tamanvi
ಟ್ರೆಂಡಿಂಗ್ ನ್ಯೂಸ್

ರಾಷ್ಟ್ರ ಮಟ್ಟದಲ್ಲಿ  ಗಮನ ಸೆಳೆದ ಮುಳಿಯ ಗೋಲ್ಡ್ & ಡೈಮಂಡ್ಸ್ | “Most Preferred Retailer of India – 2026” ಗೌರವಕ್ಕೆ ಭಾಜನ

D_shiva_bhat

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರಿನ ಹೆಮ್ಮೆಯ ಆಭರಣ ಸಂಸ್ಥೆಯಾದ ಮುಳಿಯ ಗೋಲ್ಡ್ ಅಂಡ್ ಡೈಮಂಡ್ ದೇಶದ ಮಟ್ಟದಲ್ಲಿ ಮತ್ತೊಮ್ಮೆ ತನ್ನ ಛಾಪು ಮೂಡಿಸಿದೆ. 

maithri

ಸಂಸ್ಥೆಯ ಅಧ್ಯಕ್ಷರು ಹಾಗೂ ಚೇರ್ಮನ್ ಕೇಶವ ಪ್ರಸಾದ್ ಮುಳಿಯ ಹಾಗೂ ಆಡಳಿತ ನಿರ್ದೇಶಕರಾದ ಕೃಷ್ಣ ನಾರಾಯಣ ಮುಳಿಯ ಅವರ ನೇತೃತ್ವದ ಸಂಸ್ಥೆಗೆ “Most Preferred Retailer of India – 2026” ಎಂಬ ಪ್ರತಿಷ್ಠಿತ ರಾಷ್ಟ್ರೀಯ ಗೌರವ ಲಭಿಸಿದೆ.

Muliya

ಈ ಪ್ರಶಸ್ತಿಯನ್ನು ಆಲ್ ಇಂಡಿಯಾ ಜೆಮ್ ಅಂಡ್ ಜುವೆಲ್ಲರಿ ಡೊಮೆಸ್ಟಿಕ್ ಕೌನ್ಸಿಲ್, ಇಂಡಿಯಾ ಜೆಮ್ ಅಂಡ್ ಜುವೆಲ್ಲರಿ ಶೋ ಹಾಗೂ ಆರ್ಟ್ ಆಫ್ ಜ್ಯುವೆಲ್ಲರಿ ಇವರ ವತಿಯಿಂದ ಪ್ರದಾನಿಸಲಾಗಿದೆ.

ಸುಮಾರು 81 ವರ್ಷಗಳ ಪರಂಪರೆಯ ಮುಳಿಯ  ಇಂದು ಕರ್ನಾಟಕದಾದ್ಯಂತ ಗ್ರಾಹಕರ ವಿಶ್ವಾಸ ಪಡೆದಿದೆ. ಪ್ರಾಮಾಣಿಕತೆ, ಪಾರದರ್ಶಕತೆ ಮತ್ತು ಗ್ರಾಹಕ ಸ್ನೇಹಿ ಸೇವೆಯನ್ನು ಆಧಾರವಾಗಿಟ್ಟುಕೊಂಡು ಸಂಸ್ಥೆ ತನ್ನದೇ ಆದ ಸ್ಥಾನಮಾನವನ್ನು ನಿರ್ಮಿಸಿಕೊಂಡಿದೆ.

ಸಂಸ್ಥೆಯ ಬೆಳವಣಿಗೆಗೆ ಮೂರನೇ ತಲೆಮಾರಿನ  ನೇತೃತ್ವ ವಹಿಸಿದ ಕೇಶವ ಪ್ರಸಾದ್ ಮುಳಿಯ ಮತ್ತು ಕೃಷ್ಣನಾರಾಯಣ ಮುಳಿಯ ಇವರ ಆಧುನಿಕ ಚಿಂತನೆ, ವೃತ್ತಿಪರ ನಿರ್ವಹಣೆ ಮತ್ತು ಗ್ರಾಹಕ ಕೇಂದ್ರಿತ ದೃಷ್ಟಿಕೋನದ ಮೂಲಕ ಎತ್ತರಕ್ಕೆ ಬೆಳೆದು ನಿಂತಿದೆ

ಎಂಬಿಎ ಪದವೀಧರರಾದ ಕೇಶವ ಪ್ರಸಾದ್ ಮುಳಿಯ ಪ್ರಮಾಣಿತ ಜಮಾಲಜಿಸ್ಟ್ ಆಗಿದ್ದಾರೆ.  ಹಾಗೆಯೇ ಇವರ ತಮ್ಮ ಕೃಷ್ಣನಾರಾಯಣ ಮುಳಿಯ, ಎಂಬಿಎ ಫೈನಾನ್ಸ್ ಓದಿದ್ದು ಸಂಸ್ಥೆಯ ವಿಸ್ತರಣೆ ಮತ್ತು ಆಧುನಿಕ ವ್ಯವಸ್ಥಾಪನೆಯಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದಾರೆ.

ಪ್ರಸ್ತುತ  ಮುಳಿಯ ಕರ್ನಾಟಕದ ಪುತ್ತೂರು, ಬೆಂಗಳೂರು, ಮಡಿಕೇರಿ, ಗೋಣಿಕೊಪ್ಪ, ಬೆಳ್ತಂಗಡಿ ಮತ್ತು ವಿವಿಧ ಭಾಗಗಳಲ್ಲಿ ಅನೇಕ ಶೋರೂಮ್‌ಗಳನ್ನು ಹೊಂದಿದ್ದು, ಪುತ್ತೂರಿನಲ್ಲಿರುವ ದಕ್ಷಿಣ ಕನ್ನಡದ ಅತಿದೊಡ್ಡ ಆಭರಣ ಮಳಿಗೆ ಜಿಲ್ಲೆಯ ಅತೀ ದೊಡ್ಡ ಶೋರೂಂ ಆಗಿದ್ದು ಈ  ಮೂಲಕ ಗ್ರಾಹಕರಿಗೆ ಚಿನ್ನ, ವಜ್ರ ಹಾಗೂ ಬೆಳ್ಳಿ ಆಭರಣಗಳ ವಿಶಿಷ್ಟ ಸಂಗ್ರಹವನ್ನು ಒದಗಿಸುತ್ತಿದೆ.

ಈ ರಾಷ್ಟ್ರೀಯ ಮಟ್ಟದ ಗೌರವಕ್ಕೆ ಸಂಸ್ಥೆಯ ಗ್ರಾಹಕರು, ಅಭಿಮಾನಿಗಳು ಹಾಗೂ ವ್ಯಾಪಾರ ವಲಯದಿಂದ ಅಭಿನಂದನೆಗಳ ಮಹಾಪೂರ ಹರಿದುಬಂದಿದೆ.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts