tamanvi
ಸ್ಥಳೀಯ

ಕಲ್ಲರ್ಪೆಯಲ್ಲಿ ಸಂಜೀವಿನಿ ಒಕ್ಕೂಟದ ಮಾಸಿಕ ಸಂತೆ | ಸಂತೆಗೆ ಆಗಮಿಸಿದೆ ಮಹಿಳೆಯರೇ ತಯಾರಿಸಿದ ಗೃಹೋಪಯೋಗಿ ಉತ್ಪನ್ನಗಳು

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ತಾಲೂಕು ಸಂಜೀವಿನಿ ಒಕ್ಕೂಟದ ಮಾಸಿಕ ಸಂತೆ ಬುಧವಾರ ಆರ್ಯಾಪು ಗ್ರಾಮದ ಕಲ್ಲರ್ಪೆ ಬಸ್ ನಿಲ್ದಾಣ ಬಳಿ ನಡೆಯಿತು.

ಇದೇ ಮೊದಲ ಬಾರಿಗೆ ಕಲ್ಲರ್ಪೆಯಲ್ಲಿ ಮಾಸಿಕ ಸಂತೆ ಆಯೋಜಿಸಿದ್ದು, ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ನೂತನವಾಗಿ ನಿರ್ಮಾಣಗೊಂಡ ಕಲ್ಲರ್ಪೆ ಬಸ್ ನಿಲ್ದಾಣದ ಮುಂಭಾಗದಲ್ಲಿ ಸಂತೆ ಆಯೋಜಿಸಲಾಗಿದೆ.

ಸಂತೆಯಲ್ಲಿ ಒಕ್ಕೂಟದ ಮಹಿಳೆಯರೇ ಉತ್ಪಾದಿಸಿದ ಗೃಹೋಪಯೋಗಿ ಉತ್ಪನ್ನಗಳನ್ನು ಮಾರಾಟಕ್ಕೆ ಇಡಲಾಗಿದೆ. ನೈಸರ್ಗಿಕ ಉತ್ಪನ್ನಗಳೇ ಇವಾಗಿದ್ದು, ಬ್ಯಾಗ್, ಹೇರ್ ಆಯಿಲ್, ದೀಪದ ಬತ್ತಿ, ತರಕಾರಿಗಳು, ಹಲಸಿನ ಸೊಳೆ, ಬಟ್ಟೆಗಳು, ಮಿಲ್ಲೆಟ್ಸ್, ಡ್ರೈ ಫ್ರುಟ್ಸ್, ತೆಂಗಿನಕಾಯಿ, ಹಪ್ಪಳ, ಸಂಡಿಗೆ, ಹಸುವಿನ ತುಪ್ಪ, ಜೇನು ತುಪ್ಪ, ನಿಪ್ಪಟ್ಟು, ಚಕ್ಕುಲಿ, ಅಕ್ರೋಟು, ಮಲ್ಲಿಗೆ ಗಿಡ, ವೀಳ್ಯದೆಲೆ, ಅನಾನಸು ಮೊದಲಾದವನ್ನು ಇಲ್ಲಿ ಮಾರಾಟಕ್ಕೆ ಇಡಲಾಗಿದೆ.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಪುತ್ತೂರು: ಪ್ರೆಸ್ ಕ್ಲಬ್ ಅವರಣದಲ್ಲಿ ಶಾಸಕರ ಬೆಂಬಲಿಗರಿಂದ ಹಕೀಂ ಕೂರ್ನಡ್ಕ ಪ್ರೆಸ್‌ಮೀಟ್‌ ತಡೆ ಯತ್ನ ..!!

ಪುತ್ತೂರು: ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ವಿರುದ್ಧ ಪ್ರೆಸ್‌ಮೀಟ್ ನಡೆಸಲು ಆಗಮಿಸಿದ್ದ…

1 of 134