tamanvi
ಅಪರಾಧ

ಬಸ್ ಸಿಗದೇ ಶಾಸಕರ ಕಚೇರಿಯಲ್ಲಿ ತಂಗಲು ತೆರಳಿದ ವ್ಯಕ್ತಿ!! ಅನುಮಾನಾಸ್ಪದ ವ್ಯಕ್ತಿಯೆಂದು ಪೊಲೀಸ್ ವಶಕ್ಕೆ!!

D_shiva_bhat

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಬಸ್ ಸಿಗಲಿಲ್ಲವೆಂದು ಶಾಸಕ ಅಶೋಕ್ ಕುಮಾರ್ ರೈ ಅವರ ಕಚೇರಿ ಬಳಿ ತಂಗಲು ತೆರಳಿದ್ದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡ ಘಟನೆ ಮೇ 11ರಂದು ರಾತ್ರಿ ನಡೆದಿದೆ.

maithri

ವ್ಯಕ್ತಿಯನ್ನು ನೆಟ್ಟಣಿಗೆ ಮುಡ್ನೂರಿನವರು ಎಂದು ಗುರುತಿಸಲಾಗಿದೆ.

ಮೇ 11ರಂದು ರಾತ್ರಿ ನೆಟ್ಟಣಿಗೆ ಮುಡ್ನೂರಿಗೆ ತೆರಳಬೇಕಿದ್ದ ಅವರಿಗೆ ಯಾವುದೇ ವಾಹನ ಸಿಕ್ಕಿರಲಿಲ್ಲ. ಪರಿಣಾಮ ಬಸ್ ನಿಲ್ದಾಣದಲ್ಲೇ ಮಲಗಲು ಯತ್ನಿಸಿದ್ದಾರೆ. ಆದರೆ ಇದಕ್ಕೆ ಅಲ್ಲಿ ಅವಕಾಶ ನೀಡಲಿಲ್ಲ. ಕೊನೆಗೆ ಶಾಸಕರ ಕಚೇರಿಗೆ ತೆರಳಿ ತಂಗಲು ಯತ್ನಿಸಿದ್ದಾರೆ. ಅಲ್ಲಿದ್ದ ಕಾರ್ಯಕರ್ತರಿಗೆ ಅನುಮಾನ ಬಂದು ಅವರನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ತಿಳಿದುಬಂದಿದೆ.

ಪೊಲೀಸರು ವಿಚಾರಣೆಗೆ ಒಳಪಡಿಸಿದಾಗ ನೈಜ ವಿಚಾರ ಬೆಳಕಿಗೆ ಬಂದಿದೆ.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

1 of 117