tamanvi
ಧಾರ್ಮಿಕ

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ನೆಕ್ಕರೆಯ ಕೃಷ್ಣಪ್ಪ ಅವರಿಗೆ ವೀಲ್‌ಚೇರ್ ವಿತರಣೆ

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜನಮಂಗಳ ಕಾರ್ಯಕ್ರಮದಡಿ ಆರ್ಯಾಪು ಗ್ರಾಮದ ನೆಕ್ಕರೆ ನಿವಾಸಿ ಕೃಷ್ಣಪ್ಪ ಅವರಿಗೆ ವೀಲ್‌ಚೇರ್ ವಿತರಿಸಲಾಯಿತು.

ಕಳೆದ ಮೂರು ತಿಂಗಳಿನಿಂದ ಸೊಂಟದ ಕೆಳಭಾಗ ದುರ್ಬಲಗೊಂಡು ನಡೆದಾಡಲು ಸಾಧ್ಯವಾಗದಿರುವ ಹಿನ್ನೆಲೆಯಲ್ಲಿ ಕೃಷ್ಣಪ್ಪ ಅವರಿಗೆ ಜನಮಂಗಳ ಕಾರ್ಯಕ್ರಮದಡಿ ವೀಲ್‌ಚೇರ್ ನೀಡಲಾಯಿತು.

ವೀಲ್‌ಚೇರ್ ವಿತರಣಾ ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿಕಟಪೂರ್ವ ಅಧ್ಯಕ್ಷ ಹಾಗೂ ಕುಂಬ್ರ ವಲಯ ಜನಜಾಗೃತಿ ವೇದಿಕೆಯ ಉಪಾಧ್ಯಕ್ಷ ಸಂದೀಪ್ ಆರ್ಯಾಪು, ಒಕ್ಕೂಟದ ನೂತನ ಅಧ್ಯಕ್ಷ ಮೋಹನ ಸಿಂಹವನ, ಮೇಲ್ವಿಚಾರಕ ಶಿವರಾಜ್, ಸೇವಾ ಪ್ರತಿನಿಧಿಗಳಾದ ನಳಿನಾಕ್ಷಿ ಮತ್ತು ಪುಷ್ಪ, ಫಲಾನುಭವಿ ಕೃಷ್ಣಪ್ಪ ಅವರ ಪತ್ನಿ ಲಕ್ಷ್ಮಿ ಉಪಸ್ಥಿತರಿದ್ದರು.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts