಡುಗೆ ನೀಡುವುದರ ಮೂಲಕ ದೇಶಕ್ಕೆ ಮಾದರಿ ವ್ಯಕ್ತಿಯಾಗಿ ಬೆಳೆಯಬೇಕು ಎಂದು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಪ್ರವರ್ತಿತ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಮಣ್ಯ ನಟ್ಟೋಜ ತಿಳಿಸಿದರು.

maithri

ಅವರು ನೆಲ್ಲಿಕಟ್ಟೆಯ ಅಂಬಿಕಾ ಪದವಿ ಪೂರ್ವ ವಿದ್ಯಾಲಯದಲ್ಲಿ ಶನಿವಾರ ನಡೆದ ಪೋಷಕರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಶಿಕ್ಷಣದಲ್ಲಿ ಎಲ್ಲರಿಗೂ ಸಮಾನವಾದ ಅವಕಾಶಗಳು ಲಭಿಸಬೇಕು. ಶಿಕ್ಷಣ ಎಂದರೆ ಕಲಿಕೆ ಮಾತ್ರವಲ್ಲ ಹಾಗಾಗಿಯೇ ಅಂಬಿಕಾದಲ್ಲಿ ಶಿಕ್ಷಣದ ಜೊತೆಗೆ ಯೋಗವನ್ನು ಕೂಡ ಪರಿಚಯಿಸುತ್ತಿದೆ. ಯೋಗ, ಧ್ಯಾನ ಪ್ರಾಣಾಯಾಮ ಮಾಡುವುದರ ಮೂಲಕ ಆತ್ಮವಿಶ್ವಾಸಗಳನ್ನು ಹೆಚ್ಚಿಸಿಕೊಳ್ಳುವುದಕ್ಕೆ ಸಾಧ್ಯವಿದೆ. ಮಾನಸಿಕವಾದ ಒತ್ತಡವನ್ನು ನಿವಾರಿಸಲು ಸಾಧ್ಯವಿದೆ. ಎಂದು ನುಡಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶೈಕ್ಷಣಿಕ ವರ್ಷದ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅವಿನಾಶ್ ಕೊಡೆಂಕಿರಿ ಮಾತನಾಡಿ ಪದವಿಪೂರ್ವ ಶಿಕ್ಷಣವೆಂದರೆ ಅದು ಜೀವನದ ಅತಿ ಮುಖ್ಯವಾದ ಸಮಯ ಮಾತ್ರವಲ್ಲದೆ  ತಾರುಣ್ಯದ ಸಮಯ ಹಾಗೂ ವ್ಯಕ್ತಿಯು ಬದುಕಿನಲ್ಲಿ ತಳಮಳಗೊಳ್ಳುವ ಸಮಯ ಅಲ್ಲದೆ ಭಾವನಾತ್ಮಕ ಗೊಂದಲಗಳನ್ನು ಉಂಟುಮಾಡುವ ಸಮಯ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಪೋಷಕರು ಹಾಗೆ ಉಪನ್ಯಾಸಕರು ಸರಿಯಾದ ಮಾರ್ಗದರ್ಶನವನ್ನು ನೀಡಿದಲ್ಲಿ ಅವರು ಉತ್ತಮ ನಾಗರಿಕರಾಗಿ ಬೆಳಗಲು ಸಾಧ್ಯ ಎಂದರಲ್ಲದೆ ಮನೆಯಲ್ಲಿ ಪೋಷಕರು ತಮ್ಮ ಮಕ್ಕಳ ಜೊತೆ ಸಂವಾದ, ಸಂವಹನ ಮಾಡುವುದರ ಮೂಲಕ ಕಲಿಕೆಯಲ್ಲಿ ಸ್ಫೂರ್ತಿ ತುಂಬುವ ಕೆಲಸ ಮಾಡಬೇಕು ಎಂದು ಅಭಿಪ್ರಾಯಿಸಿದರು.

ಪ್ರಾಂಶುಪಾಲ ಸತ್ಯಜಿತ್ ಉಪಾಧ್ಯಾಯ ಶೈಕ್ಷಣಿಕ ವರ್ಷದ ಕಾರ್ಯ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು. ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ರಾಜಶ್ರೀ ಎಸ್ ನಟ್ಟೋಜ ಉಪಸ್ಥಿತರಿದ್ದರು. ಉಪ ಪ್ರಾಂಶುಪಾಲೆ ವಿನುತಾ ಸಾಲೆ ಹಾಗೂ ವಿದ್ಯಾಲಯದ ಎಲ್ಲಾ ಉಪನ್ಯಾಸಕರು ಹಾಜರಿದ್ದರು. ಸಂಸ್ಥೆಯ ಕನ್ನಡ ಉಪನ್ಯಾಸಕ ಸತೀಶ್ ಇರ್ದೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಬ್ಯಾಂಕ್ ಆಫ್ ಬರೋಡದಲ್ಲಿ ಬ್ಯಾಂಕಿಂಗ್ ಅಸಿಸ್ಟೆಂಟ್ ಆಗಿ ಆಯ್ಕೆಯಾದ ವಿದ್ಯಾಮಾತಾ ಅಕಾಡೆಮಿ ವಿದ್ಯಾರ್ಥಿನಿ ಜಯಪ್ರಭಾ ಕೆ

ಪುತ್ತೂರು: ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಯಲ್ಲಿ ನಿರಂತರ ಯಶಸ್ಸು ದಾಖಲಿಸುತ್ತಿರುವ…