ಬೆಳ್ತಂಗಡಿ: ಸೆ.20: ಕರ್ನಾಟಕ ಟಿವಿ ಚಾನೆಲ್ ವತಿಯಿಂದ ‘ಉತ್ತಮ ಶಾಸಕ’ ಪ್ರಶಸ್ತಿಗೆ ಪುರಸ್ಕೃತರಾದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರನ್ನು ಬೆಳ್ತಂಗಡಿ ತಾಲೂಕು ಬ್ರಾಹ್ಮಣ ಮಹಾಸಭಾ ಸಮಾಜದ ವತಿಯಿಂದ ಗೌರವಿಸಲಾಯಿತು.
ಶಾಸಕ ಹರೀಶ್ ಪೂಂಜಾ ಅವರ ಮಿಥಿಲಾ ನಿವಾಸಕ್ಕೆ ಆಗಮಿಸಿದ ಬ್ರಾಹ್ಮಣ ಮಹಾಸಭಾ ಸಮಾಜದ ಬಂಧುಗಳು, ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಅನುವಂಶೀಯ ಮೊಕ್ತೇಸರರಾದ ಶರತ್ ಕೃಷ್ಣ ಪಡ್ವೆಟ್ನಾಯ ಅವರ ನೇತೃತ್ವದಲ್ಲಿ ಗೌರವಾರ್ಪಣೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಗಣ್ಯರು, ಶಾಸಕರಾಗಿ ಹರೀಶ್ ಪೂಂಜಾ ಅವರಿಗೆ ದೊರೆತಿರುವ ‘ಉತ್ತಮ ಶಾಸಕ’ ಪ್ರಶಸ್ತಿಗೆ ಅಭಿನಂದನೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಡಾ. ಪ್ರದೀಪ್ ನಾವೂರು, ಬಿ.ಕೆ. ಧನಂಜಯ ರಾವ್, ಗಿರೀಶ್ ಡೋಂಗ್ರೆ, ಕೇಶವ ಭಟ್ ಅತ್ತಾಜೆ, ಅನಂತ್ ಭಟ್ ಮಚ್ಚಿಮಲೆ, ಯೋಗೀಶ್ ಭಿಡೆ, ಅರುಣ್ ಕುಮಾರ್ ಸೇರಿದಂತೆ ಗಣ್ಯರು ಹಾಗೂ ಬೆಳ್ತಂಗಡಿ ತಾಲೂಕು ಬ್ರಾಹ್ಮಣ ಮಹಾಸಭಾ ಸಮಾಜದ ಬಂಧುಗಳು ಉಪಸ್ಥಿತರಿದ್ದರು.






















